News Kannada
Friday, September 30 2022

ಕರಾವಳಿ

ವೈದ್ಯ ವಿದ್ಯಾರ್ಥಿಗಳಿಂದ ಸಮಾಜಕ್ಕೆ ವಿಶಿಷ್ಟ ಸೇವೆ - 1 min read

Photo Credit :

ವೈದ್ಯ ವಿದ್ಯಾರ್ಥಿಗಳಿಂದ ಸಮಾಜಕ್ಕೆ ವಿಶಿಷ್ಟ ಸೇವೆ

ಉಳ್ಳಾಲ:  ಐದು ವರ್ಷಗಳೆಂದರೆ ಕಲಿಕೆ ಮತ್ತು ಮೋಜಿನಲ್ಲಿ ಕಳೆಯುವವರೇ ಅನೇಕರು. ಈ ನಡುವೆ ಸಮಾಜ ಸೇವೆ ಬಿಡಿ, ಅಂತಹ ಮಾನಸಿಕತೆಯು ವೈದ್ಯಕೀಯ ಪದವಿ ಪಡೆಯುವ ವಿದ್ಯಾರ್ಥಿಗಳು ಇರುವುದು ವಿರಳ. ಆದರೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಕಾಲೇಜಿನ 2015-16 ನೇ ಸಾಲಿನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ತಮ್ಮ ಸಂಘ ವಿನೂತನವಾಗಿ ಕಾರ್ಯಚರಿಸಬೇಕು ಅನ್ನುವ ಉದ್ದೇಶವನ್ನು ಇಟ್ಟುಕೊಂಡು  ಸಮಾಜಸೇವೆಗೆಂದೇ ಸಂಘಟನೆಯನ್ನು ಸ್ಥಾಪಿಸಿ ಶೋಷಿತರ ಬಾಳಲ್ಲಿ ಬೆಳಕಾಗುವ ಪ್ರಯತ್ನಕ್ಕೆ ಮುಂದಾಗಿದೆ.

`ಮಿಷನ್ ಹೋಪ್’  ಭರವಸೆಯ ಹೆಸರಿನೊಂದಿಗೆ `ನನ್ನದೆಲ್ಲಾ ನಿಮ್ಮದು’ ಅನ್ನುವ ಉದ್ದೇಶದ ಸಂಘಟನೆಗೆ ಜ.16, 2016 ರಂದು  ಪಣಂಬೂರಿನ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ  ಚಾಲನೆ ನೀಡಲಾಯಿತು. ಸಂಘದ ವಿದ್ಯಾರ್ಥಿಗಳೆಲ್ಲರೂ ಮಾದಕವಸ್ತು ಹಾಗೂ ಚಟಗಳನ್ನು ದೂರವಾಗಿಸುವ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆ ಸಕ್ರಿಯವಾಗಿ ಕಾರ್ಯಾಚರಿಸಲು ಆರಂಭಿಸಿತು. ಆದರೆ  ಜಾಗೃತಿ ಕಾರ್ಯಕ್ರಮಗಳಲ್ಲಿ  ಅನೇಕ ಸಂಘಟನೆಗಳು ಪಾಲ್ಗೊಳ್ಳುತ್ತದೆ.  ಬುದ್ಧಿ ಹೇಳುವುದು ಮತ್ತು ಜಾಗೃತಿ ಮೂಡಿಸುವುದರಿಂದ ಎಲ್ಲವೂ ಸರಿಯಾಗದು. ಶೋಷಿತ, ಆರ್ಥಿಕವಾಗಿ ಹಿನ್ನೆಡೆಯಿರುವ ಕುಟುಂಬಕ್ಕೆ ಕೈಲಾದಷ್ಟು ಸಹಾಯವನ್ನು ಮಾಡಿದಲ್ಲಿ ಸಮಾಜಕ್ಕೆ ಉಪಯೋಗವಾಗಬಹುದು.  ಈ ಉದ್ದೇಶವನ್ನು ಮುಂದಿಟ್ಟುಕೊಂಡು  ಕ್ಷೇಮ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಿಟ್ಟೆ ವಿ.ವಿಯ ಉಪಕುಲಪತಿಗಳು ಹಾಗೂ ಕಾಲೇಜಿನ ಡೀನ್ ಅವರ  ನಿರ್ದೇಶನದಂತೆ ಮೊಟ್ಟಮೊದಲು  ಸಮಾಜ ಸೇವೆಗೆಂದೇ ಸ್ಥಾಪಿಸಿದ ಮಿಷನ್ ಹೋಪ್  ಮೂಲಕ ಮೊದಲು ಎ.16ರಿಂದ  ಕಾರ್ಯಾಚರಣೆಗೆ ಇಳಿಯಿತು. ನಿಟ್ಟೆ ವಿಶ್ವವಿದ್ಯಾನಿಲಯದ  ಹಾಸ್ಟೆಲ್, ಕಾಲೇಜು,  ಆಡಳಿತ ಕಚೇರಿ, ಆಸ್ಪತ್ರೆ ಸಮೀಪ  ಬಾಕ್ಸ್ ಗಳನ್ನು ಇಟ್ಟು ಅದರಲ್ಲಿ ಉದ್ದೇಶವನ್ನು ಬರೆದಿಟ್ಟು, ಉಪಯೋಗಿಸಿದ ಬಟ್ಟೆ,  ಪುಸ್ತಕಗಳು, ಬ್ಯಾಗ್, ಆಟಿಕೆ ಸಾಮಾನುಗಳು ಹಾಗೂ ಪೆನ್, ಪೆನ್ಸಿಲ್ ಗಳನ್ನು ಸಂಗ್ರಹಿಸಿತು.  ಒಂದು ತಿಂಗಳ ಅವಧಿಯಲ್ಲಿ  ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸುಮಾರು 500 ಕೆ.ಜಿಯಷ್ಟು ಬಟ್ಟೆಗಳ ಸಂಗ್ರಹವಾಗಿತ್ತು.  ನಿಟ್ಟೆ ಆಸ್ಪತ್ರೆ ಹಾಗೂ ಕಾಲೇಜು ಮಾತ್ರವಲ್ಲದೆ ಸಮೀಪದ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು  ಬಟ್ಟೆ ಹಾಗೂ ಸೊತ್ತು ಸಂಗ್ರಹಗಳಲ್ಲಿ ಕೈಜೋಡಿಸಿದರು.  ಕಾಲೇಜು ಮುಗಿಸಿ ಸಂಜೆ ವೇಳೆ ಮತ್ತು  ರಜಾ ದಿನಗಳಲ್ಲಿ   ಮಿಷನ್ ಹೋಪ್ ನ ಸುಮಾರು  30 ಕಾರ್ಯಕರ್ತ ವಿದ್ಯಾರ್ಥಿಗಳು  ಸಂಗ್ರಹಿಸುವಲ್ಲಿ ಪಾಲ್ಗೊಂಡು  ಸಮಾಜಸೇವೆಗೆ ಮುಂದಾದರು.

ಇಲ್ಲಿ ಸಂಗ್ರಹಿಸಿದ ಸೊತ್ತುಗಳನ್ನು ಉಪ್ಪಳದ ಸ್ನೇಹಾಲಯ ಆಶ್ರಮ ವಾಸಿಗಳಿಗೆ,  ಕುತ್ತಾರಿನ ಮಂಗಳಾ ಸೇವಾ ಸಮಿತಿಯ ಬಾಲಸಂರಕ್ಷಣಾ ಕೇಂದ್ರದ ಮಕ್ಕಳಿಗೆ ವಿತರಿಸಿದರು. ಅಲ್ಲದೆ  ಆಶ್ರಮದ ವಾಸಿಗಳೊಂದಿಗೆ ಒಂದು ದಿನವನ್ನು ಕಳೆದ ಮಿಷನ್ ಹೋಪ್ ನ ವಿದ್ಯಾರ್ಥಿಗಳು ಅವರೊಂದಿಗೆ ಆಟ, ಮಾತುಕತೆ ನಡೆಸಿ ಅವರ ಸಂಕಷ್ಟಗಳನ್ನು ತಿಳಿದುಕೊಂಡರು. ಇದರಲ್ಲಿ ಉಳಿದ ಸೊತ್ತುಗಳನ್ನು ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ  ನಡೆಸಿದ ಕಾರ್ಯಕ್ರಮದಲ್ಲಿ  ಆಸ್ಪತ್ರೆ ವಠಾರದಲ್ಲಿ ಇರುವ 100 ಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ ವಿತರಿಸಲಾಯಿತು. ಮುಂದೇ ಇದೇ ಸಂಘಟನೆಯನ್ನು ಟ್ರಸ್ಟನ್ನಾಗಿ ರೂಪಿಸುವ ಉದ್ದೇಶವನ್ನು ವಿದ್ಯಾರ್ಥಿಗಳು ಹೊಂದಿದ್ದಾರೆ.  ವೈದ್ಯ ವಿದ್ಯಾರ್ಥಿಗಳ ಈ ಪರಿಯ ಕಾರ್ಯ ಕ್ಯಾಂಪಸ್ಸಿನಲ್ಲಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ.

See also  ಜನರ ಪ್ರೀತಿ ವಿಶ್ವಾಸಗಳಿಂದ ಯಾವುದೇ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿಸಬಹುದು: ನವಿತಾ ಜೈನ್

ವಿದ್ಯಾರ್ಥಿಗಳ ಪ್ರತಿ ಕೆಲಸದಲ್ಲಿಯೂ  ಕ್ಷೇಮದ  ಡಾ.ರಚನಾ, ಡಾ.ಸಿದ್ಧಾರ್ಥ್  ಶೆಟ್ಟಿ ಹುರಿದುಂಬಿಸಿ ಪ್ರೋತ್ಸಾಹಿಸಿದ್ದಾರೆ.  ಶನಿವಾರ ಕೂಲಿ ಕಾರ್ಮಿಕರಿಗೆ ನಡೆದ ಬಟ್ಟೆ ವಿತರಣೆ ಸಂದರ್ಭದಲ್ಲಿ ನಿಟ್ಟೆ ವಿ.ವಿ ಉಪಕುಲಪತಿ ಡಾ.ರಮಾನಂದ ಶೆಟ್ಟಿ ಮಾತನಾಡಿ ವೈದ್ಯರಾಗುವವರು ಜನರ ಕಷ್ಟಕ್ಕೆ ಸ್ಪಂಧಿಸುವುದು ವಿಶೇಷ. ಇದು ಅವರ ವೃತ್ತಿ ಜೀವನದಲ್ಲಿ ಬಹಳ ಸಹಕಾರಿಯಾಗಲಿದ್ದು, ಈ ಮೂಲಕ ಮಾನವೀಯತೆಯಿಂದ ರೋಗಿಗಳನ್ನು ಕಾಣುವ ಗುಣ ಅವರಲ್ಲಿ ಬೆಳೆಯುತ್ತದೆ. ಆರು ತಿಂಗಳಲ್ಲಿ  ಫ್ಯಾಷನ್ ಗಳು ಬದಲಾದಂತೆ ವಿದ್ಯಾರ್ಥಿಗಳು ಬಟ್ಟೆಗಳನ್ನು ಬದಲಿಸುತ್ತಲೇ ಇರುತ್ತಾರೆ. ಇದರ ನಡುವೆ ಉಪಯೋಗವಾಗುವ ಬಟ್ಟೆಗಳನ್ನು ಎಸೆಯುವ ವಿದ್ಯಾರ್ಥಿಗಳು ಅನೇಕರಿದ್ದಾರೆ. ಆದರೆ ಅದನ್ನು ಮನಗಂಡು  ಬಡವರ್ಗದವರಿಗೆ  ಭವಿಷ್ಯದಲ್ಲಿ ವೈದ್ಯರಾಗಬೇಕಾದವರು  ಮಾನವೀಯತೆ ಪ್ರದರ್ಶಿಸಿ ಸಂಗ್ರಹಿಸಿ ವಿತರಿಸುವಂತಹ ಕಾರ್ಯ ಶ್ಲಾಘನೀಯ.  ವೈದ್ಯರು ಜನರ ಕಷ್ಟಗಳನ್ನು ಅರಿತು, ಅವರ ಜತೆಗೆ ಬೆರೆತಾಗ ರೋಗಿಯನ್ನು ಉತ್ತಮ ರೀತಿಯಲ್ಲಿ ಸ್ಪಂಧಿಸಲು ಸಾಧ್ಯ. ಕಷ್ಟಗಳನ್ನು ಅರಿಯದ ವೈದ್ಯರು  ಹಣದ ಹಿಂದೆ ಬೀಳುತ್ತಾರೆ. ಈ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜಿನ ಎಲ್ಲಾ  ವಿದ್ಯಾರ್ಥಿಗಳು  ಇಂತಹ  ಗುಣಗಳನ್ನು ಬೆಳೆಸಿಕೊಂಡು, ಭವಿಷ್ಯದಲ್ಲಿ ಉತ್ತಮ ವೈದ್ಯರಾಗಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ  ಕಾಲೇಜು ಹಾಗೂ ಆಸ್ಪತ್ರೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಿಂದ ಕ್ಯಾನ್ಸರ್ ರೋಗಿಗಳ ಜಾಗೃತಿಗಾಗಿ ಸಂಗ್ರಹಿಸಿದ 1.5 ಲಕ್ಷ ನಗದನ್ನು  ‘ಮಿಷನ್ ಹೋಪ್ ‘ ಮೂಲಕ  ಉಪಯುಕ್ತವಾಗುವ ರೋಗಿಗಳಿಗೆ  ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಈ ಸಂದರ್ಭ ನಾನ್ ಕ್ಲಿನಿಕಲ್  ವೈಸ್ಡೀನ್  ಅಮೃತ್ ಮಿರಾಜ್ ಕರ್,  ಕ್ಷೇಮದ ಕುಲಸಚಿವ ಡಾ. ಜಯಪ್ರಕಾಶ್ ಶೆಟ್ಟಿ , ಮಿಷನ್  ಹೋಪ್ನ  ಜುನೈದ್ ಅನ್ವರ್, ದೀಪು ಸುರೇಶ್,  ಅಭಿಜೀತ್ ಶಂಕರ್, ಪಲ್ಲವಿ ಮೆಹೇಂದರು, ಅಜೀಷ್ ಜಾರ್ಜ್,  ಐಶ್ವರ್ಯಾ ಗಿರೀಶ್  ಇಂದು ಕುರೂಪ್ ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು