News Kannada
Friday, September 30 2022

ಕರಾವಳಿ

ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಗೈದ ಪ್ರಮೋದ್ ಮಧ್ವರಾಜ್ - 1 min read

Photo Credit :

ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಗೈದ ಪ್ರಮೋದ್ ಮಧ್ವರಾಜ್

ಕಾರ್ಕಳ: ತಾಲೂಕು ಕಚೇರಿಗೆ ಭೇಟಿ ನೀಡಿದ ಕಂದಾಯ ಇಲಾಖೆಗಳ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ಕಚೇರಿಯ ವಿವಿಧ ವಿಭಾಗಗಳ ಪರಿಶೀಲನೆ ಗೈದರು.

ಕಾರ್ಕಳ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ಬೆಳೆ ಹಾನಿ ಬಗ್ಗೆ ತಕ್ಷಣ ಪರಿಹಾರ ನೀಡುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಪಿಂಚಣಿ ಅರ್ಜಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕಂದಾಯ ನಿರೀಕ್ಷಕ ಹಾಘೂ ಗ್ರಾಮಕರಣಿಕರಿಗೆ ತಿಳಿಸಿದರು. ಅರ್ಜಿಗೆ ನೀಡಿದ ಒಂದು ತಿಂಗಳ ಅವಧಿಯಲ್ಲಿ ಪರಿಹಾರ ಮಾಡುವಂತೆ ಈ ಸಂದರ್ಭದಲ್ಲಿ ತಿಳಿಸಿದರು.

ಡೀಮ್ಡ್ ಹಾಗೂ ಕುಮ್ಕಿ ಜಮೀನಿನಲ್ಲಿ ನಿರ್ಮಿಸಿದ ಮನೆಗಳಿಗೆ ಹಕ್ಕು ಪತ್ರ ನೀಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.ಈ ಕಡತಗಳನ್ನು ಅಕ್ರಮ-ಸಕ್ರಮ ಬೈಠಕ್ಗೆ ನೀಡುವ ಅಗತ್ಯ ಇಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಡೀಮ್ಡ್ ಫಾರೆಸ್ಟ್ ಎಂದು ಹೇಳಲಾಗುವ ಜಮೀನಿನಲ್ಲಿ ಅರಣ್ಯ ಇಲ್ಲದೇ ಇರುವ ಸರ್ವೇ ನಂಬ್ರಗಳನ್ನು ವಿರಹಿತಗೊಳಿಸುವ ಬಗ್ಗೆ ಕಂದಾಯ ಇಲಾಖೆ ,ಅರಣ್ಯ ಇಲಾಖೆ ಇವರ ಸಹಭಾಗಿತ್ವದಲ್ಲಿ ಪ್ರಸ್ತಾವನೆ ತಯಾರಿಸಿ ಸರಕಾರಕ್ಕೆ ಸಲ್ಲಿಕೆಯಾಗಿದ್ದು, ಆ ಬಗ್ಗೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರಕಾರದ ಅಂಗಣದಲ್ಲಿ ಇದೆ ಎಂದರು.

ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಅವರವರ ಅಹವಾಲುಗಳಿಗೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ತಾಲೂಕು ಕಂದಾಯ ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ಕಿವಿಮಾತು ಹೇಳಿದರು.  ಸರ್ವೇಕಾರ್ಯದ ಸಾರ್ವಜನಿಕ ದೂರುಗಳು ಸರ್ವೇ ಇಲಾಖೆಯ ಬಗ್ಗೆ ಸಾರ್ವಜನಿಕರಿಂದ ಭಾರೀ ದೂರುಗಳು ಕೇಳಿಬರುತ್ತಿದ್ದು ಇದರತ್ತ ಗಮನ ಹರಿಸುವ ಅಗತ್ಯ ಇದೆ ಎಂದು ಸರ್ವೇ ಇಲಾಖಾ ಸುಪರ್ ವೈಸರ್ ಹಾಗೂ ಸರ್ವೇಕಾರ್ಯಗಳಿಗೆ ತಿಳಿಯ ಪಡಿಸಿದರು. ಸಿಬ್ಬಂದಿಗಳ ಕೊರತೆಯ ಬಗ್ಗೆ ಪ್ರಸ್ತಾಪನೆ ಮುಂದಿಟ್ಟ ಬಗ್ಗೆ ಮಾತಾನಾಡಿದ ಪ್ರಮೋದ್, ಬೇಡಿಕೆಗನುಗುಣವಾಗಿ 9 ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಕಾರ್ಕಳ ತಾಲೂಕಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಗೆ 60 ಸರ್ವೇಯರ್ ಗಳನ್ನು ನಿಯೋಜಿಸುವ ಭರವಸೆ ನೀಡಿದರು.

ಕಡತ ನಿರ್ವಹಣೆಯ ಬಗ್ಗೆ ಮುಚ್ಚುಗೆ ವ್ಯಕ್ತಪಡಿಸಿದ ಅವರು ಗ್ರಾಮಕರಣಿಗರೊಬ್ಬರನ್ನು ಉಡುಪಿ ಕಡೆಗೆ ವರ್ಗಾವಣೆಗೆ ಸಹಮತ ವ್ಯಕ್ತಪಡಿಸುತ್ತಾ ಇಂತಹ ಒಬ್ಬ ದಕ್ಷ ನೌಕರ ಉಡುಪಿಗೆ ಅಗತ್ಯ ಇದೆ ಎಂದರು.  ಅಪರ ಜಿಲ್ಲಾಧಿಕಾರಿ ಅನುರಾಧ, ತಹಶೀಲ್ದಾರ್ ರಾಘವೇಂದ್ರ, ಅಪ್ತ ಸಹಾಯಕ ಅಭಿಜಿನ್, ಗ್ರೇಡ್ 2 ತಹಶೀಲ್ದಾರ್ ರಂಗಪ್ಪ,ಉಪತಹಶೀಲ್ದಾರ್, ಮಾಧವ, ಬಾಬೋಜಿರಾವ್ ಮೊದಲಾದವರು ಉಪಸ್ಥಿತರಿದ್ದರು.

ಸಕಾಲ ಕೇಂದ್ರ, ಭೂಮಿ ಕೇಂದ್ರ, ಆರ್ಆರ್ಟಿ ಕಚೇರಿ, ಭೂಮಾಪಕರ ಕೊಠಡಿ, ಉಪನೊಂದಾವಣಾಧಿಕಾರಿ ಕಚೇರಿ, ಪಡಸಾಲೆ ಮೊದಲಾದಡೆಗಳಿಗೆ ಭೇಟಿ ನೀಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.

See also  ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು