News Kannada
Thursday, September 29 2022

ಕರಾವಳಿ

ಕಳ್ಳಿಗೆ ಗ್ರಾಮ “ಸ್ಮಾರ್ಟ್ ವಿಲೇಜ್” ಪಟ್ಟಿಗೆ ಸೇರ್ಪಡೆಗೆ ಮನವಿ - 1 min read

Photo Credit :

ಕಳ್ಳಿಗೆ ಗ್ರಾಮ

ಬಂಟ್ವಾಳ: ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಕಳ್ಳಿಗೆ ಗ್ರಾಮವನ್ನು ಕೇಂದ್ರ ಸರಕಾರದ “ಸ್ಮಾರ್ಟ್ ವಿಲೇಜ್”(ಸುಂದರ ಹಳ್ಳಿ) ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂಬ ಕಳ್ಳಿಗೆ ಗ್ರಾ.ಪಂ.ಉಪಾಧ್ಯಕ್ಷ ಪುರುಷ ಎನ್.ಸಾಲಿಯಾನ್ ನೆತ್ತರಕೆರೆ ಅವರು ಸಲ್ಲಿಸಿರುವ ಮನವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಂದಿಸಿದ್ದಾರೆ.


ಈ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರವನ್ನು ರವಾನಿಸಿ ಈ ಕುರಿತಾಗಿ ಸಂಬಂಧ ಪಟ್ಟ ಇಲಾಖೆಗೆ ಸಮಗ್ರ ಮಾಹಿತಿ ಒದಗಿಸುವಂತೆ ಸೂಚಿಸಿದ್ದಾರೆ. ಹಾಗೆಯೇ ಕಳ್ಳಿಗೆ ಗ್ರಾಮದ ಸಮಸ್ಯೆಗೆ ಸಂಬಂಧಿಸಿ ಚರ್ಚಿಸುವ ನಿಟ್ಟಿನಲ್ಲಿ ಪ್ರಧಾನಿಯವರನ್ನು ಮುಖಃತ ಭೇಟಿಯಾಗಲು ಪತ್ರದಲ್ಲಿ ಪುರುಷ ಎನ್.ಸಾಲಿಯಾನ್ ಕೋರಿದ್ದು ಇದಕ್ಕೂ ಪ್ರಧಾನಿಯವರಿಂದ ಸಮಯಾವಕಾಶ ಸಿಗುವ ನಿರೀಕ್ಷೆಯನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಪ್ರಧಾನಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದಲ್ಲಿ ಕಳ್ಳಿಗೆ ಗ್ರಾಮದ ಸಮಸ್ಯೆಗಳ ವೀಡಿಯೋ ಚಿತ್ರೀಕರಣವನ್ನು ತೋರಿಸುವ ಮೂಲಕ ಸಮಗ್ರ ಮಾಹಿತಿಯನ್ನು ಪ್ರಧಾನಿ ಅವರ ಮುಂದಿಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಳ್ಳಿಗೆ ಗ್ರಾಮವು 6ಸಾವಿರ ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದು ಶೇ.80ರಷ್ಟು ಭೂಭಾಗ ಕೃಷಿಯಿಂದ ಕೂಡಿದೆ. 100 ಕ್ಕೂ ಅಧಿಕ ಎಕ್ರೆಯಷ್ಟು ಸರಕಾರಿ ಸ್ಥಳವೂ ಇದ್ದು ಎಲ್ಲಾ ಕಡೆಯಿಂದಲೂ ಅಭಿವೃದ್ಧಿ ಹೊಂದುವಂತ ಗ್ರಾಮವಾಗಿದೆ. ಅಧಿಕ ಸಂಖ್ಯೆಯಲ್ಲಿ ಕೃಷಿ, ಕೂಲಿ ಕಾರ್ಮಿಕರು ಕೂಡ ಇದ್ದು ಭಾರತ ಸರಕಾರದ ಸ್ಮಾರ್ಟ್ ವಿಲೇಜ್ ಪಟ್ಟಿಗೆ ಸೇರ್ಪಡೆಗೊಳ್ಳಲು ಯೋಗ್ಯವಾಗಿದೆ ಎಂದು ಪುರುಷ ಸಾಲಿಯಾನ್ ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಕೇಂದ್ರ ಸರಕಾರದಿಂದ ರಸ್ತೆ ಅಭಿವೃದ್ಧಿಗಾಗಿ ಬರುವಂತ ಸಿ.ಆರ್.ಎಫ್., ನಬಾರ್ಡ್ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಯಾವುದೇ ಅನುದಾನ ಕಳ್ಳಿಗೆ ಗ್ರಾಮಕ್ಕೆ ಬಂದಿರುವುದಿಲ್ಲ. ಇಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದು ಕಳ್ಳಿಗೆ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರ ಆಡಳಿತ ಇದೆ. ಹಾಗಾಗಿ ರಸ್ತೆ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಹಳ್ಳಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಅನುದಾನ ಮಂಜೂರು ಮಾಡುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ. ಅದೇ ರೀತಿ ಕಳ್ಳಿಗೆ ಗ್ರಾಮದ ದರಿಬಾಗಿಲು-ನೆತ್ತರಕೆರೆ-ಬೆಂಜನಪದವು-ಜಾರಂದಗುಡ್ಡೆ-ಕನಪಾಡಿ-ಬೆದ್ರಾಡಿವರೆಗಿನ 6 ಕಿ.ಮೀ.ರಸ್ತೆಯು ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದೆ. ಈ ರಸ್ತೆ ದುರಸ್ಥಿಗೆ ಪ್ರತಿನಿತ್ಯ ಸಾರ್ವಜನಿಕರಿಂದ ಪಂಚಾಯತಿಗೆ ದೂರುಗಳು ಬರುತ್ತಿದ್ದರೂ ದುರಸ್ತಿಪಡಿಸದ ಸ್ಥಿತಿಯಲ್ಲಿದ್ದು ಜನರು ಗ್ರಾಮ ಪಂಚಾಯತ್ ಬಗ್ಗೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮ ಸಭೆ, ವಾರ್ಡ್ ಸಭೆ ನಡೆಸಲಾಗದ ಪರಿಸ್ಥಿತಿ ಉಂಟಾಗಿದೆ. ರಸ್ತೆ ಅಭಿವೃದ್ಧಿಯ ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಸ್ಮಾರ್ಟ್ ವಿಲೇಜ್ ಪಟ್ಟಿಗೆ ಕಳ್ಳಿಗೆ ಗ್ರಾಮವನ್ನು ಸೇರ್ಪಡೆಗೊಳಿಸುವ ಮೂಲಕ ಅನುದಾನ ಮಂಜೂರುಗೊಳಿಸಿ ರಸ್ತೆ ಅಭಿವೃದ್ಧಿಪಡಿಸಲು ಸಹಕಾರಿಯಾಗುವಂತೆ ಮನವಿಯಲ್ಲಿ ಪುರುಷ ಸಾಲಿಯಾನ್ ವಿನಂತಿಸಿದ್ದಾರೆ.

ರೈಲು ತಂಗುದಾಣ ನಿರ್ಮಿಸಿ
ಕಳ್ಳಿಗೆ ಗ್ರಾಮದ ಮಧ್ಯೆ ಭಾಗದಿಂದ ಮಂಗಳೂರು-ಬೆಂಗಳೂರು ರೈಲ್ವೇ ಹಳಿ ಹಾದುಹೋಗುತ್ತಿದ್ದರೂ ಈ ಭಾಗದ ಜನಸಾಮಾನ್ಯರು ರೈಲ್ವೇ ಪ್ರಯಾಣದಿಂದ ವಂಚಿತರಾಗುತ್ತಿದ್ದಾರೆ. ಈ ಗ್ರಾಮದಿಂದ ಪ್ರತಿನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಸಾರ್ವಜನಿಕರು ಮಂಗಳೂರಿಗೆ ಹೋಗುತ್ತಿದ್ದು ಇವರ ಅನುಕೂಲತೆಗಾಗಿ ಬ್ರಹ್ಮರಕೊಟ್ಲು, ನೆತ್ತರಕೆರೆಯಲ್ಲಿ ರೈಲು ತಂಗುದಾಣವನ್ನು ನಿರ್ಮಿಸುವುದರೊಂದಿಗೆ ಬಸ್ಸನ್ನೇ ಅವಲಂಬಿಸಿರುವ ನಾಗರಿಕರಿಗೆ ರೈಲು ಸಂಚಾರಕ್ಕೂ ಅವಕಾಶ ಮಾಡಿಕೊಡಬೇಕೆಂದು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 

See also  ಮೀನು ಮಾರಾಟಗಾರರೇ ಎಚ್ಚರ: ರಾಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಿದ್ದಲ್ಲಿ ಕಾನೂನು ರೀತಿಯ ಕಠಿಣ ಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು