News Kannada
Sunday, October 02 2022

ಕರಾವಳಿ

ವಿದ್ಯುತ್ ತಂತಿ ದುರಸ್ತಿ: ವಿದ್ಯುತ್ ಶಾಕ್ ಹೊಡೆದು ಇಲೆಕ್ಟ್ರಿಷಿಯನ್ ಸಾವು - 1 min read

Photo Credit :

ವಿದ್ಯುತ್ ತಂತಿ ದುರಸ್ತಿ: ವಿದ್ಯುತ್ ಶಾಕ್ ಹೊಡೆದು ಇಲೆಕ್ಟ್ರಿಷಿಯನ್ ಸಾವು

ಬಂಟ್ವಾಳ: ಇಲೆಕ್ಟ್ರಿಷಿಯನ್ ನೊಬ್ಬರು ವಿದ್ಯುತ್ ಕಂಬ ಹತ್ತಿ ತಂತಿ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ದಾರುಣ ಘಟನೆ ವೀರಕಂಬ ಗ್ರಾಮದ ನಡುವಳಚ್ಚಿಲ್ ಎಂಬಲ್ಲಿ ಗುರುವಾರ ನಡೆದಿದೆ.

ವೀರಕಂಬ ಗ್ರಾಮದ ಕೆಲಿಂಜ ಸಮೀಪದ ನಡುವಳಚ್ಚಿಲ್ ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರ ಸುರೇಶ್ ಪೂಜಾರಿ(29) ಮೃತಪಟ್ಟ ಇಲೆಕ್ಟ್ರಿಷಿಯನ್. ಇವರು ನಡುವಳಚ್ಚಿಲ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ನಡೆಸಲು ಮನೆಯನ್ನು ಪಡೆದಿದ್ದು, ಶುಕ್ರವಾರ ಈ ಮನೆಯಲ್ಲಿ ಕುಳಿತುಕೊಳ್ಳಲು ಸಿದ್ಧತೆಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ತಮ್ಮ ಬಾಡಿಗೆ ಮನೆಗೆ ಹೋಗುವ ವಿದ್ಯುತ್ ತಂತಿಯನ್ನು ದುರಸ್ತಿ ಮಾಡಲು ಕಂಬ ಏರಿದ್ದರು. ದುರಸ್ತಿ ಮಾಡುತ್ತಿದ್ದ ವೇಳೆ ಸರ್ವೀಸ್ ತಂತಿ ಎಚ್ಟಿ ತಂತಿಗೆ ಸ್ಪರ್ಶಿಸಿದ ಪರಿಣಾಮ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಇದರಿಂದ ಅವರು ಕಂಬದಿಂದ ಕೆಳಗಡೆ ಬಿದ್ದಿದ್ದಾರೆ. ಬಳಿಕ ಅವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಹಲವು ಸಮಯಗಳ ವರೆಗೂ ಅವರು ರಸ್ತೆ ಬದಿಯಲ್ಲಿ ಬಿದ್ದಿದ್ದರೂ ಕೂಡಾ ಯಾರೂ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿರಲಿಲ್ಲ. ಕೆಲವು ಸಮಯಗಳ ಬಳಿಕ ಚಾಲಕರೊಬ್ಬರು ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ ಎಂದು ಪ್ರತ್ಯಕ್ಷಿದರ್ಶಿಗಳು ತಿಳಿಸಿದ್ದಾರೆ.

ಅವರು ಈ ಹಿಂದೆ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ಸಮಯಗಳ ಹಿಂದೆ ಕೆಲಿಂಜ ಸಮೀಪ ಅಮ್ಮ ಎಂಬ ಹೆಸರಿನ ಅಂಗಡಿ ಇಟ್ಟುಕೊಂಡು ವಿದ್ಯುತ್ ದುರಸ್ತಿ ಕಾಂಟ್ರಾಕ್ಟರ್ ಕೆಲಸ ಮಾಡುತ್ತಿದ್ದರು. ಮೃತ ಸುರೇಶ್ ಅವರಿಗೆ ವರ್ಷದ ಹಿಂದೆ ವಿವಾಹ ನಡೆದಿತ್ತು. ಅವರ ಪತ್ನಿ ತುಂಬು ಗರ್ಭೀಣಿಯಾಗಿದ್ದು, 10 ದಿನಗಳಲ್ಲಿ ಹೆರಿಗೆಯಾಗುವ ಸಾಧ್ಯತೆ ಇತ್ತು. ಇದರ ನಡುವೆ ಪತಿ ಮೃತಪಟ್ಟಿದ್ದರಿಂದ ಪತ್ನಿ ಆಘಾತಗೊಳಗಾಗಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

See also  ಕಾನೂನು ಬಾಹಿರವಾಗಿ ಮರಳು ಸಾಗಾಟ 18 ಲಾರಿ ವಶಕ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು