ಪುತ್ತೂರು: ರಸ್ತೆ ಬದಿಯಲ್ಲಿ ಹೋಂಡಾ ಆಕ್ಟೀವಾ ವಾಹನ ನಿಲ್ಲಿಸಿ ಮಾತನಾಡುತ್ತಿದ್ದ ಸಂದರ್ಭ ಹಿಂಬದಿಯಿಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿ ಆಜಾದ್ ನಗರ ನಿವಾಸಿ ಅಹಮ್ಮದ್ ರವರ ಪುತ್ರ ಹಸೈನಾರ್ ಎಂಬವರು ಮೃತಪಟ್ಟವರು. ಉಪ್ಪಿನಂಗಡಿ ಆದಿತ್ಯ ಹೋಟೆಲ್ ಬಳಿ ರಸ್ತೆ ಬದಿಯಲ್ಲಿ ತನ್ನ ಹೋಂಡಾ ಆಕ್ಟೀವಾ ವಾಹನ ನಿಲ್ಲಿಸಿ ಮಾತನಾಡುತ್ತಿದ್ದ ವೇಳೆ ಹಿಂದಿನಿಂದ ಬಂದ್ ಟಿಪ್ಪರ್ ಲಾರಿ (ಕೆಎ 19 ಡಿ 1201) ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. . ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ.