News Kannada
Friday, September 30 2022

ಕರಾವಳಿ

ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದ ಅಪರೂಪದ ಅಧಿಕಾರಿ ಚಂದ್ರಶೇಖರಯ್ಯ - 1 min read

Photo Credit :

ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದ ಅಪರೂಪದ ಅಧಿಕಾರಿ ಚಂದ್ರಶೇಖರಯ್ಯ

ಬಂಟ್ವಾಳ: ಇವರ ಹೆಸರು ಚಂದ್ರಶೇಖರಯ್ಯ.. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ. ಆದರೆ ಇವರು ನಡೆಸಿದ ಕಾರ್ಯಕ್ಕೆ ಇಡೀ ದ.ಕ.ಜಿಲ್ಲೆ ಇವರನ್ನು ಕೊಂಡಾಡುತ್ತಿದೆ. ಅಧಿಕಾರಿಯೊಬ್ಬರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಅವಕಾಶಗಳಿವೆ, ಆದರೆ ಅದಕ್ಕೆ ಇಚ್ಛಾಶಕ್ತಿ ಅಗತ್ಯ ಎಂಬುದನ್ನು ತೋರಿಸಿಕೊಟ್ಟಿರುವ  ಅಪರೂಪದ ಅಧಿಕಾರಿ ಚಂದ್ರಶೇಖರಯ್ಯ ರವರ ಯಶೋಗಾಥೆಯಿದು. ಸಂಚಾರಿ ಪೊಲೀಸ್ ನಿರೀಕ್ಷಕನಾಗಿದ್ದರೂ, ಸ್ಥಳೀಯ ಪುರಸಭೆ, ಹೆದ್ದಾರಿ ಪ್ರಾಧಿಕಾರ, ಇಲಾಖೆ ನಡೆಸಬೇಕಾದ ಅನಧಿಕೃತ ಗೂಡಂಗಡಿಗಳ ತೆರವು, ರಸ್ತೆ ಅಗಲೀಕರಣ, ಡಾಂಬರೀಕರಣದ ಕಾರ್ಯಕ್ಕೆ ಸ್ವತಃ ನೇತೃತ್ವ ವಹಿಸಿದ ಹೆಗ್ಗಳಿಕೆ ಚಂದ್ರಶೇಖರಯ್ಯ ರದ್ದು.


ಕಳೆದ ಹಲವು ದಶಕಗಳಿಂದ ಟ್ರಾಫಿಕ್ ಜಾಮ್ ಬಿ.ಸಿ.ರೋಡ್ ಅಂದ್ರೆ ಟ್ರಾಫಿಕ್ ಜಾಮ್ ನ ಆಗರವಾಗಿತ್ತು. ಫ್ಲೈ ಓವರ್ ನಿರ್ಮಾಣವಾದ ಬಳಿಕವಂತೂ ಸಮಸ್ಯೆ ದುಪ್ಪಟ್ಟಾಗಿತ್ತು. ದಿನವಿಡೀ ವಾಹನದಟ್ಟಣೆ, ಶುಭಸಮಾರಂಭಗಳು ಇದ್ದಾಗಲಂತೂ ಬಿ.ಸಿ.ರೋಡಿನ ಸ್ಥಿತಿಯಂತೂ ಶೋಚನೀಯ ಎನ್ನುವಂತಿತ್ತು. ಮತ್ತೊಂದೆಡೆ ಹೆದ್ದಾರಿಯಲ್ಲಿನ ಹೊಂಡಗಳು, ಬ್ಲಾಕ್ ಗೆ ಕಾರಣವಾದರೆ ಇತ್ತ ಬಿ.ಸಿ.ರೋಡಿನಲ್ಲಿ ಕಿರಿದಾದ ಸರ್ವೀಸ್ ರಸ್ತೆ, ಸಮರ್ಪಕವಲ್ಲದ ವೃತ್ತ, ಐದು ಮಾರ್ಗಗಳು ಒಂದಾಗುವ ಬಿ.ಸಿ.ರೋಡು ವೃತ್ತ ಅವ್ಯವಸ್ಥೆಯ ಆಗರವಾಗಿತ್ತು. ಸದ್ಯಕ್ಕೆ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರೆತಿದೆ.

ಟ್ರಾಫಿಕ್  ಇನ್ಸ್ ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಚಂದ್ರಶೇಖರಯ್ಯರವರು ಮೊದಲು ನಡೆಸಿದ್ದು ಹೊಂಡಗಳನ್ನು ಮುಚ್ಚಿಸಿದ್ದು, ಬಳಿಕ  ಟ್ರಾಫಿಕ್ ಜಾಮ್ ಗೆ ಮುಖ್ಯ ಕಾರಣವಾಗುತ್ತಿದ್ದ ಮೆಲ್ಕಾರ್ ನ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಮತ್ತು ಮೆಲ್ಕಾರ್ ನ ರಸ್ತೆ ಅಗಲೀಕರಣ. ಇವರ ಈ ಕಾರ್ಯಕ್ಕೆ ಇಡೀ ಮೆಲ್ಕಾರ್ ಬೆಂಬಲವಾಗಿ ನಿಂತಿತು. ರಸ್ತೆ ಅಗಲೀಕರಣವಾಯ್ತು.  ಇದೀಗ ಮೆಲ್ಕಾರ್ ಸಂಪೂರ್ಣ ಟ್ರಾಫಿಕ್ ಜಾಮ್ ಮುಕ್ತವಾಗಿದೆ. ಬಿ.ಸಿ.ರೋಡಿನ ವೃತ್ತದ ಬಳಿಯಲ್ಲೂ ಅಷ್ಟೇ, ಅದೆಷ್ಟೋ ಅನಧಿಕೃತ ಅಂಗಡಿಗಳಿತ್ತು, ಅದರ ತೆರವು ಕಾರ್ಯಾಚರಣೆಗೂ ಇವರು ನೇತೃತ್ವ ವಹಿಸಿದರು.  ಬಿ.ಸಿ.ರೋಡು ಕಲ್ಲಡ್ಕ ಹೆದ್ದಾರಿ ಮಧ್ಯೆ ಅಪಘಾತ ಹಾಗೂ ಟ್ರಾಫಿಕ್ ಜಾಮ್ ಆಗುತ್ತಿದ್ದ ನರಹರಿ ಪರ್ವತದ ಬಳಿಯ ತಿರುವಿನಲ್ಲಿ ಗಜೆಸಿಬಿ ಮೂಲಕ ಗುಡ್ಡ ಅಗೆಸಿದರು, ರಸ್ತೆ ಅಗಲೀಕರಣವಾಗಿಸಿ, ಇನ್ನೆಂದೂ ಟ್ರಾಫಿಕ್ ಜಾಮ್ ಆಗದಂತಾ ರೀತಿಯ ಕಾರ್ಯ ನಡೆಸಿದರು. ಬಳಿಕ ಬಿ.ಸಿ.ರೋಡು ವೃತ್ತದ ಬಳಿಯಲ್ಲಿ ಅಗಲೀಕರಣಗೊಂಡ ರಸ್ತೆಗೆ ಹೆದ್ದಾರಿ ಇಲಾಖೆಗೆ ಒತ್ತಡ ತಂದು ಡಾಮರು ಹಾಕಿಸಿದರು.

ಚಂದ್ರಶೇಖರಯ್ಯ ನಡೆಸಿದ ಈ ಎಲ್ಲಾ ಕಾರ್ಯಗಳಿಂದ ಸದ್ಯಕ್ಕೆ ಬಿ.ಸಿ.ರೋಡು-ಮೆಲ್ಕಾರ್ ಟ್ರಾಫಿಕ್ ಜಾಮ್ ಮುಕ್ತವಾಗಿದೆ. ಪಾಣೆಮಂಗಳೂರಿನಲ್ಲಿ ರಸ್ತೆ ಅಗಲೀಕರಣ ಕಾರ್ಯ ಹಾಗೂ ಬಿ.ಸಿ.ರೋಡಿನಲ್ಲಿ ಹೆದ್ದಾರಿಯಲ್ಲೇ ಬಸ್ ಗಳು ಸಾಲುಗಟ್ಟಿ ನಿಲ್ಲುವುದಕ್ಕೆ ಸಂಚಾರಿ ಪೊಲೀಸರು ಬ್ರೇಕ್ ಹಾಕಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ಲೀನ್ ಬಿ.ಸಿ.ರೋಡ್  ಕಾಣಲು ಸಾಧ್ಯ.

ಸರ್ಕಾರಿ ಅನುದಾನವಾಗಿದ್ದರೆ ಲಕ್ಷಾಂತರ ಅನುದಾನ ವೆಚ್ಚವಾಗುತ್ತಿತ್ತು, ಆದರೆ ಅಗಲೀಕರಣದ ಕಾಮಗಾರಿಗಳನ್ನು ನಡೆಸಲು ಚಂದ್ರಶೇಖರಯ್ಯ ಅವರು ವ್ಯಯ ಮಾಡಿದ್ದು ಇಚ್ಛಾಶಕ್ತಿಯನ್ನು ಮಾತ್ರ. ಜೆಸಿಬಿ, ಟಿಪ್ಪರ್ ಮಾಲಕರ ನೆರವು ಪಡೆದು, ಗಣ್ಯರ ಮೂಲಕ ಇಲಾಖೆಗೆ ಒತ್ತಡ ಹಾಕಿ ಕಾಮಗಾರಿಯನ್ನು ನಡೆಸಿದ್ದಾರೆ. ಸರ್ಕಾರಿ ಅನುದಾನಕ್ಕೆ ಕಾದುಕುಳಿತರೆ ಪೂರ್ಣ ಕೆಲಸ ಸಾಧ್ಯವಿಲ್ಲ ಎಂದು ಇವರು ಮುನ್ನಡೆದಾಗ ಬಂಟ್ವಾಳ ಪುರಸಭೆ, ಹೆದ್ದಾರಿ ಪ್ರಾಧಿಕಾರ, ಇಲಾಖೆ ಇಲ್ಲ ಎನ್ನದೆ ಬೆಂಬಲ ನೀಡಿದ್ದು , ದಿನಕಳೆದಂತೆ ಹೆದ್ದಾರಿಗೆ ಕಳೆ ಬರುತ್ತಿದೆ.

See also  ಮನೆ ಕುಸಿತ: ತಾಯಿ-ಮಗ ಪವಾಡಸದೃಶ ಪಾರು

ಸ್ವಆಸಕ್ತಿಯಿಂದ ಬಿ.ಸಿ.ರೋಡು-ಮೆಲ್ಕಾರ್ ನ ಸಂಚಾರ ಸಮಸ್ಯೆಗ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿ, ಕಾಮಗಾರಿಗಳನ್ನು ನಿರ್ವಹಿಸಿದ ಚಂದ್ರಶೇಖರಯ್ಯ ಅವರ ಸಾಧನೆಯನ್ನು ಬಂಟ್ವಾಳ ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಾಮಾಜಿಕ ಸಂಘ ಸಂಸ್ಥೆಗಳು ಸನ್ಮಾನಿಸಿ ಪ್ರೋತ್ಸಾಹಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು