News Kannada
Tuesday, October 04 2022

ಕರಾವಳಿ

ಮಳೆಯ `ದಾಖಲೆ’ ಬರೆವ ಪಿಜಿಎಸ್ಎನ್ ಪ್ರಸಾದ್ - 1 min read

Photo Credit :

ಮಳೆಯ `ದಾಖಲೆ' ಬರೆವ ಪಿಜಿಎಸ್ಎನ್ ಪ್ರಸಾದ್

ಸುಳ್ಯ: ಸಾಕಷ್ಟು ಮಳೆ ಸುರಿದು ನೀರು ಹರಿದರೂ ಎಷ್ಟು ಮಳೆ ಸುರಿಯಿತು, ಎಷ್ಟು ನೀರು ಹರಿಯಿತು ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬರು ಕೃಷಿಕರು ಸುರಿಯುವ ಪ್ರತಿ ಇಂಚು ಮಳೆಯ ಲೆಕ್ಕವನ್ನೂ ಇರಿಸಿ, ಅದನ್ನು ದಾಖಲಿಸಿ ಗಮನ ಸೆಳೆಯುತ್ತಾರೆ. ತಮ್ಮ ಮನೆಯಲ್ಲಿ ಕಳೆದ 34 ವರ್ಷದ ಮಳೆಯನ್ನು ಅಳತೆ ಮಾಡಿ ಅದನ್ನು ದಾಖಲಿಸಿ ಮಾಡಿ ಎಷ್ಟು ಮಳೆ ಬಂತು ಎಂದು ನಿಖರವಾಗಿ ಮಳೆಯ ಲೆಕ್ಕ ಹೇಳಬಲ್ಲವರು ಬಾಳಿಲದ ಪಿಜಿಎಸ್ಎನ್ ಪ್ರಸಾದ್.

Rain data collection is hobby of this progressive farmer from Sullia-11976 ನೇ ಇಸವಿಯಿಂದ ಪ್ರಸಾದರು ಮಳೆ ಮಾಪನದ ಮೂಲಕ ಮಳೆಯ ಪ್ರಮಾಣವನ್ನು ಅಳೆದು ಅದನ್ನು ದಾಖಲಿಸುವುದನ್ನು ಆರಂಭಿಸಿದ್ದರು. 1982ರ ಬಳಿಕ ತಮ್ಮ ಪ್ರದೇಶದ ಪ್ರತಿ ದಿನದ ಮಳೆಯ ನಿಖರವಾದ ದಾಖಲೆಯನ್ನು ತಯಾರಿಸಿದ್ದಾರೆ. ಈಗಲೂ ಪ್ರತಿ ದಿನ ದಾಖಲಿಸುತ್ತಾರೆ. ಪಾಟಾಜೆ  ಗೋವಿಂದಯ್ಯ ಸತ್ಯನಾರಾಯಣ ಪ್ರಸಾದ ಎಂಬ ಪಿಜಿಎಸ್ಎನ್ ಪ್ರಸಾದ್ ಹವ್ಯಾಸಕ್ಕಾಗಿ ಬಾಳಿಲದ ತಮ್ಮ ಮನೆಯಲ್ಲಿ ಆರಂಭಿಸಿದ ಈ ಪ್ರಯೋಗ ಹೊಸ ತಲೆಮಾರಿಗೊಂದು ಅಪೂರ್ವ ದಾಖಲೆಯನ್ನು ಒದಗಿಸುತಿದೆ.

ಮಳೆಯ ದಾಖಲೆ:
ಪ್ರಸಾದರು ತಯಾರಿಸಿದ ಮಳೆಯ ದಾಖಲೆಯು ಅಪೂರ್ವವಾದ ಮತ್ತು ಅದ್ಭುತ ಮಾಹಿತಿಯನ್ನು ಒದಗಿಸುತ್ತಿದೆ. ಕೆಲವೊಂದು ವಿಷ್ಮಯಕಾರಿ ಚಿತ್ರಣವನ್ನೂ ಇದು ತೋರಿಸುತಿದೆ. ಕಳೆದ 34 ವರ್ಷದ ಅವಧಿಯಲ್ಲಿ 4354 ಮಿ.ಮೀ. ವಾರ್ಷಿಕ ಸರಾಸರಿ ಮಳೆ ಸುರಿದಿದೆ. ಆದರೆ ಕಳೆದ ವರ್ಷ ಅಂದರೆ 2015ರಲ್ಲಿ ಸರಾಸರಿಗಿಂತ ಕಡಿಮೆ ಮಳೆ ಬಂದಿತ್ತು. ಅಂದರೆ ಕೇವಲ 3868 ಮಿ.ಮಿ.ಮಳೆ ಲಭಿಸಿತ್ತು. ಈ ವರ್ಷ ಜೂನ್ 19 ರವರೆಗೆ 541 ಮಿ.ಮಿ.ಮಳೆ ಸುರಿದಿದೆ. 2014ರಲ್ಲಿ 4450 ಮಿ.ಮಿ.ಮಳೆ ದಾಖಲಾಗಿತ್ತು.

2013ರ ಜುಲೈ ತಿಂಗಳ ಮಳೆ 35 ವರ್ಷಗಳಲ್ಲಿ ದಾಖಲೆಯಾಗಿತ್ತು. ಇವರ ಲೆಕ್ಕ ಪ್ರಕಾರ 2013ರ ಜುಲೈನಲ್ಲಿ 1843 ಮಿ.ಮೀ. ಮಳೆ ಸುರಿದಿತ್ತು. ಈ ಹಿಂದೆ 1994ರ ಜುಲೈನಲ್ಲಿ 1784 ಮಿ.ಮೀ. ಮಳೆ ಮತ್ತು 2009 ರ ಜುಲೈನಲ್ಲಿ 1761 ಮಿ.ಮಿ.ಮಳೆ ಬಂದಿತ್ತು. 2014ರ ಜುಲೈನಲ್ಲಿ 1514 ಮಿ.ಮಿ.ಮಳೆಯಾಗಿದ್ದರೆ 2015ರ ಜುಲೈನಲ್ಲಿ ಕೇವಲ 989 ಮಿ.ಮಿ.ಮಳೆಯಾಗಿತ್ತು. 2002 ಜುಲೈ ತಿಂಗಳಲ್ಲಿ ಅತೀ ಕಡಿಮೆ ಎಂದರೆ 696 ಮಿ.ಮಿ.ಅಸ್ಟೇ ಮಳೆ ದಾಖಲಾಗಿತ್ತು. ಆ ವರ್ಷ ಒಟ್ಟು 3320 ಮಿ.ಮಿ.ಮಳೆಯಾಗಿತ್ತು. 1994 ರಲ್ಲಿ ವರ್ಷವೊಂದರ ಗರಿಷ್ಠ ಮಳೆ 5546 ಮಿ.ಮೀ.(554 ಸೆಂ.ಮೀ.) ದಾಖಲಿಸಿತ್ತು.  1987ರಲ್ಲಿ ಕನಿಷ್ಠ(2732 ಮಿ.ಮೀ) ಮಳೆ ದಾಖಲಾಗಿದೆ. ಒಂದು ತಿಂಗಳ ಗರಿಷ್ಠ ಮಳೆ 2013ರ ಜುಲೈನಲ್ಲಿ ದಾಖಲಾಗಿತ್ತು.  1999ರಲ್ಲಿ ಬಹಳ ಬೇಗ ಮಳೆ ಆರಂಭವಾಗಿತ್ತು. ಮೇ.20 ರಿಂದ ಮುಂಗಾರು ಪ್ರವೇಶ ಪಡೆದಿದ್ದರೆ, 1983 ರಲ್ಲಿ ತಡವಾಗಿ ಮಳೆ ಬಂದಿತ್ತು. ಆ ವರ್ಷ ಜು.16 ರಂದು ಮುಂಗಾರು ಆರಂಭವಾಗಿದೆ. 48 ಘಂಟೆಯಲ್ಲಿ ದಾಖಲಾದ ಅಧಿಕ ಮಳೆ 1982 ರಲ್ಲಿ ದಾಖಲಾಗಿದೆ. 1-8-1982ರ ಬೆಳಿಗ್ಗಿನಿಂದ 3-81982ರ ಬೆಳಿಗ್ಗೆ ಎಂಟರವರೆಗೆ 510 ಮಿ.ಮೀ. ಮಳೆ ಬಂದಿತ್ತು. 1991, 94, 98, 99 ವರ್ಷಗಳಲ್ಲಿ ಐದು ಸಾವಿರ ಮಿ.ಮೀ.ಗಳಿಗಿಂತ ಹೆಚ್ಚು ಮಳೆ ಸುರಿದರೆ 1987(2732 ಮೀ.ಮೀ.) ಮತ್ತು 1998(2991.ಮೀ.ಮೀ.)ರಲ್ಲಿ ಮಳೆಯ ಪ್ರಮಾಣ ಮೂರು ಸಾವಿರ ಮಿ.ಮೀ.ಗಿಂತ ಕುಸಿದಿತ್ತು. 2013ರಲ್ಲಿ 4875ಮಿ.ಮಿ., 2012ರಲ್ಲಿ 4311 ಮಿ.ಮಿ., 2011ರಲ್ಲಿ 4727, 2010ರಲ್ಲಿ 4737 ಮಿ.ಮಿ.ಮಳೆಯಾಗಿತ್ತು.

See also  ಮನೆಗಳ ಕೌಂಪೌಂಡ್ ಕೆಡವಿ ಹಾಕಿದ ಮನಪಾ ಅಧಿಕಾರಿಗಳು

ಮಳೆ ಲೆಕ್ಕ ಹಾಕುವುದು ಹೇಗೆ ?
ಮಳೆ ಲೆಕ್ಕ ಮಾಡಲು ಇವರಲ್ಲಿ ಮಾಪನ ಇದೆ. ಮನೆ ಸಮೀಪ ಅಳತೆ ಇರುವ ಸಮನಾದ ಸುತ್ತಳತೆ ಇರುವ ಗಾಜಿನ ಜಾರ್ನ್ನು ಇಟ್ಟು ಅದರಲ್ಲಿ ಮಳೆ ನೀರು ಸಂಗ್ರಹಿಸಲಾಗುವುದು. ಪ್ರತಿ ದಿನ ಬೆಳಿಗ್ಗೆ ಎಂಟು ಗಂಟೆಗೆ ಅದನ್ನು ನೋಡಿ ದಾಖಲೆ ಪುಸ್ತಕದಲ್ಲಿ ಬರೆದಿಡುತ್ತಾರೆ. ಮಳೆಯ ಲೆಕ್ಕ ಮಾತ್ರವಲ್ಲದೆ ಆ ದಿನ ಮಳೆಯು ಯಾವ ರೀತಿ ಇತ್ತು ಎಂಬುದನ್ನೂ ಬರೆದಿಡುತ್ತಾರೆ. ಪ್ರಸಾದರು ಮನೆಯಲ್ಲಿ ಇಲ್ಲದ ದಿವಸ ಅವರ ಪತ್ನಿ ಮಾಲಿನಿ ಅಥವಾ ಪುತ್ರ ವಿಜೇತಕೃಷ್ಣ ಮಳೆಯ ಲೆಕ್ಕವನ್ನು ದಾಖಲಿಸಿಡುತ್ತಾರೆ.

ತಂದೆಯಿಂದ ಮಗನಿಗೆ
ಪ್ರಸಾದರ ತಂದೆ ಪಾಟಾಜೆ ಗೋವಿಂದಯ್ಯನವರಿಗೆ ಮಳೆ ಸುರಿಯುವುದರ ಮತ್ತು ಅದರ ಲೆಕ್ಕಾಚಾರದ ಬಗ್ಗೆ ಆಸಕ್ತಿಯಿತ್ತು. ಮಳೆಯ ಬಗ್ಗೆ ಅವರು ದಿನಚರಿಯಲ್ಲಿ ಬರೆದಿಡುತ್ತಿದ್ದರು. ಅದು ನೋಡಿ ಪ್ರಸಾದರಿಗೆ ಮಳೆಯನ್ನು ಲೆಕ್ಕ ಹಾಕಬೇಕೆಂಬ ಆಸಕ್ತಿ ಉಂಟಾಯಿತು. ಅದರಂತೆ ಮಳೆಲೆಕ್ಕ ಆರಂಭಿಸಿದರು. ಪ್ರದೇಶದಿಂದ ಪ್ರದೇಶಕ್ಕೆ ಮಳೆ ಸುರಿಯುವ ಪ್ರಮಾಣ ವ್ಯತ್ಯಾಸವಿದ್ದರೂ, ತನ್ನ ಲೆಕ್ಕ ಮತ್ತು ತಾಲೂಕಿನ ಸರಾಸರಿ ಮಳೆಯ ಲೆಕ್ಕಕ್ಕೆ ಸಾಮ್ಯತೆ ಇರುತ್ತದೆ ಎಂದು ಪ್ರಸಾದ್ ಹೇಳುತ್ತಾರೆ. ಉಷ್ಣಾಂಶ ಮಾಪನವನ್ನು ಮಾಡುತ್ತಿದ್ದರೂ ಅದನ್ನು ದಾಖಲಿಸಿಲ್ಲ. ಮಳೆ ನಕ್ಷತ್ರ ಸಮಯದಲ್ಲಿ ಮಳೆ ಜಾಸ್ತಿ ಎಂಬ ನಂಬಿಕೆ ಇದೆ. ಇದಕ್ಕನುಗುಣವಾಗಿ ಆ ಸಮಯದ ಮಳೆಯ ಲೆಕ್ಕ ತೆಗೆದು ಚಾರ್ಟನನ್ನು ತಯಾರು ಮಾಡುವ     ಸಿದ್ಧತೆಯಲ್ಲಿದ್ದಾರೆ. ಮಳೆಯ ಬಗ್ಗೆ ಅಂದಾಜಿಸುವ ಇವರು ಇಂಟರ್ನೆಟ್, ಪತ್ರಿಕೆಗಳಲ್ಲಿ ನೀಡುವ ಮೋಡದ ಚಿತ್ರಣವನ್ನೂ ಗಮನಿಸಿ ಅವರು ಅಧ್ಯಯನ ನಡೆಸುತ್ತಾರೆ. ಪ್ರಗತಿಪರ ಕೃಷಿಕರಾದ ಪಿಜಿಎಸ್ಎನ್ ಪ್ರಸಾದ್  ಬಿಜೆಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ.

ಕೃಷಿಕರಾದ ನಮಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಮಳೆ, ಬಿಸಿಲಿನ ಪ್ರಮಾಣ ಮತ್ತು ವಾತಾವರಣದ ಅಂದಾಜು ಬೇಕಾಗುತ್ತದೆ. ಮಳೆಯ ಲೆಕ್ಕಾಚಾರ ಹಾಕಬೇಕು ಎಂಬ ಆಸಕ್ತಿಯಿಂದ ಆರಂಭಿಸಿದ್ದೆ. ಈಗ ಅದೊಂದು ಜೀವನದ ಭಾಗವಾಗಿ ಬಿಟ್ಟಿದೆ. ಆಸಕ್ತಿ ಒಂದು ರೀತಿಯ ತೃಪ್ತಿ ಮತ್ತು ಆನಂದವನ್ನುಂಟು ಮಾಡುತಿದೆ. ಇದು ಅತ್ಯಂತ ಸರಳವಾಗಿದ್ದು ಯಾರಿಗೂ ಮಾಡಬಹುದಾಗಿದೆ.”
-ಪಿಜಿಎಸ್ಎನ್ ಪ್ರಸಾದ್.

 
 
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು