News Kannada
Monday, October 03 2022

ಕರಾವಳಿ

ಅಪಘಾತಗಳ ತಡೆಗೆ ಕಟ್ಟುನಿಟ್ಟಿನ ಕ್ರಮ: ಇ.ವಾಸುದೇವನ್ - 1 min read

Photo Credit :

ಅಪಘಾತಗಳ ತಡೆಗೆ ಕಟ್ಟುನಿಟ್ಟಿನ ಕ್ರಮ: ಇ.ವಾಸುದೇವನ್

ಕಾಸರಗೋಡು: ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ಆಗಾಗ ಸಂಭವಿಸುತ್ತಿರುವ ಅಪಘಾತಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಇ.ವಾಸುದೇವನ್ ಭರವಸೆ ನೀಡಿದ್ದಾರೆ.


ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು. ವಾಹನಗಳ ತಪಾಸಣೆಗೆ ಮನಬಂದಂತೆ ಅಡ್ಡಾದಿಡ್ಡಿ ನಿಲ್ಲಿಸುವುದನ್ನು ತಡೆಗಟ್ಟಿ ಬದಲಿವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಯಿತು. ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್ ಯಾರ್ಡ್ ನಲ್ಲಿ ಅನಗತ್ಯವಾಗಿ ವಾಹನಗಳ ಪಾರ್ಕಿಂಗ್ ಗೆ ಅವಕಾಶ ನೀಡಲಾಗದು, ಅರ್ಧಗಂಟೆಗೆ ಅಧಿಕ ಸಮಯ ತಪಾಸಣೆ ಗಾಗಿ ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದರು.

ಚೆಕ್ ಪೋಸ್ಟ್ ನಲ್ಲಿ ಇನ್ನಷ್ಟು ಅಧಿಕ ಸಿಬಂದಿಗಳನ್ನು ನೇಮಿಸಲು, ಕೌ೦ಟರ್ ಸ್ಥಾಪಿಸಲು ಆಯುಕ್ತರಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಹಾನಿಯಾಗಿರುವ ಹೈ ಮಾಸ್ಟ್  ದೀಪವನ್ನು ಶೀಘ್ರ ದುರಸ್ಥಿಗೊಳಿಸಲಾಗುವುದು, ಮಂಜೇಶ್ವರ ಪಂಚಾಯತ್ ವತಿಯಿಂದ 17 ಬೀದಿ ದೀಪಗಳನ್ನು ಅಳವಡಿಸಲಾಗುವುದು.  ಅಬಕಾರಿ  ಚೆಕ್ ಪೋಸ್ಟ್ ನಲ್ಲಿನ ವಾಹನ ತಪಾಸಣೆಯನ್ನು ಪಾರ್ಕಿಂಗ್ ಯಾರ್ಡ್ ಗೆ   ಸ್ಥಳಾಂತರಿಸಲಾಗುವುದು, ಈಗಾಗಲೇ ಗುರುತಿಸಿರುವ ಪಾರ್ಕಿಂಗ್ ಸ್ಥಳದಲ್ಲಿ ವಾಹನ ಪಾರ್ಕಿಂಗ್ ಗೆ  ಮಾರಾಟ ತೆರಿಗೆ ಇಲಾಖೆ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ. ರಸ್ತೆ ಸುರಕ್ಷಾ ನಿಧಿಯಿಂದ  ಮೋಟಾರ್ ವಾಹನ ಇಲಾಖೆ ಚೆಕ್ ಪೋಸ್ಟ್ ಪರಿಸರದಲ್ಲಿ ಅಪಘಾತ ವಲಯ ಎಂದು ಸೂಚನಾ ಫಲಕ ಅಳವಡಿಸಲಿದೆ.

ಅಪಘಾತ ಮರುಕಳಿಸದಂತೆ ಗಮನಹರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಎ.ಶ್ರೀನಿವಾಸ್ ಹೇಳಿದರು. ಹೆಚ್ಚುವರಿ ದಂಡಾಧಿಕಾರಿ ವಿ.ಪಿ ಮುರಳೀಧರನ್, ಸಾರಿಗೆ ಅಧಿಕಾರಿ ಸಾದಿಕ್ ಅಲಿ, ವಿವಿಧ ಇಲಾಖಾ ಅಧಿಕಾರಿಗಳಾದ ಕೆ.ಜಿನದೇವನ್, ಎ.ಕೆ ರಾಜೀವನ್,  ವಿ.ಎಂ ಶ್ರೀಕಾಂತ್, ಕೆ.ಪಿ ಪದ್ಮಕುಮಾರ್, ಎ.ಕೆ ಪರಮೇಶ್ವರ, ಎಂ.ಧನಂಜಯ, ಕೆ. ಬಿ ಅಜಿತ್ ಕುಮಾರ್, ಎ.ಅಬೂಬಕ್ಕರ್ ಸಿದ್ದಿಕ್, ಪಿ .ಪಿ  ನಂದ ಕುಮಾರ್  ಮೊದಲಾದವರು ಉಪಸ್ಥಿತರಿದ್ದರು.

See also  ಇಬ್ಬರು ಮಕ್ಕಳೊಂದಿಗೆ ವಿವಾಹಿತ ಮಹಿಳೆ ನಾಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು