News Kannada
Friday, September 30 2022

ಕರಾವಳಿ

ಜಾತ್ರಾ ಆಮಂತ್ರಣದಲ್ಲಿ ಜಿಲ್ಲಾಧಿಕಾರಿ ಹೆಸರಿನ ಗೊಂದಲ - 1 min read

Photo Credit :

ಜಾತ್ರಾ ಆಮಂತ್ರಣದಲ್ಲಿ ಜಿಲ್ಲಾಧಿಕಾರಿ ಹೆಸರಿನ ಗೊಂದಲ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಆಮಂತ್ರಣದಲ್ಲಿ ಜಿಲ್ಲಾಧಿಕಾರಿಯಾಗಿರುವ ನನ್ನ ಹೆಸರಿನ ಮುದ್ರಣಕ್ಕೆ ಸರಿ ಯಾ ತಪ್ಪಿನ ಕುರಿತು ವಿಮರ್ಶೆಗೆ ಒಳಪಡಿಸುವುದಿಲ್ಲ. ಅದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂರವರು ಸ್ಪಷ್ಟನೆ ನೀಡಿದ್ದಾರೆ.

ಅವರು ಪುತ್ತೂರು ಮಿನಿವಿಧಾನ ಸೌಧದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸುವ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು.  ಜಿಲ್ಲೆಯ ಶಿಷ್ಟಾಚಾರದ ಅಧಿಕಾರಿಯಾಗಿ ಜಿಲ್ಲೆಯ ಅಧೀನ ಸಂಸ್ಥೆಗಳಲ್ಲಿ ನಡೆಯುವಂತೆ ಯಾವುದೇ ಕಾರ್ಯಕ್ರಮದಲ್ಲೂ ಕೂಡಾ ಜಿಲ್ಲಾಧಿಕಾರಿಯವರ ಹೆಸರು ಹಾಕುವುದು ಸರ್ವೇ ಸಾಮಾನ್ಯ. ಇದು ಎಲ್ಲರಿಗೆ ತಿಳಿದಿರುವ ವಿಚಾರ. ಅನಾಧಿಕಾಲದಿಂದಲೂ ನಡೆಯುತ್ತಾ ಬಂದಿರುವ ವಿಚಾರ. ಇಲ್ಲಿ ಜಾತಿ, ಬಣ್ಣ ಬರುವುದಿಲ್ಲ.  ಹಿಂದೆಯೂ  ಕೂಡಾ ಹಲಾವರು ದೇವಸ್ಥಾನಗಳ ಕಾರ್ಯಕ್ರಮದಲ್ಲಿ ನನ್ನ ಹೆಸರು ಬಂದಿದೆ. ಮೈಸೂರಿನಲ್ಲಿ ಕಾರ್ಪೋರೇಶನ್ ಕಮೀಷನರ್ ಆಗಿದ್ದ ಸಂದರ್ಭದಲ್ಲಿ ಮೈಸೂರು ದಸರಾ ಸ್ಪೆಷಲ್ ಆಫೀಸರ್ ಆಗಿದ್ದಾಗ, ಚಾಮುಂಡೇಶ್ವರಿ ದೇವಸ್ಥಾನದ ಆಮಂತ್ರಣದಲ್ಲಿ ನನ್ನ ಹೆಸರು ಮುದ್ರಿತವಾಗಿತ್ತು. ಇತ್ತೀಚೆಗೆ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೋತ್ಸವ ಆಮಂತ್ರಣದಲ್ಲೂ ಅಚ್ಚು ಹಾಕಲಾಗಿತ್ತು. ಇಲ್ಲಿ ಯಾವುದೇ ಲೋಪದೋಷ ಆಗಿಲ್ಲ ಎಂದ ಅವರು ಮುಜರಾಯಿ ಕಾಯ್ದೆಯಿಂದ ಕೂಡಾ ಯಾವುದೇ ಲೋಪ ಆಗಿಲ್ಲ. ಅಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಂಬಂದಪಟ್ಟ ವಿಚಾರದಲ್ಲಿ ಮಾತ್ರ ಎಂಡೋಮೆಂಟ್ ಕಾಯ್ದೆಗೆ ಅದು ಅನ್ವಯ ಆಗುತ್ತದೆ. ಇದು ಶಿಷ್ಠಾಚಾರದ ವಿಚಾರ. ಅದು ಅಲ್ಲದೆ ಆಮಂತ್ರಣ ಎಂಬುದು ಇತ್ತೀಚೆಗೆ ಬಂದ ವ್ಯವಸ್ಥೆ. ಹಿಂದೆಲ್ಲಾ ಜಾತ್ರೆಗೆ ಆಮಂತ್ರಣ ಇರುತ್ತಿರಲಿಲ್ಲ ಎಂದರು. ಅಮಂತ್ರಣದಲ್ಲಿ ಯಾವುದೇ ಲೋಪದೋಷ ಇಲ್ಲ. ಈ ಕುರಿತು ನಾನು ನಿರಂತರ ಮುಜುರಾಯಿ ಮತ್ತು ಗೃಹ  ಇಲಾಖೆಯಲ್ಲಿ ಸಂಪರ್ಕದಲ್ಲಿದ್ದೇನೆ ಎಂದರು.

