ಬಂಟ್ವಾಳ: ಕಾರು ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಮೊಪೆಡ್ ಸವಾರರಿಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಕಲ್ಲಡ್ಕ ಕಾಂಞಂಗಾಡು ಅಂತರ್ ರಾಜ್ಯ ಹೆದ್ದಾರಿಯ ಪಡಿಬಾಗಿಲು ಸಮೀಪದ ಮೈರ ತಿರುವಿನಲ್ಲಿ ಭಾನುವಾರ ನಡೆದಿದೆ.
ಮೃತರನ್ನು ಬೈಕ್ ಸವಾರ ಕಾಟುಕುಕ್ಕೆಗ್ರಾಮದ ಪಾಂಡಿಗಾಯ ನಿವಾಸಿ ಉಮೇಶ್ ನಾಯ್ಕ (35), ಸಹ ಸವಾರಪುಣಚ ಗ್ರಾಮದ ಚೆಕ್ಕುತ್ತಿ ನಿವಾಸಿ ವಸಂತ ನಾಯ್ಕ(47) ಎಂದು ಗುರುತಿಸಲಾಗಿದ್ದು, ಪುತ್ತೂರು ಕೂರ್ನಡ್ಕ ನಿವಾಸಿ ತಲ್ಲತ್ (30) ಎಂಬರ ವಿರುದ್ದ ವಿಟ್ಲ ಠಾಣೆಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯ ಕುರಿತು ಪ್ರಕರಣ ದಾಖಲಾಗಿದೆ.
ಉಮೇಶ್ ಹಾಗೂ ವಸಂತ ಅವರು ವಾಮಂಜೂರಿನ ಸಂಬಂಧಿಕರ ಮನೆಯಲ್ಲಿ ಶುಭ ಕಾರ್ಯ ಮುಗಿಸಿ ಮತ್ತೆ ಟಿವಿಎಸ್ ಎಕ್ಸ್ಎಲ್ ಮೊಪೆಡ್ ನಲ್ಲಿ ತಮ್ಮ ಮನೆಗೆ ತೆರಳಲು ಸಾರಡ್ಕಕಡೆಗೆ ಹೋಗುತ್ತಿದ್ದ ವೇಳೆ ಮೈರ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ.
ಕಾಸರಗೋಡು ಕಡೆಯಿಂದ 5 ಮಂದಿ ಮಹಿಳೆಯರು ಹಾಗೂ 3 ಮಕ್ಕಳೊಂದಿಗೆ ತಲ್ಲತ್ ಪುತ್ತೂರು ಕಡೆಗೆ ಹೋಗುತ್ತಿದ್ದು, ಮೈರ ಜಂಕ್ಷನ್ ಸಮೀಪದ ಕಿರಿದಾದ ತಿರುವಿನಲ್ಲಿ ಒಳಮುಖವಾಗಿ ಬಲ ಬದಿಯಲ್ಲಿ ಬಂದ ಕಾರು ಮೊಪೆಡ್ ಗೆ ಡಿಕ್ಕಿಹೊಡೆದಿದೆ. ಅಪಘಾತದ ತೀವ್ರತೆಗೆ ಸವಾರ ಸಹಿತವಾಗಿ ಮೊಪೆಡ್ ಅನ್ನುಸುಮಾರು 20 ಅಡಿಯಷ್ಟು ದೂರಕ್ಕೆ ಎಳೆದುಕೊಂಡು ಹೋಗಿದ್ದು, ಸಹ ಸವಾರ ಬೈಕ್ ನಿಂದಪಕ್ಕದಲ್ಲಿದ್ದ 10 ಅಡಿ ಆಳದ ಕಣಿವೆಗೆಎಸೆಯಲ್ಪಟ್ಟಿದ್ದಾರೆ. ಸವಾರನನ್ನುತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕುತ್ತಿಗೆ ಹಾಗೂ ತಲೆತ ಭಾಗಕ್ಕೆ ಗಂಬೀರವಾಗಿ ಗಾಯವಾದ್ದರಿಂದ ನಿಧನರಾದರು. ಸ್ಥಳದಲ್ಲಿ ಸಾರ್ವಜನಿಕರು ಸೇರಿದರಾದರೂ ಸಹ ಸವಾರ ಕಣಿವೆಯಲ್ಲಿ ಬಿದ್ದು ಗಾಯಗೊಂಡಿದ್ದು ತಿಳಿಯುವಷ್ಟರಲ್ಲಿ ಸುಮಾರು ಅರ್ಧತಾಸು ಕಳೆದಿದೆ ಎನ್ನಲಾಗಿದ್ದು, ತೀವ್ರವಾದ ರಕ್ತ ಸಾವ್ರದಿಂದ ಅವರೂ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಅಸು ನೀಗಿದ್ದಾರೆ.
ಪಾಂಡಿಗಾಯ ನಿವಾಸಿ ಉಮೇಶ್ ನಾಯ್ಕ ಅವರಿಗೆ ವಿವಾಹವಾಗಿ 4 ವರ್ಷಗಳಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆನ್ನಲಾಗಿದೆ. ಚೆಕ್ಕುತ್ತಿ ನಿವಾಸಿ ವಸಂತ ನಾಯ್ಕಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.