News Kannada
Saturday, October 01 2022

ಕರಾವಳಿ

ಹೆಬ್ರಿ ನಾಡ್ಪಾಲು ಭೋಜಮಾಸ್ಟ್ರು ಕೊಲೆ ಪ್ರಕರಣ : ನಕ್ಸಲ್ ವಾದಿ ಸಂಜೀವಗೆ ನ್ಯಾಯಾಂಗ ಬಂಧನ - 1 min read

Photo Credit :

ಹೆಬ್ರಿ ನಾಡ್ಪಾಲು ಭೋಜಮಾಸ್ಟ್ರು ಕೊಲೆ ಪ್ರಕರಣ : ನಕ್ಸಲ್ ವಾದಿ ಸಂಜೀವಗೆ ನ್ಯಾಯಾಂಗ ಬಂಧನ

ಕಾರ್ಕಳ: ಹೆಬ್ರಿ ನಾಡ್ಪಾಲು ಭೋಜ ಮಾಸ್ಟ್ರು ಕೊಲೆ ಪ್ರಕರಣದ ಎರಡನೇ ಆರೋಪಿ ತುಮಕೂರು ಪಾವಗಡದ ಸಂಜೀವ ಅಲಿಯಾಸ್ ಸಲೀಂ ಎಂಬಾತನ್ನು ಪಾವಗಡ ಬಸ್ ನಿಲ್ದಾಣ ಬಳಿಯಲ್ಲಿ ಕಾರ್ಕಳ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಬಂಧಿಸಿದ್ದಾರೆ.

2008ರ ಚುನಾವಣೆಯ ಮುನ್ನ ದಿನ ಹೆಬ್ರಿ ನಾಡ್ಪಾಲಿನಲ್ಲಿ ನಕ್ಸಲ್ ವಾದಿಗಳು ನಡೆಸಿರುವ ಗುಂಡಿನ ದಾಳಿಯಲಿ ಬೋಜಮಾಸ್ಟ್ರು ದಾರುಣವಾಗಿ ಬಲಿಯಾಗಿದ್ದರು. ಮೃತ ಭೋಜಮಾಸ್ಟ್ರು ಪೊಲೀಸ್ ಮಾಹಿತಿದಾರನಾಗಿದ್ದು ಈ ಆರೋಪದ ಹಿನ್ನಲ್ಲೆಯಲ್ಲಿ ಮೊದಲ ಬಾರಿಗೆ ಅವರ ಮನೆಗೆ ದಾಳಿ ನಡೆಸಿದ ನಕ್ಸಲ್ ವಾದಿಗಳು ಎಚ್ಚರಿಕೆ ನೀಡಿ ಬಾನ್ನೆತ್ತರಕ್ಕೆ ಗುಂಡಿನ ಹಾರಾಟ ನಡೆಸಿದ್ದರು. ಈ ನಡುವೆ ಮನೆಯ ಬಾಗಿಲ ಬಳಿಯಲ್ಲಿ ತೂಗು ಹಾಕಿದ ತಲವಾರನ್ನು ಝಳಪಿಸಿ ಭೋಜ ಮಾಸ್ಟ್ರು ತನ್ನ ಪೌರುಷ ತೋರಿಸಿದ್ದರು.

ಈ ಎಲ್ಲಾ ಘಟನಾವಳಿಯಿಂದ ಮತ್ತೇ ನಕ್ಸಲ್ ವಿರುದ್ಧ ಸಿಡಿದೆದ್ದ ಭೋಜ ಮಾಸ್ಟ್ರು ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದರೆಂಬುವುದಕ್ಕೆ ಅವರನ್ನು ಕೊಲೆಗೈದ ಸಂದರ್ಭದಲ್ಲಿ ಅವರು ಉಪಯೋಗಿಸಿದ ಬೈಕ್ ವೊಂದು ಪೊಲೀಸರಿಗೆ ಸೇರಿದೆಂಬುವುದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಒಟ್ಟು 11 ಮಂದಿ ಆರೋಪಿಗಳಾಗಿದ್ದು 1ನೇ ಆರೋಪಿ ಮನೋಹರ್ ಹಾಗೂ ಮೂರನೇ ಆರೋಪಿ ವಸಂತ ಪೊಲೀಸರು ನಡೆಸಿರುವ ಎನ್ ಕೌಂಟರಿಗೆ ಸಾವನ್ನಪ್ಪಿದ್ದರು. 2ನೇ ಆರೋಪಿ ಸಂಜೀವ ಅಲಿಯಾಸ್ ಸಲೀಂನಾಗಿದ್ದಾನೆ. 10 ಆರೋಪಿ ಶಂಕರಪ್ಪ ಅಲಿಯಾಸ್ ವೀರಮಣಿ ಎಂಬಾತನನ್ನು 2016 ನವಂಬರ್ ತಿಂಗಳಿನಲ್ಲಿ  ತಮಿಳುನಾಡಿನ ಪೊಲೀಸರು ಬಂಧಿಸಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರಿಗೆ ಹಸ್ತಾಂತರಿಸಿದ್ದರು.

ಪ್ರಸ್ತುತ ಬಂಧಿತ ಆರೋಪಿ ಸಂಜೀವ ಅಲಿಯಾಸ್ ಸಲೀಂ ವಿರುದ್ಧ ಆಂಧ್ರಪ್ರದೇಶದಲ್ಲಿ ಸುಮಾರು 20ಕ್ಕೂ ಮಿಕ್ಕಿ ಕೇಸು ದಾಖಲಾಗಿದ್ದು ಅಲ್ಲಿನ ಪೊಲೀಸರಿಗೆ ಆತನ ಶರಣಾಗಿದ್ದನು. ನಂತರದ ದಿನಗಳಲ್ಲಿ ಎಲ್ಲಾ ಪ್ರರಣಗಳು ನ್ಯಾಯಾಲಯವು ಖುಲಾಸೆಗೊಳಿಸಿದೆ ಎಂದು ತಿಳಿದು ಬಂದಿದೆ. ನಕ್ಸಲ್ ಚಟುವಟಿಕೆಗಳಿಂದ ದೂರವಾಗಿ ಅಲ್ಲಿನ ಪೊಲೀಸರಿಗೆ ಮಾಹಿತಿದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂಜೀವ ಅಲಿಯಾಸ್ ಸಲೀಂ ನಕ್ಸಲ್ ವಾದಿಗಳ ಹದ್ದಿನ ಕಣ್ಣಿಗೂ ಒಳಗಾಗಿದ್ದಾನೆ.

ಹೆಬ್ರಿ ಠಾಣಾಧಿಕಾರಿ ಸೀತಾರಾಮ, ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ರಫೀಕ್ ಹಾಗೂ ಸಿಬ್ಬಂದಿಗಳು ಆರೋಪಿ ಸಂಜೀವ ಅಲಿಯಾಸ್ ಸಲೀಂನನ್ನು ಬಂಧಿಸಿದ್ದಾರೆ. ನ್ಯಾಯಲಯವು ಆರೋಪಿಗೆ ಮೇ 11ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.
 

See also  ಸದೃಡ ವಿಚಾರಧಾರೆಗಳಿಂದ ಬಿಜೆಪಿ ಬಲಿಷ್ಠ: ವಿಶ್ವೇಶ್ವರ ಹೆಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು