News Kannada
Thursday, July 07 2022

ಕರಾವಳಿ

ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು, ಓರ್ವ ಗಂಭೀರ - 1 min read

Photo Credit :

ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು, ಓರ್ವ ಗಂಭೀರ

ಮೂಡಬಿದಿರೆ: ನಿಂತಿದ್ದ ಟಿಪ್ಪರ್ ಗೆ ಹಿಂಬದಿಯಿಂದ ಬಂದ ಈಚರ್ ಲಾರಿ ಗುದ್ದಿದ ಪರಿಣಾಮ ಲಾರಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಡಪದವಿನಲ್ಲಿ ಮಂಗಳವಾರ ಸಂಭವಿಸಿದೆ.

Four die as Tempo rams into parked Tata Ace at Yedapadau-1
ಮಂಗಳೂರಿನಲ್ಲಿ ಸಾಮಾನುಗಳನ್ನು ತುಂಬಿಕೊಂಡು ಕಾರ್ಕಳದತ್ತ ಬರುತ್ತಿದ್ದ ಈಚರ್‌ ವಾಹನ ಬ್ರೇಕ್‌ ವೈಫ‌ಲ್ಯಕ್ಕೀಡಾಗಿ ಮೊದಲು ಬೈಕೊಂದಕ್ಕೆ ಗುದ್ದಿದೆ. ಅದೃಷ್ಟವಷಾತ್‌ ಬೈಕ್‌ ಸವಾರ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ.  ಬಳಿಕ ರಸ್ತೆಯಲ್ಲಿ ನಿಂತಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಗುದ್ದಿದೆ. ಪರಿಣಾಮವಾಗಿ ಈಚರ್‌ನಲ್ಲಿದ್ದ ಕಾರ್ಕಳದ ವ್ಯಾಪಾರಿ ಪ್ರಕಾಶ್‌ ರಾವ್‌ (53),ಈಚರ್‌ ಚಾಲಕ ಹಾವೇರಿಯ ಕಲ್ಲಪ್ಪ ಮತ್ತು ಕೆಲಸದಾಳು ಜಾರ್ಖಂಡ್‌ ಮೂಲದ ಸೋನು ಎನ್ನುವವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಲಾರಿಯಲ್ಲಿದ್ದ ಇನ್ನೋರ್ವ ರಾಜೇಶ್‌ ಅವರು ಗಂಭೀರವಾಗಿ ಗಾಯಗೊಂಡಿದ್ದು ,ಚಿಂತಾಜನಕ ಸ್ಥಿತಿಯಲ್ಲಿರುವ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

See also  ದಂಪತಿ ಮೇಲೆ ವಾಹನ ಹರಿದು ಮೃತ್ಯು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು