News Kannada
Thursday, July 07 2022

ಕರಾವಳಿ

ಮಗುವನ್ನು ಕೊಂದು ತಂದೆ ಆತ್ಮಹತ್ಯೆ - 1 min read

Photo Credit :

ಮಗುವನ್ನು ಕೊಂದು ತಂದೆ ಆತ್ಮಹತ್ಯೆ

ಮಂಡ್ಯ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಬೇಸತ್ತ ಪತಿ  ಪತ್ನಿ ಹಾಗೂ ಪುತ್ರನ ಕತ್ತು ಕೊಯ್ದು ತಾನು ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ  ರಾತ್ರಿ ನಡೆದಿದೆ.

ಘಟನೆಯಲ್ಲಿ ಲೋಕೇಶ್(35) ಪುತ್ರ ರಂಗ್ಪಪ್ಪ(6 ತಿಂಗಳು) ಮೃತಪಟ್ಟಿದ್ದರೆ ಪತ್ನಿ ರಮ್ಯ(24) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಹೊನಗಾನಹಳ್ಳಿ ಗ್ರಾಮದ ನಿವಾಸಿ ಲೋಕೇಶ್ ಮದ್ದೂರಿನ ಹೋಟೆಲ್ವೊಂದರಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದಾಗ ಮದ್ದೂರು ತೈಲೂರಿನ ರಮ್ಯ ಎಂಬಾಕೆಯ ಪರಿಚಯವಾಗಿ ಪ್ರೀತಿಸಿ 2 ವರ್ಷದ ಹಿಂದೆ ವಿವಾಹವಾಗಿದ್ದನು.  

ಈ ದಂಪತಿಗೆ 6 ತಿಂಗಳ ಮಗುವಿದ್ದು, ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ  ಕ್ಷುಲ್ಲಕ ವಿಚಾರಕ್ಕೆ  ಪತಿ ಪತ್ನಿ ನಡುವೆ ಜಗಳವೇರ್ಪಟ್ಟಿತ್ತು. ಆದರೆ ಅಕ್ಕಪಕ್ಕದವರು ಸಮಾಧಾನಿಸಿದ್ದರು. ಮತ್ತೆ ಮಂಗಳವಾರ ರಾತ್ರಿ 7.30 ರ ಸಮಯದಲ್ಲಿ  ದಂಪತಿ ಜಗಳ ಆರಂಭಿಸಿದ್ದಾರೆ. ಈ ಸಂದರ್ಭ ಕೋಪಗೊಂಡ  ಲೋಕೇಶ ಪತ್ನಿ ಹಾಗೂ ಪುತ್ರನ ಕತ್ತನ್ನು ಮಚ್ಚಿನಿಂದ ಕೊಯ್ದು ಬಳಿಕ ತಾನು ಕತ್ತುಕೊಯ್ದು ಕೊಂಡಿದ್ದಾನೆ.

ಮನೆಯಲ್ಲಿ ಚೀರಾಟ ಕೇಳಿ ಅಕ್ಕಪಕ್ಕದವರು ಮನೆಯತ್ತ ಬಂದು ನೋಡಿದಾಗ ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಮಗು ರಂಗಪ್ಪ ಮತ್ತು ಲೋಕೇಶ್ ಮೃತಪಟ್ಟಿದ್ದರು. ಪತ್ನಿ ರಮ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೆರೆಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

See also  ಗ್ರಾಮ ಪಂಚಾಯತ್ ಪಿಡಿಒ ಶೌಚಾಲಯದಲ್ಲಿ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು