ಮಂಗಳೂರು: ನಗರದ ನ್ಯಾಯಲಯಕ್ಕೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬದ ಅಡಿಯಲ್ಲಿ ವಾಮಚಾರಾ ನಡೆದಿರಬಹುದಾದ ಶಂಕೆ ಸಾವ೯ಜನಿಕರು ವ್ಯಕ್ತಪಡಿಸಿದ್ದಾರೆ.
ಇಂದು ಬೆಳ್ಳಿಗ್ಗೆ ಸಮಾರು ಹತ್ತು ಘಂಟೆಯ ಹೊತ್ತಿಗೆ ನ್ಯಾಯಲಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬದ ಅಡಿಯಲ್ಲಿ ತೆಂಗಿನ ಕಾಯಿ ಒಡೆದು ಬಾಳೆಹಣ್ಣುಗಳನ್ನು ಸುಳಿದು ವಿವಿಧ ಬಣ್ಣದ ಹೂಗಳನ್ನು ಹಾಕಿ ಅದರ ಮೇಲೆ ಅರಸಿನ ಕುಂಕಮವನ್ನು ಹಾಕಿ ಅಗರಬತ್ತಿಯನ್ನು ಉರಿಸಿಟ್ಟದ್ದಾರೆ. ಇದನ್ನು ಕಂಡ ಸಾವ೯ಜಕರು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಕೂಡಲೇ ಆಗಮಿಸಿ ದ ಇಂಟಲಿಜನ್ಸಿ ಪೋಲಿಸರು ಇದನ್ನು ತೆರವುಗೂಳಿಸಿದ್ದಾರೆ.