News Kannada
Monday, October 03 2022

ಕರಾವಳಿ

ಮೂಡುಬಿದಿರೆ: ಸೇತುವೆಯಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ - 1 min read

Photo Credit :

ಮೂಡುಬಿದಿರೆ: ಸೇತುವೆಯಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಮೂಡುಬಿದಿರೆ: ಇಲ್ಲಿಗೆ ಸಮೀಪದ ಕಲ್ಲಮುಂಡ್ಕೂರು ಮತ್ತು ಪುತ್ತಿಗೆ ಗ್ರಾ.ಪಂನ ಗಡಿಭಾಗದಲ್ಲಿರುವ ಕೈರ್ದಬೆಟ್ಟು ಹಳೆನೀರು ಸೇತುವೆಯಡಿಯಲ್ಲಿ ಅನಾಥವಾಗಿ ನವಜಾತ ಹೆಣ್ಣು ಶಿಶುವೊಂದು ಗುರುವಾರ ಬೆಳಿಗ್ಗೆ ಪತ್ತೆಯಾಗಿದ್ದು, ಮಗುವಿನ ಹೆತ್ತವರಿಗಾಗಿ ಮೂಡುಬಿದಿರೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಕಲ್ಲಮುಂಡ್ಕೂರು ಗ್ರಾ.ಪಂ ಬಳಿಯ ಕೈಕುಡೆ ಬಳಿಯ ಮಾಳಿಗೆ ಮನೆಯ ಸಂತೋಷ್ ಭಟ್ ಎಂಬವರು ತಮ್ಮ ಮನೆಯ ನಾಯಿಯ ಜತೆಗೆ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಸೇತುವೆಯ ಬಳಿ ನಾಯಿ ಯಜಮಾನನ ಕೈಯಿಂದ ತಪ್ಪಿಸಿಕೊಂಡು ಓಡಿ ಸೇತುವೆಯ ಕೆಳಗಡೆ ಹೋದಾಗ ಅದನ್ನು ಹಿಂಬಾಲಿಸಿಕೊಂಡು ಅಳುತ್ತಿದ್ದ ಮಗುವಿನ ಬಳಿ ನಾಯಿ ನಿಂತಿತ್ತು. ಮಗುವಿನ ಮುಖ-ಮೈಮೇಲೆ ಇರುವೆಗಳು ಮುತ್ತಿಕೊಂಡಿದ್ದವು. ಇದನ್ನು ಗಮನಿಸಿದ ಅವರು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದರು. ನಂತರ ಮನೆ ಸಮೀಪದವರೆಲ್ಲಾ ಸೇರಿದರು. ಆದರೆ ಮಗುವನ್ನು ಯಾರೂ ಎತ್ತಿಕೊಳ್ಳಲು ಮುಂದೆ ಬಾರದೆ ಇದ್ದಾಗ ಕಲ್ಲಮುಂಡ್ಕೂರು ಗ್ರಾ.ಪಂ ಸದಸ್ಯ ಸತೀಶ್ ಕಲ್ಲಮುಂಡ್ಕೂರು ಅವರೇ ಮೋರಿಯಿಂದ ಮಗುವನ್ನು ಎತ್ತಿಕೊಂಡು ಬಂದು ಮಗುವಿಗೆ ಆಹಾರವನ್ನು ನೀಡಿ ನಂತರ ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಪುತ್ತಿಗೆ ವ್ಯಾಪ್ತಿಯ ಮೇಲ್ವೀಚಾರಕಿ ಭಾರತಿ ಮತ್ತು ಮೂಡುಬಿದಿರೆ ವ್ಯಾಪ್ತಿಯ ಮೇಲ್ವೀಚಾರಕಿ ನಾಗರತ್ನ ಅವರು ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ಪ್ರಥಮ ಚಿಕಿತ್ಸೆಗಾಗಿ ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದಾಗ ಹೊಕ್ಕುಳ ಬಳ್ಳಿ ಕತ್ತರಿಸದೆ ಇರುವುದರಿಂದ ಹೆರಿಗೆಯಾಗಿ 5 ದಿನದ ಮಗುವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಗುವನ್ನು ಮೂಡುಬಿದಿರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ನಂತರ ಅಲ್ಲಿಂದ ಪುತ್ತೂರಿನ ದತ್ತು ಸೇವಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.

ಅನಾಥ ಮಗು ಯಾರದ್ದು..? : ಮಗುವಿನ ಹೊಕ್ಕುಳ ಬಳ್ಳಿಯನ್ನು ಕತ್ತರಿಸದೆ ಇರುವುದರಿಂದ ಅನೈತಿಕ ಸಂಬಂಧದಿಂದ ಹುಟ್ಟಿದ ಮಗುವನ್ನು ಯಾರೋ ಸೇತುವೆಯ ಬಳಿ ಬಿಟ್ಟು ಹೋಗಿರಬಹುದು, ಮಗುವಿನ ಸ್ಥಿತಿಯಲ್ಲಿ ಕೊಂಚ ಬದಲಾವಣೆ ಕಂಡಿರುವುದರಿಂದ ಅಥವಾ ಹೆಣ್ಣು ಮಗುವಾಗಿರುವುದರಿಂದ ಕಟು ಹೃದಯದ ಹೆತ್ತಬ್ಬೆ ಬಿಟ್ಟು ಹೋಗಿರಬಹುದೆಂದು ಸಂಶಯಿಸಲಾಗಿದೆ . ಸೇತುವೆಯಡಿಯಲ್ಲಿ ಅನಾಥವಾಗಿ ಇದ್ದ  ಈ ಹಸುಳೆ ಯಾರದೆಂದು ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.

ವಿಳಂಬವಾದ ಪೊಲೀಸ್ ಕಾರ್ಯ : ಮಗುವನ್ನು ಮಧ್ಯಾಹ್ನದ ಮೊದಲೆ ಚಿಕಿತ್ಸೆಗಾಗಿ ಮಂಗಳೂರಿಗೆ ದಾಖಲಿಸಬೇಕಾಗಿತ್ತು. ಆದರೆ ಬೆಳಿಗ್ಗೆ 10.30ರ ವೇಳೆಗೆ ಪೊಲೀಸರು ಮಗುವಿನ ಮಾಹಿತಿಯನ್ನು ಪಡೆದುಕೊಂಡು  ಎಫ್ಐಆರ್ ದಾಖಲಿಸಲು  ಪೊಲೀಸ್ ಠಾಣೆಗೆ ಹೋದವರು ನಂತರ ಮಧ್ಯಾಹ್ನ ಸಮಯ 1 ರವರೆಗೆ ಬಾರದ ಇದ್ದ ಹಿನ್ನಲೆಯಲ್ಲಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕರು ಪೊಲೀಸ್ ಠಾಣೆಗೆ ಧಾವಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನಂತರ  ಮಗುವನ್ನು ಹಸ್ತಾಂತರಿಸಲು ಪೊಲೀಸರು ತೆರಳಿದರು.

ಅನಾಥ ಮಗುವಿಗೆ ಭಾರೀ ಬೇಡಿಕೆ : ತಮಗೆ ಮಗು ಬೇಡವೆಂದು ಹೆತ್ತವರಿಂದ ನಿರ್ಲಕ್ಷ್ಯಕ್ಕೊಳಗಾಗಿ ಸೇತುವೆಯಡಿಯಲ್ಲಿ ಪತ್ತೆಯಾದ ಹೆಣ್ಣು ಮಗುವನ್ನು ನೋಡಲು ಹಲವು ಜನರು ಆಸ್ಪತ್ರೆಗೆ ಆಗಮಿಸಿದ್ದರು. ಅಲ್ಲದೆ ಈ ಮಗುವನ್ನು ತಮಗೆ ಸಾಕಲು ನೀಡುವಂತೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಲ್ಲಿ  ಕೆಲವರು ಬೇಡಿಕೆಯನ್ನು ಇಟ್ಟ ಘಟನೆಯೂ ನಡೆದಿದೆ. ಆದರೆ ಅಧಿಕಾರಿಗಳು ಕಾನೂನು ಪ್ರಕಾರವಾಗಿ ಮಗುವನ್ನು ಪುತ್ತೂರು ದತ್ತು ಸೇವಾ ಕೇಂದ್ರಕ್ಕೆ ನೀಡಲಾಗುವುದು ಅಲ್ಲಿಂದ ತಾವು ಕಾನೂನು ಕ್ರಮದ ಮೂಲಕ ಪಡೆಯುವಂತೆ ಸಲಹೆ ನೀಡಿದ್ದಾರೆ.
 

See also  ಆಡಳಿತ ಚುರುಕುಗೊಳಿಸುವ ಜವಾಬ್ದಾರಿ ಲೋಕಾಯುಕ್ತಗಿದೆ: ನ್ಯಾಯಮೂರ್ತಿ ಪಿ.ವಿಶ್ವನಾಥ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು