News Kannada
Friday, October 07 2022

ಕರಾವಳಿ

ಕಾನೂನು ಬಾಹಿರವಾಗಿ ಮರಳು ಸಾಗಾಟ 18 ಲಾರಿ ವಶಕ್ಕೆ - 1 min read

Photo Credit :

ಕಾನೂನು ಬಾಹಿರವಾಗಿ ಮರಳು ಸಾಗಾಟ 18 ಲಾರಿ ವಶಕ್ಕೆ

ಕಾರ್ಕಳ: ಕಾನೂನು ಬಾಹಿರವಾಗಿ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆಗಳಿಗೆ ಮರಳು ಸಾಗಾಟ ಮಾಡುತ್ತಿದ್ದ 18 ಲಾರಿಗಳನ್ನು ಗ್ರಾಮಾಂತರ ಠಾಣಾಧಿಕಾರಿ ರಫೀಕ್ ನೇತೃತ್ವದ ಪೊಲೀಸರ ತಂಡ ಬಜಗೋಳಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ನಸುಕಿನ ಜವಾದೊಳಗಾಗಿ ಈ ಕಾರ್ಯಚರಣೆ ನಡೆಸಿ ಮರಳು ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದಾರೆ. ಗುರುಪುರ, ಅಡ್ಡೂರು,ಪೊಳಲಿ, ಕೈಕಂಬ ಮೊದಲಾದೆಡೆಗಳಿಂದ ಭಾರೀ ಪ್ರಮಾಣದಲ್ಲಿ ಮರಳು ಸಾಗಾಟ ನಡೆಸಲಾಗುತ್ತಿದೆ. ಪರಿಣಾಮವಾಗಿ ಪಶ್ಚಿಮಘಟ್ಟ ತಪ್ಪಲು ತೀರಾ ಪ್ರದೇಶಗಳಲ್ಲಿ ವಾಹನ ಅಪಘಾತ ಸಂಖ್ಯೆ ಹೆಚ್ಚುತ್ತಿದೆ. ಪರವಾನಿ ರಹಿತವಾಗಿ, ಹೆಚ್ಚುವರಿ ಲೋಡ್ ಮೂಲಕ ಮರಳು ಸಾಗಾಟ ಮಾಡುತ್ತಿರುವ ಲಾರಿಗಳ ಚಾಲಕರು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಿರುವುದು, ಲಘುವಾಹನಗಳಿಗೆ ಸೈಡ್ ಕೊಡದೇ ಸತಾಯಿಸುತ್ತಿರುವುದು ಘಟನೆ ಕಾರಣವಾಗಿದೆ ಎಂಬ ಮಹತ್ವದ ಅಂಶವನ್ನು ಪೊಲೀಸ್ ಗುಪ್ತಚರ ಮೂಲಗಳಿಂದ ದೃಢಪಟ್ಟಿದೆ.

ಗ್ರಾಮಾಂತರ ಠಾಣೆಗೆ ನೂತನ ಎಸೈ ಆಗಿ ಅಧಿಕಾರ ಸ್ವೀಕರಿಸಿರುವ ರಫೀಕ್ ಅವರು ಈ ಬಗ್ಗೆ ದಿಟ್ಟಕ್ರಮ ಕೈಗೊಂಡು ಒಂದು ತಿಂಗಳ ಅವಧಿಯಲ್ಲಿ 55 ಲಾರಿಗಳನ್ನು ವಶಪಡಿಸಿದ್ದು 5,00,000 ದಂಡ ವಸೂಲಿಗೆ ಕಾರಣರಾಗಿದ್ದರು. ರಾಜಕೀಯ ಒತ್ತಡದಿಂದಾಗಿ ಕಳೆದ 15 ದಿನಗಳ ಹಿಂದೆ ಕಾರ್ಯಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸೋಮವಾರ ಹಠಾತ್ ಕಾರ್ಯಚರಣೆ ನಡೆಸಿದ್ದಾರೆ.
 

See also  ಫೆಬ್ರವರಿಯೊಳಗೆ ಬಂಟ್ವಾಳ ರೈಲ್ವೆ ನಿಲ್ದಾಣದ ಕಾಮಗಾರಿ ಪೂರ್ಣ: ನಳಿನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು