ಕಾಸರಗೋಡು: ದೇಶದ ಸಮಗ್ರ ಅಭಿವೃದ್ದಿ ಗುರಿ ಸಾಧಿಸುವಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗಿದ್ದಲ್ಲಿ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.
ಅವರು ಸೋಮವಾರ ನಗರಸಭಾ ಸಭಾಂಗಣದಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಮಿತಿಯ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿರುವ ಪ್ರಾತಿನಿಧ್ಯ ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ಬದ್ದವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಾದಿಕಾಲಿ ಶಿಹಾಬ್ ತಂಗಲ್ ಅಧ್ಯಕ್ಷತೆ ವಹಿಸಿದ್ದರು. ಶ್ರೇಷ್ಠ ಶೈಕ್ಷಣಿಕ ಚಟುವಟಿಕೆಗಿರುವ ಪ್ರಶಸ್ತಿಯನ್ನು ಡಾ. ಸಿ.ಪಿ ಬಾವಾ ಹಾಜಿ ಯವರಿಗೆ ಮುಖ್ಯಮಂತ್ರಿಯವರು ಪ್ರಧಾನ ಮಾಡಿದರು.
ಜುಬೈರ್ ನೆಲ್ಲಿಕಾಪರಂಬ ಬರೆದ ಪುಸ್ತಕವನ್ನು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು, ಪಿ.ಬಿ ಅಬ್ದುಲ್ ರಜಾಕ್, ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷೆ ಬಲ್ಕಿಸ್ ಬಾನು , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ ಶ್ರೀಧರನ್, ಮಾಜಿ ಸಚಿವ ಸಿ. ಟಿ. ಆಹಾಮ್ಮದಾಲಿ, ಎಂ.ಸಿ ಖಮರುದ್ದೀನ್, ಕರ್ನಾಟಕ ಜಾನಪದ ಪರಿಷತ್ ನ ಗಡಿನಾಡ ಘಟಕ ಅಧ್ಯಕ್ಷ ಕೇಶವ ಪ್ರಸಾದ್ ನಾಣಿತ್ತಿಲು, ಫಾ. ಜೋರ್ಜ್ ಏಳ ಕುನ್ನಲ್, ನಗರಸಭಾ ಅಧ್ಯಕ್ಷೆ ಭೀಫಾತಿಮ್ಮ ಇಬ್ರಾಹಿಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಮುಂಡುಪ್ಪಾರ, ಕಾರ್ಯದರ್ಶಿ ಅಬೂಬಕ್ಕರ್, ಮೆಟ್ರೋ ಮುಹಮ್ಮದ್ ಹಾಜಿ, ಸಿ.ಪಿ ಅಬ್ದುಲ್ಲ, ಪಿ.ಗಂಗಾಧರನ್ ನಾಯರ್, ಕುನ್ಚಾಮು ಹಾಜಿ , ಎ . ಅಬ್ದುಲ್ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು.