News Kannada
Saturday, October 01 2022

ಕರಾವಳಿ

24ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಅಂತರಾಜ್ಯ ಕಳ್ಳರ ಬಂಧನ - 1 min read

Photo Credit :

24ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಅಂತರಾಜ್ಯ ಕಳ್ಳರ ಬಂಧನ

ಬಂಟ್ವಾಳ: ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧೆಡೆಗಳಲ್ಲಿ ನಡೆದ 24ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಮೂರು ಮಂದಿ ಅಂತರಾಜ್ಯ ದರೋಡೆಕೋರರನ್ನು ಬಂಟ್ವಾಳ ವೃತ್ತ ನಿರೀಕ್ಷಕರ ನೇತೃತ್ವದ ವಿಟ್ಲ ಪೊಲೀಸರ ತಂಡ ಬಂಧಿಸಿದ ಘಟನೆ ಗುರುವಾರ ಬೆಳಗ್ಗಿನ ಜಾವ ಕಲ್ಲಡ್ಕ ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಸಾರಡ್ಕ ಚೆಕ್ ಪೋಸ್ಟ್ ಬಳಿ ನಡೆದಿದೆ.

Inter-state burglars facing 24 cases nabbed in Bantwal-1
ಬೆಳ್ತಂಗಡಿ ತಾಲೂಕಿನ ನಡಗ್ರಾಮದ ಚಂದ್ಕೂರು ನಿವಾಸಿ ಕೆಂಪಯ್ಯಯಾನೆ ಹರೀಶ್ ಶೆಟ್ಟಿಯಾನೆರವಿ (45), ಮಂಜೇಶ್ವರ ಬೇಕೂರು ಅಗರ್ತಮೂಲೆ ನಿವಾಸಿ ಫಾರೂಕ್ಯಾನೆ ಉಮ್ಮರ್ ಫಾರೂಕ್ (30), ಮಂಗಳೂರು ಕಲ್ಲಬೆಟ್ಟು ಸುವರ್ಣನಗರ ನಿವಾಸಿ ಸತೀಶ್ ಭಂಡಾರಿಯಾನೆ ಸತೀಶ್ (52) ಬಂಧಿತ ಆರೋಪಿಗಳಾಗಿದ್ದು, ಪ್ರಕರಣದ ಇನ್ನೋರ್ವ ಆರೋಪಿ ಮೀಯಪದವು ನಿವಾಸಿ ಆಶ್ರಫ್ಯಾನೆ ಚಿಲ್ಲಿ ಅಶ್ರಫ್ ವಿದೇಶಕ್ಕೆ ಪಲಾಯನ ಮಾಡಿದ್ದಾನೆ. ಇವರಿಂದ ಕಳವುಗೈದ ಒಟ್ಟುಮೂರುಕಾರು, ಎರಡು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ತಂಡವು ವಿಟ್ಲಠಾಣಾ ವ್ಯಾಪ್ತಿಯ ಅನಂತೇಶ್ವರ ದೇವಸ್ಥಾನ ಸಮೀಪ ಅಡಿಕೆ ವ್ಯಾಪಾರಿಗೆ ಮೆಣಸಿನ ಪುಡಿಎರಚಿ ನಾಲ್ಕೂವರೆ ಲಕ್ಷ ದರೋಡೆ ಯತ್ನ, ಸಾಲೆತ್ತೂರು ವೈನ್ ಶಾಫ್ ಬಾಗಿಲು ಮುರಿದು ನಗದು ಕಳುವು, ಕನ್ಯಾನ ಕುಡ್ಪಲ್ತಡ್ಕ ಬೈಕ್ ಕಳ್ಳತನ ಪ್ರಕರಣ, ಮೂಡಬಿದ್ರೆ ಠಾಣಾ ಸರಹದ್ದಿನಲ್ಲಿ ವ್ಯಾಪಾರಿಯೊಬ್ಬರ ಮೇಲೆ ಹತ್ಯಾರಿನಿಂದ ಹಲ್ಲೆ ನಡೆಸಿ ಹಣದರೋಡೆ, ಕ್ಯಾಂಟೀನ್ ವ್ಯಾಪಾರಿಯ ಚಿನ್ನದ ಸರ ಹಾಗೂ ಹಣದರೋಡೆ, ಎರಡು 800 ಕಾರು ಹಾಗೂ ಬೈಕ್ ಕಳವು ಮಾಡಿದ ಪ್ರಕರಣ, ಉಳ್ಳಾಲ ಠಾಣೆಯ ನಾಟೆಕಲ್ಲು ಸಮಿಪ ವಾಹನ ನಿಲ್ಲಿಸಿ ನಾಲ್ಕೂವರೆ ಲಕ್ಷದರೋಡೆ, ತೊಕ್ಕೊಟ್ಟು ಬಳಿ ವಾಹನ ತಡೆದು ಹಲ್ಲೆ ನಡೆಸಿ ಒಂದುವರೆ ಲಕ್ಷದರೋಡೆ, ಮಾರುತಿ 800 ಕಳವು ಪ್ರಕರಣ, ಮಂಗಳೂರು ಗ್ರಾಮಾಂತರ ಠಾಣೆಯ ಕುಲಶೇಖರದಲ್ಲಿ 800 ಕಾರು ಕಳವು ಮಾಡಿದ ಪ್ರಕರಣಗಳನು ನಡೆಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಕೆಂಪಯ್ಯಯಾನೆ ಹರೀಶ್ ಶೆಟ್ಟಿಯ ಮೇಲೆ ಹೈದರಬಾದ್ ಜಯಲಕ್ಷ್ಮೀ ಜುವೆಲ್ಲರ್ಸ್ 25 ಕೆಜಿ ಬಂಗಾರ ಕಳವು, ಬೆಂಗಳೂರು ಬಣಸವಾಡಿ ಚೆಮ್ಮನ್ನೂರು ಜುವೆಲ್ಲರ್ಸ್ 21ಕೆಜಿ ಬಂಗಾರ ಕಳವು, ಆರ್ ಟಿ ನಗರ ಕಾರ್ಪೋರೇಷನ್ ಬ್ಯಾಂಕ್ 1.91ಕೋಟಿ ದರೋಡೆ, ಮುಂಬೈಯಲ್ಲಿ 5 ದರೋಡೆ ಪ್ರಕರಣಗಳಿದೆ. 8 ವರ್ಷಗಳ ಕಾಲ ಜೈಲಿನಲ್ಲಿದ್ದ ಆರೋಪಿಯಾಗಿರುತ್ತಾನೆ. ಅಲ್ಲದೇ ದರೋಡೆಪ್ರಕರಣದಲ್ಲಿ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡವನಾಗಿರುತ್ತಾನೆ.ಈತ ಭೂಗತ ಪಾತಕಿ ರವಿ ಪೂಜಾರಿಯ ಸಹಚರನಾಗಿದ್ದಾನೆ.

ಸತೀಶ್ ಭಂಡಾರಿಯ ಮೇಲೆ ಮುಂಬೈಯಲ್ಲಿದರೋಡೆ, ಕೊಲೆ ಪ್ರಕರಣದ ಆರೋಪಿಯಾಗಿದ್ದು, ಪಣಂಬೂರು ಕೂಳೂರುನಲ್ಲಿ ಸುಮಾರು 6 ವರ್ಷಗಳ ಹಿಂದೆ ನಡೆದ ಶೂಟೌಟ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉಮ್ಮರ್ ಫಾರೂಕ್ಕೇರಳದ ಕುಂಬಳೆ ಮತ್ತು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ದರೋಡೆ ಹಾಗು ಕೊಲೆ ಪ್ರಕರಣದ ಆರೋಪಿಯಾಗಿರುತ್ತಾನೆ. ಈ ತಂಡವನ್ನು ಬಂಧಿಸುವ ಮೂಲಕ ದಕ್ಷಿಣಕನ್ನಡದ 12 ಪ್ರಕರಣ ಸೇರಿದಂತೆ ಬೆಂಗಳೂರು, ಕಾಸರಗೋಡು, ಹೈದರಾಬಾದ್, ಮುಂಬಯಿ ಮೂಲದಸುಮಾರು 24 ಪ್ರಕರಣಗಳನ್ನು ವಿಟ್ಲ ಪೊಲೀಸರು ಬೇಧಿಸಿದ್ದಾರೆ.

See also  ಬಿಜೆಪಿ ಆಪರೇಷನ್ ಕಮಲ ಮಾಡಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ದಕ್ಷಿಣ ಕನ್ನಡ ಜಿಲ್ಲಾಪೊಲೀಸ್ ಅಧೀಕ್ಷಕ ಡಾ.ಶರಣಪ್ಪಎಸ್.ಡಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸಂಟ್ ಶಾಂತಕುಮಾರ್, ಬಂಟ್ವಾಳ ಡಿವೈಎಸ್ಪಿ ಭಾಸ್ಕರರೈಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕಕೆ.ಯು.ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಹಾಯಕ ಉಪನಿರೀಕ್ಷಕರಾದ ಕಿಟ್ಟುಮೂಲ್ಯ, ರುಕ್ಮಯ, ಸಿಬ್ಬಂದಿಗಳಾದ ಬಾಲಕೃಷ್ಣ, ಪ್ರವೀಣ್, ರಕ್ಷಿತ್ರೈ, ಭವಿತ್ರೈ, ಲೋಕೇಶ್, ಪ್ರವೀನ್ ಕುಮಾರ್, ರಮೇಶ್, ಬಂಟ್ವಾಳ ಪೊಲೀಸು ವೃತ್ತ ನಿರೀಕ್ಷಕರ ತಂಡದ ಗಿರೀಶ್, ಜನಾರ್ಧನ, ನರೇಶ್ ಶೆಟ್ಟಿ, ಇಲಾಖಾ ಚಾಲಕನಾರಾಯಣ, ಕಂಪ್ಯೂಟರ್ ವಿಭಾಗದ ಪ್ರಶಾಂತ, ಸಂಪತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು