ಕಾರ್ಕಳ: ಕತ್ತಲೆಯಿಂದ ಬೆಳಕಿನಡೆಗೆ ಇಂತಹ ವಿನೂತನ ಕಾರ್ಯಕ್ರಮ ಆಯೋಜಿಸಿರುವ ಮೂಲಕ 10ಕ್ಕೂ ಮಿಕ್ಕಿ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿ ಸಮಾಜಿಕ ಚಟುವಟಿಕೆಗೆ ಮುಂದಾಗಿರುವುದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ,ಕಾರ್ಕಳ.
ಸಂಘದ ಅಧ್ಯಕ್ಷ ರಿಚಾರ್ಡ್ ಮಿರಾಂದ ನೇತೃತ್ವದಲ್ಲಿ ಅನುಷ್ಠಾನಗೊಂಡ ಯೋಜನೆಯನ್ನು ಅವರೇ ಉದ್ಘಾಟಿಸುವ ಮೂಲಕ ಸಂಘವು ಸಮಾಜಕ್ಕೆ ಮಾದರಿ ಎನ್ನಿಸಿ ತೋರ್ಪಡಿಸಿದ್ದಾರೆ. ಹತ್ತು ಫಲಾನುಭವಿ ಕುಟುಂಬಗಳ ಮನೆಗೆ ತೆರಳಿ ಸುಮಾರು ಒಂದು ಲಕ್ಷ ಅಂದಾಜು ವೆಚ್ಚದಲ್ಲಿ ವಿದ್ಯುತ್ ಪರಿಕರಗಳನ್ನು ಒದಗಿಸಿ ಸಂಪರ್ಕ ಕಲ್ಪಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅನುಮತಿ ಪಡೆದ ಉಡುಪಿ ವಿದ್ಯುತ್ ಗುತ್ತಿಗೆದಾರರ ಜಿಲ್ಲಾ ಅಧ್ಯಕ್ಷ ನಾಗರಾಜ ರಾವ್, ಜಿಲ್ಲಾ ಜೊತೆ ಕಾರ್ಯದರ್ಶಿ ರಮಾನಂದ ಪೂಜಾರಿ ಕಾರ್ಕಳ, ಸಂಘದ ಮಾಜಿ ಅಧ್ಯಕ್ಷ ಶಂಕರ್ ದೇವಾಡಿಗ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕೋಶಾಧಿಕಾರಿ ಅಶೋಕ್ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಅನಿಲ್ ಎಸ್.ಪೂಜಾರಿ ನಿರೂಪಿಸಿ ವಂದಿಸಿದರು. ಸಂಘದ ಸದಸ್ಯರುಗಳಾದ ರಘುರಾಮ ಶೆಟ್ಟಿ, ಭಾಸ್ಕರ್ ಆಚಾರ್ಯ, ರತ್ನವರ್ಮ ಅಜ್ರಿ, ಉದಯಕುಮಾರ್, ಮಂಝರ್ ಅಹಮ್ಮದ್,ಪ್ರತೀಕ್ ಶೆಟ್ಟಿ, ಸೈಮನ್ ಡಿಸೋಜಾ, ಸದಾನಂದ ಸಲ್ಯಾನ್ ಸಹಕರಿಸಿದರು.