News Kannada
Sunday, September 25 2022

ಕರಾವಳಿ

ಬೈಲೂರು ಶೂಟ್ಔಟ್ ಪ್ರಕರಣ: ಪ್ರಮುಖ ಆರೋಪಿ ಪ್ರವೀಣ್ ಕುಲಾಲ್ ಬಂಧನ - 1 min read

Photo Credit :

ಬೈಲೂರು ಶೂಟ್ಔಟ್ ಪ್ರಕರಣ: ಪ್ರಮುಖ ಆರೋಪಿ ಪ್ರವೀಣ್ ಕುಲಾಲ್ ಬಂಧನ

ಕಾರ್ಕಳ: ಬೈಲೂರು ಪೇಟೆಯಲ್ಲಿ ಜೂನ್ 15ರ ರಾತ್ರಿ ಜಿಲ್ಲಾ ಪಂಚಾಯತ್ ಸದಸ್ಯ ಸುಮೀತ್ ಶೆಟ್ಟಿಯ ಕೊಲೆಗೈಯಲು ವಿಫಲಯತ್ನ ನಡೆಸಿ ನೆಲಕ್ಕೆ ಗುಂಡು ಹಾರಿಸಿ ಭಯ ಸೃಷ್ಟಿಸಿದಲ್ಲದೇ ಆತನ ಸಹಚರರಿಂದ ಐವರ ಮೇಲೆ ತಲವಾರು ದಾಳಿ ಪ್ರಕರಣದ ಪ್ರಮುಖರಲ್ಲಿ ಪ್ರವೀಣ್ ಕುಲಾಲ್ ನನ್ನು ಹಿರಿಯಡ್ಕದ ವುರ್ವಾಡಿ ಪ್ರವೀಣ್ ಕುಲಾಲ್ ನನ್ನು ಕಾರ್ಕಳ ಎಸ್ಪಿ ಡಾ. ಸುಮನಾ ನೇತೃತ್ವದ ಪೊಲೀಸರ ತಂಡ ಆತನ ಮನೆಯಿಂದಲೇ ಬಂಧಿಸುವಲ್ಲಿ ಯಶಸ್ಸು ಆಗಿದ್ದಾರೆ.

ಘಟನೆಯಲ್ಲಿ ಬೈಲೂರಿನ ಸಂದೀಪ, ಬೈಲೂರಿನ ದೀಪಕ್, ಜೋಡುರಸ್ತೆಯ ಅಮಿತ್, ಕಾಬೆಟ್ಟುವಿನ ವಾಸು, ನಿಟ್ಟೆಯ ಸುಧೀರ್ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಿಶೇಷ ಪೊಲೀಸ್ ತಂಡ ಕೋಡಿಕರೆ ವಿಶ್ವನಾಥ ಪೂಜಾರಿ, ತಿಲಕ್ ಶೆಟ್ಟಿ, ಚಿತ್ತರಂಜನ್, ಧನರಾಜ್ ಎಂಬವರನ್ನು ಕಾರ್ಕಳ ನಗರ ಠಾಣಾ ಎಸೈ ರವಿ ನೇತೃತ್ವದ ವಿಶೇಷ ಪೊಲೀಸ್ ತಂಡ ಸುರತ್ಕಲ್ ಸಮೀಪದಲ್ಲಿ ಬಂಧಿಸಿದ್ದರು.  ಬಂಗ್ಲೆಗುಡ್ಡೆ ಸುಲೈಮಾನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ತೆಳ್ಳಾರು ರಸ್ತೆಯ ಸೋಮನಾಥ ಅಲಿಯಾಸ್ ಸೋಮು ಪೊಲೀಸರ ವಶದಲ್ಲಿ ಇದ್ದನಾದರೂ ಪ್ರಕರಣದಲ್ಲಿ ಭಾಗಿಯಾಗಿಲ್ಲದ ಕಾರಣದಿಂದ ಆತನನ್ನು ಪೊಲೀಸರ ತಂಡವು ಬಂಧಮುಕ್ತ ಗೊಳಿಸಿದ್ದರು.

ಎಎಸ್ಪಿ ಕಾರ್ಯ ಶ್ಲಾಘನೀಯ
ಬೈಲೂರು ಪರಿಸರದಲ್ಲಿ ಅಶಾಂತಿ ತಲೆ ದೋರಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಎಎಸ್ಪಿ ಡಾ.ಸುಮನಾ ಅವರು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೃತ್ಯ ಎಸಗಿದವರ ಪತ್ತೆಗಾಗಿ ವಿಶೇಷ ತಂಡ ರೂಪಿಸಿದ್ದರು. 24 ಗಂಟೆ ಅವಧಿಯೊಳಗಾಗಿ ಪ್ರಮುಖ ಮತ್ತೊಬ್ಬ ಆರೋಪಿ ಕೋಡಿಕರೆ ವಿಶ್ವನಾಥ ಪೂಜಾರಿ ಹಾಗೂ ಆತನ ಮೂವರು ಸಹಚರರನ್ನು ಬಂಧನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದರು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಣ್ಣಾಮಲೈ ಅವರು ಕಾರ್ಕಳ ಎಎಸ್ಪಿಯಾಗಿದ್ದ ಅವಧಿಯಲ್ಲಿ ಇಂತಹದೇ ಕಾರ್ಯಚರಣೆ ನಡೆಸಿ ಕಾರ್ಕಳದಲ್ಲಿ ಶಾಂತಿ ಕಾಪಾಡುವಲ್ಲಿ ಯಶಸ್ಸು ಆಗಿದ್ದರು.
ಬಂಗ್ಲೆಗುಡ್ಡೆಯಲ್ಲಿ ದಲಿತ ಯುವಕನಾದ ಬೈಲೂರಿನ ಯುವಕ ಸುಧೀರ್ ರಾಣೆಯನ್ನು ಮುಸ್ಲಿಂ ತಂಡವೊಂದು ಮನೆಯೊಂದರಲ್ಲಿ ಕೂಡಿ ಹಾಕಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ತಲೆ ಬೋಳಿಸಿ ಅಮಾನವೀಯ ಕೃತ್ಯ ಎಸಗಲಾಗಿತ್ತು. ಆ ಸಂದರ್ಭದಲ್ಲಿ ಕಾರ್ಕಳ ನಗರಕ್ಕೆ ವಿವಿಧ ಠಾಣೆಗಳಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದಲ್ಲದೇ ಕೆಲವೇ ಗಂಟೆಗಳೊಳಗಾಗಿ ಕೃತ್ಯದಲ್ಲಿ ಪಾಲ್ಗೊಂಡ, ಮೊಬೈಲ್ ಶೂಟಿಂಗ್ ಮಾಡಿ ಫೇಸ್ ಬುಕ್ ಗೆ ಡೌನ್ಲೋಡ್ ಮಾಡಿದ ಯುವಕ, ಕೃತ್ಯಗೆ ಕಾರಣಳಾಗಿ ಪ್ರಕರಣ ತಿರುಚಲು ಪೊಲೀಸರಿಗೆ ದೂರು ಸಲ್ಲಿಸಿದ ಯುವತಿ ಹಾಗೂ ಘಟನೆಗೆ ಪ್ರಚೋದಿಸಿದ ಎಲ್ಲರನ್ನು ಬಂಧಿಸಿ ಕೇಸು ದಾಖಲಿಸುವ ಮೂಲಕ ಪೊಲೀಸ್ ಕಾನೂನು ಸುವ್ಯವಸ್ಥೆ ಏನೆಂಬುವುದನ್ನು ಸಮಾಜಕ್ಕೆ ತೋರಿಸಿಕೊಟ್ಟವರು ಅಣ್ಣಾಮಲೈ ಆಗಿದ್ದರು.

ಈ ಎರಡು ವಿಭಿನ್ನ ಪ್ರಕರಣಗಳನ್ನು ಸಂದಭೋಚಿತವಾಗಿ ಕರ್ತವ್ಯ ನಿಭಾಯಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯದಕ್ಷತೆಗೆ ನಾಗರಿಕರಿಂದ ಪ್ರಶಂಸೆ ವ್ಯಕ್ತಗೊಂಡಿದೆ.

See also  ಒಳ ರಸ್ತೆಗಳ ಅಗಲೀಕರಣಕ್ಕೆ ಕೈ ಹಾಕದಿರಿ :ರೈ ಅಧಿಕಾರಿಗಳಿಗೆ ತಾಕೀತು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು