News Kannada
Friday, October 07 2022

ಕರಾವಳಿ

ನಿಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ನಿಟ್ಟೆ ಎಕ್ಸ್ಪ್ರೊ- 2016 - 1 min read

Photo Credit :

ನಿಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ನಿಟ್ಟೆ ಎಕ್ಸ್ಪ್ರೊ- 2016

ಕಾರ್ಕಳ: ಪ್ರತಿಯೊಂದು ಕ್ಷೇತ್ರದಲ್ಲೂ ನಂಬಿಕೆ, ಸಮಾಜದಲ್ಲಿನ ಪರಸ್ಪರ ಸಂವಹನಕಲೆ ಮಹತ್ವವಾದ ಸ್ಥಾನವನ್ನು ವಹಿಸುತ್ತದೆ ಎಂದು ನಿಟ್ಟೆ ತಾಂತ್ರಿಕ ವಿದ್ಯಾಲಯದ ಇಂಡಸ್ಟ್ರೀ-ಇನ್ಸ್ಟಿಟ್ಯೂಟ್ ಕೊಲಾಬರೇಶನ್ ವಿಭಾಗದ ನಿರ್ದೇಶಕ ಡಾ.ಎ.ಎನ್ ಪರಮೇಶ್ವರನ್ ಅಭಿಪ್ರಾಯಪಟ್ಟರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಸುಮಾರು 25 ವರ್ಷಗಳಿಂದ ನಡೆದುಕೊಂಡು ಬಂದಿರುವ ಇ.ಎಕ್ಸ್.ಪಿ.ಆರ್.ಒ- 2016 ಅಂತಿಮ ಬಿ.ಇ ವಿದ್ಯಾರ್ಥಿಗಳ ಪ್ರೊಜೆಕ್ಟ್ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಕಾಣಸಿಗುತ್ತಿರುವ ಅದೆಷ್ಟೋ ಸಂಶೋಧನೆಗಳಿಗೆ ಇಂತಹ ಎಕ್ಸ್ಪೋಗಳು ಮುಖ್ಯಕಾರಣಗಳು ಎಂದರೆ ತಪ್ಪಾಗದು. ವಿದ್ಯಾರ್ಥಿಗಳಾಗಿದ್ದಾಗ ಜೀವನದಲ್ಲಿ ಸಂಶೋಧನೆಯ ಬಗೆಗೆ ಒಲವು ಮೂಡಿದರೆ ಅದು ಮುಂದುವರೆಯುವ ಸಾಧ್ಯತೆಗಳು ಹೆಚ್ಚು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ ಎನ್ ಚಿಪ್ಳೂಣ್ಕರ್ ವಿದ್ಯಾರ್ಥಿಗಳು ತರಗತಿಗಳಲ್ಲಿ ಹೊಸ ವಿಷಯದ ಬಗ್ಗೆ ಜ್ಞಾನ ಪಡೆದರೂ ಅದನ್ನು ಪ್ರಾಯೋಗಿಕವಾಗಿ ಹೇಗೆ ಉಪಯೋಗಿಸಬಹುದೆಂದು ಇಂತಹ ಪ್ರಾಜೆಕ್ಟ್ ಗಳೇ ತಿಳಿಸುತ್ತದೆ. ಇದಕ್ಕಾಗಿ ಕಾಲೇಜು ವಿವಿಧ ವಿಷಯಗಳ ಬಗೆಗೆ ಹಮ್ಮಿಕೊಳ್ಳುತ್ತಿರುವ ತರಬೇತಿ ಕಾರ್ಯಗಾರಗಳ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಎಕ್ಸ್ಪ್ರೋ ಆಬ್ಸ್ಟ್ರಾಕ್ಟ್ ವಾಲ್ಯೂಮ್-15 ನ್ನು ಬಿಡುಗಡೆಗೊಳಿಸಲಾಯಿತು.

ಎಕ್ಸ್ಪ್ರೋ ಮುಖ್ಯಸ್ಥ ಡಾ.ರಾಧಾಕೃಷ್ಣನ್ ಕೆ ಸ್ವಾಗತಿಸಿದರು. ಪ್ರೊ. ರಾಜು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಅನನ್ಯಾರಾವ್ ಪ್ರಾರ್ಥಿಸಿದರು. ಉಪನ್ಯಾಸಕ ರಂಜನ್ ಕುಮಾರ್ ವಂದಿಸಿದರು. ಉಪನ್ಯಾಸಕಿ ಅಸ್ಮಿತ ಕಾರ್ಯಕ್ರಮ ನಿರೂಪಿಸಿದರು.

See also  ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಿದ ತೃಪ್ತಿ ನನ್ನಲ್ಲಿದೆ: ರಮಾನಾಥ ರೈ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು