News Kannada
Tuesday, October 04 2022

ಕರಾವಳಿ

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮರಳು ದಾಸ್ತಾನು ಆರಂಭ - 1 min read

Photo Credit :

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮರಳು ದಾಸ್ತಾನು ಆರಂಭ

ಬಂಟ್ವಾಳ: ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ  ಜಿಲ್ಲೆಯಲ್ಲಿ ಜಾರಿಗೆ ಬರಲಿರುವ ನೂತನ ಮರಳು ನೀತಿಯನ್ವಯ ಲೋಕೋಪಯೋಗಿ ಇಲಾಖೆ ಮೂಲಕ ಮರಳು ವಿತರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಎಂಬಂತೆ ಬಿ.ಸಿ.ರೋಡಿನಲ್ಲಿ ಮರಳು ದಾಸ್ತಾನು ಆರಂಭಗೊಂಡಿದೆ.

ಬಿ.ಸಿ.ರೋಡಿನ ವೃತ್ತದ ಬಳಿಯಿರುವ ಖಾಸಗಿ ಜಮೀನಿನಲ್ಲಿ ತಾತ್ಕಾಲಿಕವಾಗಿ ಮರಳು ಸಂಗ್ರಹಗಾರವನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಂದಲೇ ಮರಳು ವಿತರಣೆ ನಡೆಯಲಿದೆ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಉಮೇಶ್ ಭಟ್ ತಿಳಿಸಿದ್ದಾರೆ.

ನೂತನ ಮರಳು ನೀತಿಯನ್ವಯ ಮರಳುಗಾರಿಕೆಗೆ ದ.ಕ.ಜಿಲ್ಲೆಯಲ್ಲಿ 37 ಬ್ಲಾಕ್ ಗಳನ್ನು ಗುರುತಿಸಲಾಗಿದ್ದು, ಈ ಪೈಕಿ 21 ಬ್ಲಾಕ್ ಬಂಟ್ವಾಳ ತಾಲೂಕಿನಲ್ಲಿದೆ. ಅತೀ ಹೆಚ್ಚು ಮರಳುಗಾರಿಕೆ ನಡೆಯುವ ತಾಲೂಕು ಎಂಬ ಹೆಗ್ಗಳಿಕೆ ಇರುವ ಬಂಟ್ವಾಳದಲ್ಲಿ ಮರಳುಗಾರಿಕೆ ನಡೆಸಲು ಗಣಿ ಇಲಾಖೆ ನದಿತಟದ ಪ್ರದೇಶಗಳಾದ ಸಜಿಪಪಡು, ಸಜಿಪಮುನ್ನೂರು, ಬರಿಮಾರು, ಪುದು ತುಂಬೆ, ಕಡೇಶ್ವಾಲ್ಯ, ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ಮಣಿನಾಲ್ಕೂರು, ಸರಪಾಡಿ ಮೊದಲಾದೆಡೆ 21 ಬ್ಲಾಕ್ ಗಳನ್ನು ಗುರುತಿಸಲಾಗಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆಯೂ ನಡೆದಿದೆ.

ತಾಲೂಕಿನ  ಬಿ.ಸಿ.ರೋಡು, ತುಂಬೆ ಹಾಗೂ ಕರಿಯಂಗಳದಲ್ಲಿ ಕಂದಾಯ ಇಲಾಖೆಯ ಮಾರ್ಗದರ್ಶನದಲ್ಲಿ  ಮರಳೂ ಸಂಗ್ರಹಕ್ಕೆ ಜಮೀನು ಗುರುತಿಸಲಾಗಿದ್ದು, ಈ ಪೈಕಿ ಬಿ.ಸಿ.ರೋಡಿನ ಖಾಸಗಿ ಜಮೀನೂ ಸೇರಿದೆ. ಇಲ್ಲಿ ದಾಸ್ತಾನಿರಿಸಿದ ಮರಳನ್ನು ಗ್ರಾಹಕರು ಅಗತ್ಯ ದಾಖಲೆಗಳ ಜೊತೆಗೆ ಅರ್ಜಿಯನ್ನು ಲೋಕೋಪಯೋಗಿ ಇಲಾಖೆಗೆ ಸಲ್ಲಿಸಿ ಪಡೆಯಬಹುದಾಗಿದೆ.  ಈ ಸಂಬಂಧ  ಜಿಲ್ಲಾಧಿಕಾರಿ ನೇತೃತ್ವದ  ಮರಳು ಉಸ್ತುವಾರಿ ಜಿಲ್ಲಾ ಸಮಿತಿ ನಿಬಂಧನೆಗಳನ್ನು ರೂಪಿಸಿದ್ದು, ಸೂಕ್ತ ಬೆಲೆಯನ್ನೂ ನಿಗದಿಪಡಿಸಿದೆ.

ಮರಳಿನ ವಿತರಣಾ ದರವನ್ನು ಪ್ರತೀ ಘ.ಮೀಟರ್ ಗೆ 625 ಎಂದು ನಿಗದಿಪಡಿಸಿದ್ದು, ಅಂದಾಜಿನಂತೆ ಒಂದು ಟಿಪ್ಪರ್ ಗೆ 6 ಘ.ಮೀ. ಮರಳಿನ ಅವಶ್ಯಕತೆ ಇದ್ದು, ಸುಮಾರು 4000 ರೂಗೆ  ಮರಳು ದೊರೆಯತ್ತದೆ, ಸಾಗಾಟ ವೆಚ್ಚ ಗ್ರಾಹಕರು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಅರ್ಜಿಯ ಜೊತೆಯಲ್ಲಿ ಕಾಮಗಾರಿಗೆ ಅಗತ್ಯವಿರುವ ಮರಳಿನ ಒಟ್ಟು ಪ್ರಮಾಣ, ಕಾಮಗಾರಿ ನಡೆಯುವ ಸ್ಥಳದ ಬಗ್ಗೆ ಸಂಬಂಧಪಟ್ಟ ಸ್ಥಳಿಯಾಡಳಿತ ಸಂಸ್ಥೆಗಳಿಂದ ನಿರಾಪೇಕ್ಷಣಾ ಪತ್ರ, ಹಾಗೂ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್ ಪಾವತಿಸತಕ್ಕದ್ದು. ಜಿಪಿಎಸ್ ಉಪಕರಣಗಳನ್ನು ಹೊಂದಿ ವಾಹನಗಳಲ್ಲಿ ಮಾತ್ರ ಮರಳುಸಾಗಿಸಬಹುದಾಗಿದೆ.  ದಾಸ್ತಾನು ಇರಿಸಿದ ಮರಳು ವಿತರಣೆ ಸಂಬಂಧ  ಲೋಕೋಪಯೋಗಿ ಇಲಾಖಾ  ಇಂಜಿನಿಯರ್ ಉಮೇಶ್ ಭಟ್ ಗುತ್ತಿಗೆದಾರರಿಗೆ ಅಗತ್ಯ ನಿರ್ದೇಶನ ನೀಡಿದರು. ದಾಸ್ತಾನು ಹಾಗೂ ವಿತರಣೆ ಜವಬ್ದಾರಿ ವಹಿಸಿದ ಗುತ್ತಿಗೆದಾರ ಪುರುಷೋತ್ತಮ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

 

See also  ಜನರಿಗೆ ಕೋಮುಸಂಘರ್ಷ ಬೇಕಾಗಿಲ್ಲ: ರಾಮಲಿಂಗಾ ರೆಡ್ಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು