News Kannada
Sunday, October 02 2022

ಕರಾವಳಿ

ಬಿಜೆಪಿ ಮುಖಂಡನ ಕೊಲೆ ಯತ್ನ - 1 min read

Photo Credit :

 ಬಿಜೆಪಿ ಮುಖಂಡನ ಕೊಲೆ ಯತ್ನ

ಉಳ್ಳಾಲ: ಬಿಜೆಪಿ ಸ್ಥಾನೀಯ ಮುಖಂಡ ಹಾಗೂ ಉಳ್ಳಾಲ ಪುರಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಸಹಿತ ಅವರ ಸ್ನೇಹಿತನನ್ನು ಮೂವರು ಯುವಕರ ತಂಡ ಕೊಲೆಗೆ ಯತ್ನಿಸಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಕ್ಕೊಟ್ಟು ಕೃಷ್ಣನಗರ ನಿವಾಸಿ ಭಗವಾನ್ ದಾಸ್ (40)  ಹಾಗೂ ಅವರ ಸ್ನೇಹಿತ  ಪ್ರಕಾಶ್ (40) ಎಂಬವರು ಕೊಲೆ ಯತ್ನಕ್ಕೊಳಗಾದವರು.  ಇಬ್ಬರು ತೊಕ್ಕೊಟ್ಟು  ಕರ್ಣಾಟಕ ಬ್ಯಾಂಕಿನ ಎದುರುಗಡೆ ಮಧ್ಯಾಹ್ನ 12.30 ವೇಳೆ ನಿಂತಿದ್ದರು. ಇದೇ ವೇಳೆ ಬಿಳಿ ಬಣ್ಣದ ಆಕ್ಟಿವಾ ಸ್ಕೂಟರಿನಲ್ಲಿ ಹಾಗೂ ಹಸಿರು ಬಣ್ಣದ ಎಫ್ ಝೀ ಬೈಕಿನಲ್ಲಿ ಬಂದ ಮೂವರು ಯುವಕರ ತಂಡ  ` ಭಾರೀ ನೋಡ್ತೀರ, ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ’ ಎಂದು ಮಾತು ಆರಂಭಿಸಿ ತನ್ನ ಸ್ನೇಹಿತರಿಗೆ ಕರೆ ಮಾಡಿ ತಲವಾರು ತರುವಂತೆ ಹೇಳಿದ್ದರೆನ್ನಲಾಗಿದೆ.  ಅದೇ ವೇಳೆ ಭಗವಾನ್ ಅವರು ಅಪಾಯದ ಮುನ್ಸೂಚನೆ ಅರಿತು ಸ್ಥಳೀಯರನ್ನು ಕರೆದರಲ್ಲದೆ,  ಉಳ್ಳಾಲ ಠಾಣಾಧಿಕಾರಿಗೂ ದೂರವಾಣಿ ಮುಖೇನ ತಿಳಿಸಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಮೂವರು ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆನ್ನಲಾಗಿದೆ.   

ಇದೇ ವೇಳೆ ಸೇರಿದ ಸಾರ್ವಜನಿಕರು ಬೈಕಿನಲ್ಲಿ ಪರಾರಿಯಾಗುತ್ತಿದ್ದ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಅದರಿಂದ ಓರ್ವನ ತಲೆಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ.  ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ರಂಝಾನ್ ಉಪವಾಸದ ಹಿನ್ನೆಲೆಯಲ್ಲಿ ಯುವಕರಿಬ್ಬರು ತೊಕ್ಕಟ್ಟು ಒಳಪೇಟೆಯ ಕ್ಯಾಂಟೀನ್ ಒಂದರಲ್ಲಿ  ಊಟ ಮಾಡುತ್ತಿದ್ದುದನ್ನು ನೋಡಿರುವುದೇ ಘಟನೆಗೆ ಕಾರಣವೆಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
 

See also  ಮಗುಚಿ ಬಿದ್ದ ಗ್ಯಾಸ್ ಸಿಲಿಂಡರ್ ಲಾರಿ: ವಾಹನ ಸಂಚಾರ ಸ್ಥಗಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು