ಪುತ್ತೂರು: ಬೊಳುವಾರು ಕರ್ಮಲ ಸಮೀಪ ಮಿನಿ ಕ್ರೈನ್ ಪಲ್ಟಿಯಾಗಿ ರೈಲ್ವೇ ಹಳಿ ಪಕ್ಕಕ್ಕೆ ಬಿದ್ದು ಚಾಲಕ ಮೃತಪಟ್ಟಿರುವ ಘಟನೆ ಮಾ.6ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮುರ ಪ್ರೀಯ ಕ್ರೈನ್ ನ ಚಾಲಕ ಮೊಹಮ್ಮದ್ ಹನೀಫ್(53ವ)ರವರು ಮೃತಪಟ್ಟವರು. ಮೊಹಮ್ಮದ್ ಹನೀಫ್ ರವರು ಮೊಬೈಲ್ ಕ್ರೈನ್ (ಕೆ.ಎ.20 ಎಎ 2763)ರನ್ನು ಚಲಾಯಿಸಿಕೊಂಡು ಮಾ.5ರಂದು ರಾತ್ರಿ ಬೊಳುವಾರು ರಸ್ತೆಯಾಗಿ ಕರ್ಮಲ ಕಡೆ ರೈಲ್ವೇ ಹಳಿಯ ಬದಿಯಲ್ಲಿನ ಎತ್ತರದ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕ್ರೈನ್ ಪಲ್ಟಿಯಾಗಿ ಕೆಳಗೆ ರೈಲ್ವೇ ಹಳಿಯ ಪಕ್ಕಕ್ಕೆ ಬಿದ್ದಿದೆ.
ಘಟನೆಯ ಕುರಿತು ಮಾ.6ರಂದು ಬೆಳಗ್ಗಿನ ಜಾವ ಆ ದಾರಿಯಲ್ಲಿ ಹೋಗುವವರು ಈ ಕುರಿತು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ವೇಳೆ ಚಾಲಕ ಮೃತಪಟ್ಟಿರುವುದು ಗಮನಕ್ಕೆ ಬಂದಿತ್ತು. ರೈಲ್ವೇ ಹಳಿಯ ಪಕ್ಕ ಕ್ರೈನ್ ಪಲ್ಟಿಯಾಗಿರುವುದರಿಂದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಬೇಕಾಗಿ ಬಂದಿದ್ದು, ಮಧ್ಯಾಹ್ನ ವೇಳೆ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಾಜರು ನಡೆಸಿದ್ದರು.