ಜಿಲ್ಲಾಧಿಕಾರಿ ಹುದ್ದೆಗೆ ಅದರದ್ದೇ ಆದ ಗೌರವವಿದೆ. ಆದರೆ ಆಮಂತ್ರಣ ವಿಚಾರಕ್ಕೆ ಸಂಬಂಧಿಸಿ ಸಣ್ಣಪುಟ್ಟ ಕ್ಷುಲಕ  ವಿಚಾರಗಳಿಗೆ ಎಳೆದು ತರಬಾರದು. ಇಷ್ಟೊಂದು ತೀವ್ರವಾಗಿ ತೆಗೆದು ಕೊಳ್ಳುವ ಅವಶ್ಯಕತೆ ಇರಲಿಲ್ಲ. ಲೋಪದೋಷ ಆಗಿದ್ದರೆ ಅದನ್ನು ಲಿಖಿತವಾಗಿ ಬರೆದು ಕೊಟ್ಟರೆ ಅದನ್ನು ಮುಜುರಾಯಿ ಇಲಾಖೆಗೆ ಕಳುಹಿಸಿಕೊಡುತ್ತೇವೆ. ಅವರು  ಅದನ್ನು ಅಂತಿಮ ತೀರ್ಮಾಣ ಕೈಗೊಳ್ಳಲಿ. ಯಾಕೆಂದರೆ ನನ್ನ ಬಗ್ಗೆಯ ದೂರಿಗೆ ನಾನು ತೀರ್ಮಾಣ ಕೈಗೊಳ್ಳಲು ಇಚ್ಚೆ ಪಡುವುದಿಲ್ಲ. ನಾನು ಅದನ್ನು ಮುಜಾರಾಯಿ ಇಲಾಖೆಗೋ ಕಾನೂನು ಇಲಾಖೆಗೋ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ. ಅವರೇ ಅಂತಿಮ ನಿರ್ದಾರ ಕೈಗೊಳ್ಳಲಿದ್ದಾರೆ ಎಂದರು.

ಆಮಂತ್ರಣ ವಿಚಾರವನ್ನು ಬೀದಿಗೆಳೆಯುವ ಅವಶ್ಯಕತೆ ಇಲ್ಲ:
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಲ್ಲರಿಗೂ ಅಪಾರ ಗೌರವವಿದೆ. ಈ ವಿಚಾರವನ್ನು ರಸ್ತೆಯಲ್ಲಿ ಚರ್ಚೆ ಮಾಡಿ. ಅನಂತರ ಇಲ್ಲಿ ರಸ್ತೆರೋಕೊ, ಧರಣಿ ಮತ್ತು ಬಂದ್  ಮಾಡುವ ವಿಚಾರ ಇಲ್ಲ. ಭಕ್ತರ ದೇವರ ಭಕ್ತಿಗೆ ಚ್ಯುತಿಯನ್ನು ತರಬಾರದು. ಎಲ್ಲಾದರೂ ಲೋಪದೋಷ ಇದ್ದರೆ ಅದನ್ನು ಸರಿಪಡಿಸುವುದು ಬಿಟ್ಟು ಬೀದಿಗೆಳೆಯಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.

ಕಾರ್ಯನಿರ್ವಹಣಾಧಿಕಾರಿ ತಪ್ಪಿಲ್ಲ:
ಆಮಂತ್ರಣ ಮುದ್ರಣ ವೇಳೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರು ನಿಮ್ಮ ಗಮನಕ್ಕೆ ತರಲಿಲ್ಲವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಪ್ರತಿ ನಿತ್ಯ ಹಲವಾರು ವಿಷಯದಲ್ಲಿ ಬೇರೆ ಬೇರೆ ಸರಕಾರಿ ಕಾರ್ಯಕ್ರಮ ನಡೆಯುತ್ತದೆ. ಅವರು ಯಾರು ಜಿಲ್ಲಾಧಿಕಾರಿಯನ್ನು ಕೇಳಿ ಹೆಸರನ್ನು ಹಾಕುವುದಿಲ್ಲ. ಅವರು  ಜಿಲ್ಲೆಯ ಶಿಷ್ಟಾಚಾರದ ಅಂಗವಾಗಿ ಜಿಲ್ಲಾಧಿಕಾರಿ ಹೆಸರು ಹಾಕುತ್ತಾರೆ. ಆದರೆ ಜಿಲ್ಲಾಧಿಕಾರಿ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ದೇವಳದ ಆಮಂತ್ರಣದಲ್ಲೂ ಅದೇ ರೀತಿ ನಡೆದಿದೆ. ಈ ಕುರಿತು ನಾನು ನನ್ನ ಹೆಸರು ಯಾಕೆ ಹಾಕಿಲ್ಲ ಅಥವಾ ಯಾಕೆ ಹಾಕಿದ್ದೀರಿ ಎಂದು ಕೇಳುವ ಪದ್ದತಿಯೂ ಇಲ್ಲ. ಇದು ಪ್ರೋಸಿಜರ್ ಅಷ್ಟೆ. ದೇವಸ್ಥಾನದ  ಜಾತ್ರೆಗಳಿಗೆ ಹಲವಾರು ವರ್ಷಗಳಿಂದ ಸ್ವಾತಂತ್ರ್ಯಬಂದ ನಂತರ ಬಂದಿರುವ ವ್ಯವಸ್ಥೆ. ಈ ಹಿನ್ನೆಯಲ್ಲಿ ಅವರು ಹಾಕಿದ್ದಾರೆ ಎಂದರು.

See also  ಬೆಳ್ತಂಗಡಿಗೆ ಹೊರರಾಜ್ಯಗಳಿಂದ 261 ಮಂದಿ ಆಗಮನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು