News Kannada
Friday, July 01 2022

ಕರಾವಳಿ

ರಸ್ತೆ, ಚರಂಡಿ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ - 1 min read

Photo Credit :

ರಸ್ತೆ, ಚರಂಡಿ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

ಸುಳ್ಯ: ಸುಳ್ಯ ಗಾಂಧೀನಗರದ ಗುರುಂಪು ಎಂಬಲ್ಲಿ ರಸ್ತೆ ಮತ್ತು ಚರಂಡಿ ದುರಸ್ಥಿಗೆ ಆಗ್ರಹಿಸಿ ನಾಗರಿಕರು ಪ್ರತಿಭಟನೆ ನಡೆಸಿದರು.  


ಗಾಂಧೀನಗರದಿಂದ ನಾಗಪಟ್ಟಣ ಸೇತುವೆಯ ಬಳಿಯವರೆಗೆ ಹೊಂಡಗುಂಡಿಗಳಿಂದ ತುಂಬಿ ಎಕ್ಕುಟ್ಟಿ ಹೋಗಿರುವ ರಸ್ತೆಯನ್ನು ದುರಸ್ಥಿಪಡಿಸಬೇಕು, ಚರಂಡಿಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಲಾಯಿತು. ನಗರದ 12 ಮತ್ತು 14 ನೇ ವಾರ್ಡ್ ಗಳಲ್ಲಿ ಯಾವುದೇ ಮೂಲಭೂತ ಸೌಕರ್ಯ ಒದಗಿಸುವುದಿಲ್ಲ. ಚರಂಡಿ ದುರಸ್ಥಿ ಮಾಡದೆ ಕೆಸರು, ತ್ಯಾಜ್ಯಗಳು ಅಲ್ಲಲ್ಲಿ ಕೊಳೆಯುತಿದೆ. ಕೋಳಿ ತ್ಯಾಜ್ಯ, ಮಲಿನ ನೀರು ರಸ್ತೆ ಬದಿಯಲ್ಲಿಯೇ ಹರಿದು ಪಯಸ್ವಿನಿ ನದಿಗೆ ಸೇರುತಿದೆ. ಇಲ್ಲಿಯ ಚರಂಡಿ ದುರಸ್ಥಿ ಮತ್ತು ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಹಲವು ಬಾರಿ ಬೇಡಿಕೆಯಿಟ್ಟಿದ್ದರೂ ಈ ವಾರ್ಡ್ ಗಳ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.  ಆಮ್ ಆದ್ಮಿ ಪಕ್ಷದ ಸಹಕಾರದೊಂದಿಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಅಬ್ದುಲ್ ಬಶೀರ್ ಬಂಡು,  ಸಂಶುದ್ದೀನ್, ಕರೀಂ ಪೈಂಬೆಚ್ಚಾಲ್, ಮುಸ್ತಫ, ಜುನೈದ್, ರಿಯಾಝ್ ಕಟ್ಟೆಕ್ಕಾರ್ಸ್,  ಆಮ್ ಆದ್ಮಿ ಪಕ್ಷದ ರಶೀದ್ ಜಟ್ಟಿಪಳ್ಳ, ಅಶೋಕ್ ಎಡಮಲೆ, ಕೃಷ್ಣಕುಮಾರ್, ರಾಮಕೃಷ್ಣ ಬೀರಮಂಗಲ ಮತ್ತಿತತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪರಿಹರಿಸುವುದಾಗಿ ಅಧ್ಯಕ್ಷರ ಭರವಸೆ:
ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಗಾಂಧೀನಗರ-ಆಲೆಟ್ಟಿ ರಸ್ತೆಯಲ್ಲಿ ಎಕ್ಕುಟಿ ಹೋಗಿರುವ ಭಾಗದ ರಸ್ತೆಯ ದುರಸ್ಥಿಯನ್ನು ಶೀಘ್ರ ಪೂರ್ತಿಗೊಳಿಸುವುದಾಗಿ ತಿಳಿಸಿದ ಅವರು ಮುಂದಿನ ಹಂತದಲ್ಲಿ ಗುರುಂಪು ಭಾಗದಲ್ಲಿ ಒಳಚರಂಡಿ ಯೋಜನೆ ಅನುಷ್ಠಾನ ಮಾಡುವುದಾಗಿ ತಿಳಿಸಿದರು. ಅಧ್ಯಕ್ಷರು ನೀಡಿದ ಭರವಸೆಯ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಇಂಜಿನಿಯರ್   ಶ್ರೀದೇವಿ ಮತ್ತಿತರರು ಉಪಸ್ಥಿತರಿದ್ದರು.

ಗುರುಂಪು ಭಾಗದಲ್ಲಿ ವಿವಿಧ ಕಡೆಗಳಲ್ಲಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಮತ್ತು ಅಧಿಕಾರಿಗಳ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.  ಅಲ್ಲಲ್ಲಿ ಚರಂಡಿಗಳಲ್ಲಿ ಹೂಳು ತುಂಬಿರುವುದು ಮತ್ತು ಅಲ್ಲಲ್ಲಿ ಕೊಳಚೆ ನೀರು ಶೇಖರಗೊಂಡಿರುವುದು ಕಂಡು ಬಂತು. ಗುರುಂಪು ಭಾಗ ನಿಬಿಡ ಜನವಸತಿ ಇರುವ ಪ್ರದೇಶವಾಗಿದ್ದು ಮನೆಗಳ ಎದುರಿನಲ್ಲಿಯೇ ಕೆಸರು ನೀರು ಹರಿಯುತಿದೆ. ಚರಂಡಿಗಳಲ್ಲಿ ಹೂಳು ತುಂಬಿ ನಾರುತ್ತಿದ್ದು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲು ಪ್ರಕಾಶ್ ಹೆಗ್ಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

See also  ಆಡಳಿತ ಚುರುಕುಗೊಳಿಸುವ ಜವಾಬ್ದಾರಿ ಲೋಕಾಯುಕ್ತಗಿದೆ: ನ್ಯಾಯಮೂರ್ತಿ ಪಿ.ವಿಶ್ವನಾಥ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು