News Kannada
Thursday, September 29 2022

ಕರಾವಳಿ

ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ - 1 min read

Photo Credit :

 ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಉಳ್ಳಾಲ: ಐದರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಎಂಬಲ್ಲಿ ಭಾನುವಾರ ನಡೆದಿದ್ದು, ಘಟನೆ ಸಂಬಂಧ ಉಳ್ಳಾಲ ಠಾಣೆಯಲ್ಲಿ ಮಂಗಳವಾರ  ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಕೋಟೆಕಾರು ಸಮೀಪ ಬಾಡಿಗೆ ಮನೆಯಲ್ಲಿರುವ ಹರೀಶ್ ಬಂಗೇರ(40) ಬಂಧಿತ.  ಈತ ಕೋಟೆಕಾರುವಿನಲ್ಲಿ ಬಾಡಿಗೆಗೆ ಇದ್ದ ಮನೆ ಮಾಲೀಕರ 5ರ ಹರೆಯದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.  ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿರುವ ಹರೀಶ್  ಬೈಕಂಪಾಡಿ ಸಮೀಪ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದಾನೆ. ಬಾಲಕ ಆಟವಾಡುತ್ತಾ ಮನೆಯ ಹಿಂಬದಿಗೆ ಹೋದಾತನನ್ನು ಪುಸಲಾಯಿಸಿ ಬಾಡಿಗೆ ಮನೆಯೊಳಗೆ ಕೊಂಡೊಯ್ದ  ಆರೋಪಿ ಹರೀಶ್ ಅಲ್ಲಿ ಲೈಂಗಿಕವಾಗಿ ಬಳಸಿದ್ದಾನೆ. ಈ ಬಗ್ಗೆ ಬಾಲಕ ಒಂದು ದಿನದ ಬಳಿಕ ಹೆತ್ತವರಿಗೆ ವಿಚಾರ ತಿಳಿಸಿದ್ದು, ಬಳಿಕ ಹೆತ್ತವರು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹರೀಶ್  ಹಿಂದಿನಿಂದಲೂ ಇಂತಹ ಕೆಟ್ಟ ಚಾಳಿಗಳಲ್ಲೇ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಆತನ ಪತ್ನಿ ಹಾಗೂ ಮಕ್ಕಳು ಆತನನ್ನು ತೊರೆದಿದ್ದಾರೆ.
 

See also  ಅಲೋಶಿಯಸ್ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು