ಕಾರ್ಕಳ: ಸಾರ್ವಜನಿಕ ಸ್ಥಳಗಳಿಗೆ ಮಲ,ಮೂತ್ರ ವಿಸರ್ಜಿಸುವುದು ಕಾನೂನತ್ಮಕ ರೂಪದಲ್ಲಿ ಅಪದಾಧವಾಗಿದೆ ಎಂದು ಕಾರ್ಕಳ ಪುರಸಭಾ ಸಾರಿ ಸಾರಿ ಎಚ್ಚರಿಕೆ ನೀಡುತ್ತಿದೆ. ಇದನ್ನೇ ಮುಂದಿಟ್ಟು ಸಾರ್ವಜನಿಕರ ಅವಗಹನೆಗಾಗಿ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಿದೆ. ಇದ್ಯಾವುದಕ್ಕೂ ಕ್ಯಾರೇ ಅನ್ನದೇ ಮಂಗಳವಾರ ಬೆಳಿಗ್ಗೆ ಬಯಲು ಮೂತ್ರ ವಿಸರ್ಜಿಸುತ್ತಿದ್ದ 10ಕ್ಕೂ ಮಿಕ್ಕಿ ಮಂದಿಗೆ ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಅವರು ತಲಾ 100 ದಂಡ ವಸೂಲಿ ನಡೆಸಿದ್ದಾರೆ. ಮಿಕ್ಕವರಿಗೆ ಎಚ್ಚರಿಕೆ ನೀಡಿದ್ದಾರೆ.
ಕಾರ್ಕಳದ ಹಳೆ ಬಸ್ ನಿಲ್ದಾಣ ಬಳಿಯಲ್ಲಿದ್ದ ಅಪಾಯಕಾರಿ ಶೌಚಾಲಯ ತೆರವುಗೊಳಿಸಿದ್ದು ಇದರ ಆಸುಪಾಸುಗಳಲ್ಲಿ ಬಯಲು ದೇಹಭಾದೆಯಿಂದಾಗಿ ಪರಿಸರದಲ್ಲಿ ಗಬ್ಬುನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿತ್ತು. ಈ ಹಿನ್ನಲ್ಲೆಯಲ್ಲಿ ಖುದ್ದಾಗಿ ಪುರಸಭಾ ಮುಖ್ಯಾಧಿಕಾರಿ ಈ ಕಾರ್ಯಚರಣೆ ಕೈಗೊಂಡಿದ್ದಾರೆ.
ಇದರ ಅನತಿ ದೂರದಲ್ಲಿ ಮದ್ಯದಂಗಡಿ ಇದ್ದು ಹೆಚ್ಚಾಗಿ ಕುಡುಕರು ಮದ್ಯದ ನಶೆಯಲ್ಲಿ ಬಯಲಿನಲ್ಲಿ ದೇಹ ಭಾದೆ ತೀರಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಚರಣೆ ನಡೆದಿದೆಯಾದರೂ ಬಹುತೇಕ ಮಂದಿ ಮದ್ಯದ ನಶೆಯಲ್ಲಿದ್ದು ಅವರ ಕಿಸೆಯಲ್ಲಿ ಚಿಕ್ಕಾಸು ಇಲ್ಲದೇ ಇರುವುದರಿಂದ ಅವರಿಗೆ ಎಚ್ಚರಿಕೆ ನೀಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ಶುಚಿತ್ವ ಇಲ್ಲದ ಸಾರ್ವಜನಿಕ ಶೌಚಾಲಯ!
ನಗರದ ವಿಸ್ತೃತ ಬಸ್ ನಿಲ್ದಾಣದಲ್ಲಿ ಇರುವಂತಹ ಸಾರ್ವಜನಿಕ ಶೌಚಾಲಯ ಸ್ಥಿತಿ-ಗತಿ ಇದಕ್ಕಿಂತ ಅಪಾಯಕಾರಿಯಾಗಿದೆ. ಇದರರೊಳಗೆ ಪ್ರವೇಶಿಸಬೇಕಾದರೆ ಮೂಗಿಗೆ ಕೈ ಹಿಡಿಯಲೇ ಬೇಕಾದ ಪರಿಸ್ಥಿತಿ. ಶುಚತ್ವ ಪರಿಪಾಲನೆ ಇಲ್ಲಿಲ್ಲ. ಪಾಚಿ ಕಟ್ಟಿದ ಮೂತ್ರ ವಿಸರ್ಜನೆಯ ಕೇಂದ್ರ. ಪಾಯಿಖಾನೆಯೊಳಗೆ ಕುಡಿದು ಎಸೆದ ಮದ್ಯದ ಬಾಟಲ್ ಗಳು ಅವುಗಳನ್ನು ತೆರವು ಕಾರ್ಯ ನಡೆದಿಲ್ಲ. ವಿದ್ಯುತ್ ದೀಪಗಳೇ ಇಲ್ಲದೇ ಅದರೊಳಗೆ ಗುಪ್ತ ಚಟುವಟಿಕೆಗಳು ನಡೆದರೂ ಹೊರ ಜಗತ್ತಿಗೆ ಬಾರದು.
ಇಂತಹ ವಲಯದಲ್ಲಿ ಅದರ ಸಿಬ್ಬಂದಿಗಳು ವಾಸ ಮಾಡುತ್ತಿದ್ದಾರೆ. ಸುಲಭ್ ಸಂಸ್ಥೆ ಸಾರ್ವಜನಿಕ ಸೇವೆಯ ಹೆಸರಿನಲ್ಲಿ ಹಲವು ವರ್ಷಗಳಿಂದ ಇಂತಹ ದಂಧೆ ಮೂಲಕ ದೇಹ ಭಾದೆ ತೀರಿಸುವವರ ಕಿಸೆಗೆ ಕನ್ನ ಹಾಕುವ ಕೆಲಸ ಮಾಡುತ್ತಿದೆ. ಅಲ್ಲದೇ ತನ್ನ ಸಂಸ್ಥೆಯಲ್ಲಿ ದುಡಿಯುತ್ತಿರುವ ಕೆಲಸಗಾರರನ್ನು ಅಮಾನವೀಯ ರೀತಿಯಲ್ಲಿ ಸಾರ್ಜಜನಿಕ ಉಪಯೋಗದ ಶೌಚಾಲಯದೊಳಗೆ ವಾಸಕ್ಕೆ ಅವಕಾಶ ಕಲ್ಪಸಿದೆ. ಇದರ ಪರಿಸ್ಥಿತಿಯನ್ನು ಅರಿತುಕೊಳ್ಳು ಖುದ್ದಾಗಿ ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಅವರು ಇದೇ ಸಂದರ್ಭದಲ್ಲಿ ಅಲ್ಲೂ ಭೇಟಿ ನೀಡಿ ಸಮಗ್ರ ರೀತಿಯಲ್ಲಿ ಪರಿಶೀಲನೆ ನಡೆದಿದ್ದರು. ಶುಚಿತ್ವ ಪರಿಪಾಲನೆ ಮಾಡದೇ ಹೋದಲ್ಲಿ ಬೀಗ ಜಡಿಯಬೇಕಾದಿತ್ತೆಂಬ ಎಚ್ಚರಿಕೆಯನ್ನು ಇದೇ ಸಂದರ್ಭದಲ್ಲಿ ನೀಡಿದ್ದರು.
ಸಾರ್ವಜನಿಕ ಶೌಚಾಲಯದ ಸ್ಥಿತಿ-ಗತಿಯಿಂದಾಗಿ ವಿಸ್ತೃತ ಬಸ್ ನಿಲ್ದಾಣ ಗಬ್ಬುನಾತ ಬೀರುತ್ತಿತ್ತು. ಇದೇ ಕಾರಣವನ್ನು ಮುಂದಿಟ್ಟು ಬಸ್ ಏಜೆಂಟ್ ಸುರೇಶ್ ದೇವಾಡಿಗ ಸಮಾಜಸೇವೆಗೆ ಮುಂದಾಗಿ ಸುಲಭ್ ಸಾರ್ವಜನಿಕ ಸೇವಾ ಸಂಸ್ಥೆಯ ಸಿಬ್ಬಂದಿಗಳನ್ನು ತರಾಟಗೆ ತೆಗೆದುಕೊಂಡಿದ್ದರು.
ಇದೇ ಕಾರಣವನ್ನು ಮುಂದಿಟ್ಟು ಆ ಸಂಸ್ಥೆಯ ಸಂಬಂಧಪಟ್ಟವರು ಪೊಲೀಸರಿಗೆ ದೂರು ನೀಡಿರುವ ಘಟನಾವಳಿ ನಡೆದಿತ್ತು. ಪ್ರಕರಣ ವಿಚಾರಣೆಗೆಂದು ಅಲ್ಲಿಗೆ ಬಂದಿದ್ದ ಪೊಲೀಸರಿಗೆ ಸಾರ್ವಜನಿಕ ಶೌಚಾಲಯದ ಕಡೆಗೆ ಹೆಜ್ಜೆ ಹಾಕಿರುವಾಗಲೇ ಅದರ ನಿಜ ಬಣ್ಣ ಬಯಲಿಗೆ ಬರಲು ಕಾರಣವಾಗಿತ್ತು.