News Kannada
Sunday, October 02 2022

ಕರಾವಳಿ

ದಾಖಲೆಯತ್ತ ಮುನ್ನುಗ್ಗುತ್ತಿದೆ ಗೇರು ಬೀಜ ದರ - 1 min read

Photo Credit :

ದಾಖಲೆಯತ್ತ ಮುನ್ನುಗ್ಗುತ್ತಿದೆ ಗೇರು ಬೀಜ ದರ

ಕಾಸರಗೋಡು: ಗೇರು ಬೀಜ ಬೆಲೆ ದಾಖಲೆಯತ್ತ ಮುನ್ನುಗ್ಗುತ್ತಿದ್ದು, ಈ ಬಾರಿ ಉತ್ಪಾದನೆ ಕುಸಿದಿದ್ದು ದರ ಮಾತ್ರ ಕಳೆದ ವರ್ಷಗಳಿಗಿಂತ ದುಪ್ಪಟ್ಟಾಗಿದೆ. ಕಾಸರಗೋಡಿನಲ್ಲಿ ಕಿಲೋವೊಂದಕ್ಕೆ 102 ರಿಂದ 105 ರೂ. ತನಕ  ತಲುಪಿದೆ.

ಕಳೆದ ವರ್ಷ ಈ ಅವಧಿಯಲ್ಲಿ 40ರಿಂದ 50ರೂ. ಮಾತ್ರ ಲಭಿಸುತ್ತಿತ್ತು. ಆದರೆ ದರ ಹೆಚ್ಚಳಗೊಂಡರೂ ಬೆಳೆಗಾರರಿಗೆ ನಿರಾಶೆ ಉಂಟಾಗಿದೆ. ಈ ಸಲ ಕಾಲಂಶದಷ್ಟು ಫಸಲು ಇಲ್ಲ ಇಲ್ಲದಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ. ಸಾಮಾನ್ಯವಾಗಿ ಫೆಬ್ರವರಿ ಕೊನೆಯಿಂದ ಮೇ ಮಧ್ಯಭಾಗದ ತನಕ ಗೇರು ಫಸಲು ಲಭಿಸುತ್ತಿದೆ. ಆದರೆ ಈ ಭಾರೀ ಮಾರ್ಚ್ ಅರ್ಧ ಕಳೆದರೂ ಫಸಲೇ ಗೋಚರಿಸುತ್ತಿಲ್ಲ. ಹಲವಡೆ ಈಗಷ್ಟೇ ಹೂ ಬಿಟ್ಟಿದೆ. ಇನ್ನೂ ಹಲವಡೆ ಹೂ ಗಳು ಕರಟಿ ಹೋಗಿವೆ. ಹವಾಮಾನ ವೈಪರೀತ್ಯ ಇದಕ್ಕೆ ಪ್ರಮುಖ ಕಾರಣವಾಗಿದೆ.  

ಕೆಲ ವರ್ಷಗಳ ಹಿಂದೆ ಗೇರು ತೋಟಗಳು ಎಲ್ಲೆಲ್ಲೂ ಗೋಚರಿಸುತಿತ್ತು. ಆದರೆ ಗೇರು ಬೆಲೆ ಕುಸಿದು ರಬ್ಬರಿಗೆ ಬೆಲೆ ಏರಿಕೆಯಾದದ್ದೇ ತಡ ಗೇರು ಬೆಳೆಗಾರರು ಗೇರು ಮರದ ಸಹವಾಸವೇ ಬೇಡವೆಂದು ಗೇರು ಮರಗಳನ್ನು ಕಡಿದು ಅದರ ಜಾಗದಲ್ಲಿ ರಬ್ಬರ್ ಮರಗಳನ್ನು ನೆಟ್ಟು ಪೋಷಿಸಿದ್ದರು. ಗೇರು ಮರಗಳ ಮಾರಣ ಹೋಮದ ಪರಿಣಾಮವಾಗಿ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಗೇರು ಮರ ಅಪರೂಪವಾಗಿ ಬಿಟ್ಟಿದೆ. ಈಗ ರಬ್ಬರಿಗೆ ಬೆಲೆಯೇ ಇಲ್ಲದಂತಾಗಿದೆ. ಆದರೆ ಗೇರು ಬೀಜಕ್ಕೆ ದಾಖಲೆ ದರ ಲಭಿಸುತ್ತಿದೆ.

ರಾಜ್ಯದಲ್ಲಿ ಅತ್ಯಧಿಕ ಗೇರುಬೀಜ ಉತ್ಪಾದಿಸುವ ಜಿಲ್ಲೆ ಕಾಸರಗೋಡು ಆಗಿದೆ. ಆದರೆ ಇದೀಗ ಇಲ್ಲಿ ಗೇರು ಬೆಳೆ ಗಣನೀಯವಾಗಿ ಕುಸಿದಿದೆ. ಪರಿಣಾಮ ಫಸಲು ಕುಸಿದಾಗ ದರವೂ ಭಾರೀ ಪ್ರಮಾಣದಲ್ಲಿ ಏರಿಕೆ ಯಾಗತೊಡಗಿದೆ. ಸಮೀಕ್ಷೆ ಯೊಂದರ  ಪ್ರಕಾರ 2013-14 ರಲ್ಲಿ  ಜಿಲ್ಲೆಯಲ್ಲಿ  7811 ಹೆಕ್ಟೇರ್ ಸ್ಥಳದಲ್ಲಿ ಗೇರು ಬೆಲೆ ಬೆಳೆಸಲಾಗುತ್ತಿತ್ತು. ಆದರೆ 2016ಕ್ಕೆ ತಲುಪಿದಾಗ ಇದು 6193ಹೆಕ್ಟೇರ್ ಗೆ  ಇಳಿಕೆಯಾಗಿದ್ದು, ರಬ್ಬರ್ ಬೆಳೆಗಾಗಿ ಗೇರು ಮರಗಳನ್ನು ಕಡಿಯಲಾಗಿದೆ. ಆದರೆ ಈಗ ದರ ಏರಿಕೆ ಯಾಗಿರುವುದು  ಬೆಳೆಗಾರರು ನಿರಾಶೆ ಮೂಡಿಸುವಂತೆ ಮಾಡಿದೆ.

See also  ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ: ನಾಲ್ವರಿಗೆ ಜೀವಾವಧಿ ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು