News Kannada
Wednesday, October 05 2022

ಕರಾವಳಿ

ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ - 1 min read

Photo Credit :

ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಪುತ್ತೂರು: ತಿನ್ನುವ ವಸ್ತುಗಳಿಂದ ಹಿಡಿದು, ಪೆಟ್ರೋಲ್ ಡಿಸೇಲ್ ದರ ಏರಿಕೆ ಮಾಡಿದ್ದಲ್ಲದೆ, ಕೃಷಿಕರ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತೆ ಮಾಡಿದ ಕೇಂದ್ರ ಸರಕಾರ ಜನ ಸಾಮಾನ್ಯರ ಬದುಕಿನಲ್ಲಿ ಆಟವಾಡುತ್ತಿದೆ. ತಕ್ಷಣ ವಿದೇಶದಿಂದ ಬರುತ್ತಿರುವ ಅಡಿಕೆ, ತೆಂಗಿನ ಕಾಯಿ, ರಬ್ಬರ್ ಆಮದನ್ನು ನಿಲ್ಲಿಸಬೇಕು ಕೃಷಿಕರ ಜೀವನ ಸುಧಾರಿಸಬೇಕು. ಇಲ್ಲವಾದಲ್ಲಿ ಮುಂದೆ ಬೇರೆ ರೀತಿಯ ಹೋರಾಟ ಮಾಡಬೇಕಾದಿತು ಎಂದು ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ಧ ಬ್ಲಾಕ್ ಕಾಂಗ್ರೆಸ್ ಪುತ್ತೂರು, ಉಪ್ಪಿನಂಗಡಿ, ವಿಟ್ಲ ಮತ್ತು ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಜೂ.27ರಂದು ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರ ಇಂಡೋನೇಷಿಯದಿಂದ ಭಾರತಕ್ಕೆ ಅಡಿಕೆ ಆಮದು ಮಾಡಿಸಿಕೊಂಡು ಇಲ್ಲಿನ ಅಡಿಕೆಗೆ ಮಾರುಕಟ್ಟೆ ಬೆಲೆ ಇಲ್ಲದಂತಾಗಿದೆ. ಅದೇ ರೀತಿ ರಬ್ಬರ್ ಗೂ ಸಮಸ್ಯೆ ಬಂದಿದೆ. ಶ್ರೀಲಂಕಾದಿಂದ ತೆಂಗಿನ ಕಾಯಿಯನ್ನು ಆಮದು ಮಾಡಿಸಿಕೊಂಡು ತೆಂಗಿನ ಕಾಯಿ ಮಾರಾಟ ಮಾಡುವ ಕೃಷಿಕರ ಹೊಟ್ಟೆಗೆ ಹೊಡೆದಿದ್ದಾರೆ. ನಮ್ಮಲ್ಲಿ ಸಾಕಷ್ಟು  ಉತ್ಪಾದನೆ ಇಲ್ಲವೆಂದಾಗ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದು ರಾಷ್ಟ್ರದ ನೀತಿ. ಆದರೆ ನಮ್ಮ ಪ್ರಧಾನಿ ಎಲ್ಲಾ ರಾಷ್ಟ್ರಗಳಿಗೆ ಹೋಗಿ ಅಲ್ಲಿಂದ ಬರುವಾಗ ಒಪ್ಪಂದ ಮಾಡಿಕೊಂಡು ಮುಂದೆ 10 ವರ್ಷದ ಬಳಿಕ ಕ್ವಿಟ್ ಇಂಡಿಯಾ ಚಳುವಳಿ ಮರುಕಳಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದರು. ಬೀಡಿ ಕಟ್ಟುವ ಕೆಲಸ ನಂಬಿ ಸಂಸಾರ ನಡೆಸುತ್ತಿರುವ ಮಹಿಳೆಯರಿಗೆ ಬೀಡಿ ನಿಲ್ಲಿಸಿ ಕೇಂದ್ರ ಸರಕಾರ ಬಡವರ ಹೊಟ್ಟೆಗೆ ಪೆಟ್ಟು ಕೊಟ್ಟಿದೆ.

ನೂರು ರೂ. ಕದ್ದವನಿಗೆ ಜೈಲು, ಸಾವಿರ ಕೋಟಿ ಕದ್ದವನಿಗೆ ಶಿಕ್ಷೆ ಇಲ್ಲ: ನಮ್ಮ ಸಿದ್ಧರಾಮಯ್ಯ ಸರಕಾರ ರೂ.1ಕ್ಕೆ ಅಕ್ಕಿಕೊಟ್ಟಾಗ ವಿರೋಧ ಪಕ್ಷದವರು ವಿರೋಧ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಯಾಗಿ ಸಿದ್ಧರಾಮಯ್ಯನವರು ಉಚಿತ ಅಕ್ಕಿಕೊಟ್ಟರು. ಆಗ ವಿರೋಧ ಪಕ್ಷದವರಿಗೆ ಹೊಟ್ಟೆ ಕಿಚ್ಚು ಉಂಟಾಯಿತು. ಇವತ್ತು ಯಾರಾದರೂ ಪಾದವರು ಬದುಕಿ ಉಳಿದ್ದಿದ್ದರೆ ಅದು ಸಿದ್ಧರಾಮಯ್ಯನವರ ಧಮಾರ್ಥವಾಗಿ ಕೊಟ್ಟ ಅಕ್ಕಿಯ ಭಾಗ್ಯದಿಂದ ಮಾತ್ರ. ಬಿಜೆಪಿ ಆಳ್ವಿಕೆಯಿಂದಲ್ಲ ಎಂದು ಹೇಳಿದ ಶಕುಂತಳಾ ಶೆಟ್ಟಿಯವರು ಕೆಲವರು ಅತಿ ಬುದ್ದಿವಂತರು ಧರ್ಮಕ್ಕೆ ಅಕ್ಕಿ ಕೊಡುವ ಅವಶ್ಯಕತೆ ಏನಿತ್ತು. ಇದರಿಂದ ಸರಕಾರಕ್ಕೆ ನಷ್ಟ ಎಂದು ಹೇಳುತ್ತಾರೆ. ಆದರೆ ಒಬ್ಬ ಮಲ್ಯ 9ಸಾವಿರ ಕೋಟಿ ಹಣವನ್ನು ಮುಳುಗಿಸಿ ಹೋದವನ್ನು ಬಂಧಿಸಿಲ್ಲ ಯಾಕೆ. ಆಗ ಯಾರಿಗೂ ನಷ್ಟವಾಗಿಲ್ಲವೇ. ನಮ್ಮಲ್ಲಿ ನೂರು ರೂಪಾಯಿ ಕದ್ದರೆ ಅವನಿಗೆ ಜೈಲು ಶಿಕ್ಷೆ, ಅದೇ ಸಾವಿರ ಕೋಟಿ ಹಣ ಮುಳುಗಿಸಿದರೆ ಜೈಲು ಶಿಕ್ಷೆ ಇಲ್ಲ ಯಾಕೆ ಎಂದು ಪ್ರಶ್ನಿಸಿದರು. ಈ ನಿಟ್ಟಿನಲ್ಲಿ ನಿದ್ರೆ ಸರಕಾರವನ್ನು ಜನಸಾಮಾನ್ಯರ ಮೂಲಕ ಎಚ್ಚರಿಕೆ ಮಾಡಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮುಂದೆ ಇದಕ್ಕೆ ಸ್ಪಂಧಿಸದಿದ್ದಲ್ಲಿ ಬೇರೆ ರೀತಿಯ ಹೋರಾಟ ಮಾಡಬೇಕಾದಿತು ಎಂದು ಎಚ್ಚರಿಸಿದರು.

ಅಚ್ಚೇದಿನ್ ಹೇಳಿ ರೈತರಿಗೆ ದ್ರೋಹ: ಸಚಿನ್ ಮಿಗಾ
ಇಂದು ದಿನ ನಿತ್ಯದ ಬೆಳೆ ಗಗನಕ್ಕೆ ಏರಿದೆ. ಮತ್ತೊಂದು ಕಡೆ ರೈತರು ಬೆಳೆದಂತಹ ಬೆಳೆಗೆ ಮಾರುಕಟ್ಟೆಯಲ್ಲಿನ ದರ ಪಾತಾಳಕ್ಕೆ ಇಳಿಸುವ ಮೂಲಕ ಕೇಂದ್ರ ಸರಕಾರ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ರೈತರ ವಿಚಾರ ಮುಂದೆ ಇಟ್ಟು ಕೊಂಡು ಅಚ್ಚೇದಿನ್ ಕೊಡುತ್ತೇನೆಂದು ಹೇಳಿ ಪ್ರಧಾನಿ ಪಟ್ಟಕ್ಕೆ ಏರಿ ದೇಶದ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ರಾಜ್ಯ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾರವರು ಹೇಳಿದರು. ಅಡಿಕೆ ಧಾರಣೆ ಪಾತಾಳಕ್ಕೆ ಇಳಿಯಲು ಕಾರಣ ಏನೆಂದು ಜನರಿಗೆ ತಿಳಿಸಬೇಕಾಗಿದೆ. ಅದು ಪ್ರತಿಭಟನೆ ಮೂಲಕವೇ ಆಗಬೇಕಾಗಿದೆ. ಇದರಿಂದಾಗಿ ಕೇಂದ್ರ ಸರಕಾರ ಎಚ್ಚೆತ್ತು ಕೊಳ್ಳಬೇಕು ಎಂದರು. ಇಂಡೊನೇಷಿಯ, ಮಲೇಶಿಯ, ಬರ್ಮಾದಿಂದ ಸಾಕಷ್ಟು ಕಳ್ಳ ಮಾರ್ಗದ ಮೂಲಕ ಅಡಿಕೆಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಹಿಂದಿನ ಕಾಂಗ್ರೆಸ್ ಸರಕಾರ ವಿಜೆಲೆನ್ಸಿ ಹಾಕಿ ತಡೆದಿತು. ಆಗ ಅಡಿಕೆ ಧಾರಣೆ ಚೇತರಿಕೆಗೊಂಡಿತ್ತು.  ಇದೀಗ ಮೋದಿ ಸರಕಾರದಲ್ಲಿ ಮತ್ತೆಅವರ ಸಂಬಂಧಿಕ ವಿಮಲ್ ಕುಮಾರ್ ಮೋದಿಯವರು ಕಲ್ಕತ ಹೈಕೋರ್ಟ್ ಮುಖಾಂತ ಸುಮಾರು 40ಸಾವಿರ ಅಡಿಕೆಯನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಇದು ಇವತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಬೇಕಾಗಿದೆ. ಈ ಅಡಿಕೆ ಉದ್ಯಮಿಗಳ ಪರವಾಗಿದೆ. ಅಂಬಾನಿ ಜೊತೆ ಶೇರು ಪೇಟೆಯಲ್ಲಿ ವ್ಯವಸ್ಥಿತವಾಗಿ ಹೊಂದಾಣಿಕೆ ಮಾಡುವ ವಿಮಲ್  ಕುಮಾರ್ ಮೋದಿಯವರು ಬೆಲೆ ಕುಸಿತಕ್ಕೆ ಕಾರಣಕರ್ತರು ಎಂದರು.
 
ರಾಷ್ಟ್ರೀಕೃತ ಬ್ಯಾಂಕ್ ನ ಸಾಲ ಮನ್ನಾ ಮಾಡಲು ಕೇಂದ್ರ ಅದೇಶ ಹೊರಡಿಸಲಿ:
ಸಂಕಷ್ಟದಲ್ಲಿರುವ ರೈತರು ಸಾಕಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸಾಲ ಮನ್ನ ಮಾಡುವಂತೆ ಈ ತನಕ ಪ್ರಧಾನಿಯವರಲ್ಲಿ ಬಿಜೆಪಿ ನಿಯೋಗ ಹೋಗಿ  ಹಕ್ಕೊತ್ತಾಯ ಮಾಡಿಲ್ಲ. ಅದೇ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರ ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭ ಸಹಕಾರ ಸಂಘದಲ್ಲಿನ  ರೈತರ ಸಾಲದ ಬಡ್ಡಿಯನ್ನು ಮನ್ನಾ ಮಾಡಿಸಿದ್ದಾರೆ ಎಂದು ಹೇಳಿದ ಸಚಿನ್ ಮಿಗಾರವರು ಅದೇ ಕೇಂದ್ರ ಸರಕಾರ ಇಂದು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲವನ್ನು ಶೇ.50ರಷ್ಟು ಮನ್ನ ಮಾಡಿದರೆ ರಾಜ್ಯದಲ್ಲಿ ಸರಕಾರ ಶೇ.50ರಷ್ಟು ಸಹಕಾರ ಸಂಘಗಳಲ್ಲಿನ  ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಸಿದ್ದರಾಮಯ್ಯರವರು ತಿಳಿಸಿದ್ದಾರೆ ಎಂದು ಹೇಳಿದರು. ಜೊತೆಗೆ ಸರದಾರ್ ವಲ್ಲಭಬಾಯಿ ಪ್ರತಿಮೆಗೆ ರೂ.300 ಕೋಟಿ ಬಿಡುಗುಡೆ ಮಾಡುವ ಮೂಲಕ ಹೀನಾಯಕೃತ್ಯ ಮಾಡಿದ ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಲು ಮುಂಚೂಣಿಯಲ್ಲಿರಬೇಕು ಎಂದರು.

See also  17ವರ್ಷದ ಬಾಲಕ ನೇಣಿಗೆ ಶರಣು

ಅಚ್ಚೇ ದಿನ್ ಬಂದಿದ್ದು ನರೇಂದ್ರ ಮೋದಿಗೆ ಮಾತ್ರ: ಎಂ.ಎಸ್ ಮಹಮ್ಮದ್
ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಅಕಾಂಟ್ಗೆ ರೂ.15ಲಕ್ಷ ಕೊಡುತ್ತೇನೆಂದು ಪ್ರಜ್ಞಾವಂತ ನಾಗರಿಕರನ್ನು ಮೋಸ ಮಾಡಿದ ನರೇಂದ್ರ ಮೋದಿಯವರು ಅಚ್ಚೇ ದಿನ್ ಬಂದಿದ್ದು ಕೂಡಾ ಅವರಿಗೆ ಮಾತ್ರ ಎಂದು ಜಿ.ಪಂ ಸದಸ್ಯ ಎಂ.ಎಸ್ ಮಹಮ್ಮದ್ ಹೇಳಿದರು. ಇವತ್ತು ಮೋದಿಯವರನ್ನು ಪಾಕಿಸ್ಥಾನ, ಪ್ರಾನ್ಸ್, ಅಮೇರಿಕ, ಬಾಂಗ್ಲ, ಸಿಂಗಪುರ, ಚೀನಾ, ದುಬೈ, ಸೌದಿ ಅರಬೇಇಯಲ್ಲಿ ಹುಡುಕಿ ಕೊಡುವ ಕೆಲಸ ಮಾಡಬೇಕಾಗಿದೆ. ಅವರು ಇಂದು ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ ಎಂದು ಹೇಳಿದ ಅವರು ಕೇಂದ್ರ ಸರಕಾರದ ಕಾನೂನು ಸಚಿವರಾಗಿರುವ ಸದಾನದಂದ ಗೌಡರು ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದ ವೇಳೆ ಅಡಿಕೆ ಬೆಲೆ ಇಳಿದರೆ ಪುತ್ತೂರಿನಲ್ಲಿ ರಸ್ತೆ, ರೈಲು, ಬಸ್ ಡ್ನಲ್ಲಿ ಮಲಗುತ್ತೇನೆ ಎಂದೆಲ್ಲಾ ಹೇಳಿದರು. ಆದರೆ ಇವತ್ತು ಅಡಿಕೆ ಬೆಲೆ ಕಡಿಮೆ ಆದಾಗ ಏನು ಮಾತನಾಡುವುದಿಲ್ಲ ಎಂದರು. ಆದರೆ ನಾವು ಪ್ರತಿಭಟನೆ ಮೂಲಕ ಕೇಂದ್ರ ಸರಕಾರವನ್ನು ಎಚ್ಚರಿಸಲಿದ್ದೇವೆ. ಬಿಜೆಪಿಗೆ ಮಾತ್ರ ಪ್ರತಿಭಟನೆ ಮಾಡಲು ತಿಳಿಯುವುದಲ್ಲ. ನಮಗೂ ಗೊತ್ತಿದೆ. ಮುಂದಿನ ಹಂತ ಹಂತವಾಗಿ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಮನವಿಯನ್ನು ಓದಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲಲ್ ರಹೀಮ್ ಸ್ವಾಗತಿಸಿ, ವಂದಿಸಿದರು. ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ದ.ಕ.ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಉಮನಾಥ್ ಶೆಟ್ಟಿ, ಕಿಸಾನ್ ಘಟಕದ ಬ್ಲಾಕ್ ಅಧ್ಯಕ್ಷ ಎ.ಕೆ.ಜಯರಾಮ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶಶಿಕಿರಣ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಯಿದ್ದೀನ್ ಅರ್ಷದ್ ದರ್ಬೆ, ಉಪಾಧ್ಯಕ್ಷ ಕಾತರ್ಿಕ್ ರೈ ಬೆಳ್ಳಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ಹನೀಫ್, ಸನತ್ ರೈ, ರೋಶನ್ ಬನ್ನೂರು, ನಿರಂಜನ ರೈ ಮಠಂತೆಬೆಟ್ಟು, ಜಿಲ್ಲಾ ಕಾಂಗ್ರೆಸ್ ನ ಕಾರ್ಯದರ್ಶಿ ಸಾರ್ಥಕ್ ರೈ  ಕುಂಬ್ರ, ಪ್ರಸಾದ್ ಕೌಶಲ್, ಪುರಸಭೆ ಮಾಜಿ ಸದಸ್ಯ ಇಸಾಕ್ ಸಾಲ್ಮರ, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್, ಪುತ್ತೂರು ನಗರ ಪ್ರಾಧಿಕಾರದ ಅಧ್ಯಕ್ಷ ಬೆಟ್ಟ ಈಶ್ವರ ಭಟ್, ಪುರಸಭೆ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ನವೀನ್ ಭಂಡಾರಿ, ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜೊಹರಾ ನಿಸಾರ್, ನ್ಯಾಯವಾದಿ ಸಾಹಿರಾ ಜುಬೈರ್, ಜಿ.ಪಂ ಸದಸ್ಯೆ ಮಂಜುಳಾ ಮಾದವ, ತಾ.ಪಂ ಸದಸ್ಯ ಪರಮೇಶ್ವರ ಭಂಡಾರಿ, ಬನ್ನೂರು ಗ್ರಾ.ಪಂ ಸದಸ್ಯ ಪಡ್ನೂರು ಈಶ್ವರ ಭಟ್, ನರಿಮೊಗರು ಸಿ.ಎ.ಬ್ಯಾಂಕ್ ಅಧ್ಯಕ್ಷ ಬಾಬು ಶೆಟ್ಟಿ, ಉದ್ಯಮಿ ವೇದನಾಥ ಸುವರ್ಣ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೋತಿಮಾರ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ರಾಜೇಶ್ ಬಾಳೆಕಲ್ಲು, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ, ಪುತ್ತೂರು ಬ್ಲಾಕ್ ಎನ್.ಎಸ್.ಯು.ಐ ಅಧ್ಯಕ್ಷ ಹರ್ಷನ್ ಕುಮಾರ್, ಉಪ್ಪಿನಂಗಡಿ ವಿಟ್ಲ ಕಿಸಾನ್ ಘಟಕದ ಅಧ್ಯಕ್ಷ ಉಲ್ಲಾಸ್ ಸ್ವಿಕೇರ, ಸಂತೋಷ್ ಕುಮಾರ್ ಇಳಂತಾಜೆ, ಕೆದಿಲ ಗ್ರಾ.ಪಂ ಸದಸ್ಯ ಸುದರ್ಶನ್ ಕುದುಂಬ್ಲಾಡಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಹಝೀಜ್ ಬುಶ್ರ. ಖಜಾಂಜಿ ವಲೇರಿಯನ್ ಡಯಾಸ್, ಉಪಾಧ್ಯಕ್ಷ ಎ.ಬಿ.ವೇಗಸ್, ಅಶೋಕ್ ಕುಮಾರ್ ಸಂಪ್ಯ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ, ಗಫೂರ್ ಸಾಹೇಬ್ ಪಾಲ್ತಾಡು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಖಜಾಂಜಿ ಯಾಕೂಬ್ ಹಾಜಿ ದರ್ಬೆ, ಅಬ್ದುಲ್ ರಹಿಮಾನ್ ಅಝಾದ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಿಕ್ರಮ್ ರೈ ಸಾಂತ್ಯ, ಸನಮ್, ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ, ಅಶ್ವಿನಿ ಚಂದ್ರಶೇಖರ್, ಅಕ್ರಮ ಸಕ್ರಮ ಸಮಿತಿ ಸದಸ್ಯ ದಿನೇಶ್ ಪಿ.ವಿ, ವಸಂತ ಕುಮಾರ್ ರೈ, ಶ್ರೀಧರ್ ಭಂಡಾರಿ, ನಗರಸಭೆ ನಾಮನಿರ್ದೇಶಿತ ಸದಸ್ಯ ರೂಪರೇಖ ಆಳ್ವ, ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ, ಶಾರದಾ ಅರಸ್, ಶುಭಮಾಲಿನಿ ಮಲ್ಲಿ, ವಲತ್ತಡ್ಕ ಮಹಾಬಲ ರೈ, ವಕೀಲರ ಸಂಘದ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಸುದೇಶ್ ನಾಕ್, ನಾರಾಯಣ ಕುಡ್ವ, ನ್ಯಾಯವಾದಿ ಭಾಸ್ಕರ ಗೌಡ ಕೋಡಿಂಬಾಳ, ಶಿವನಾಥ ರೈ ಮೇಗಿನಗುತ್ತು, ಶಿವರಾಮ ಆಳ್ವ, ಚಂದ್ರಶೇಖರ್ ಇಳಂತಾಜೆ, ಸುಧೀರ್ ರೈ ನೆಹರುನಗರ, ಮನ್ಮೋಹನ್ ರೈ, ಪವಿತ್ರ ಬಾಬು, ಚೇತನಾ, ಚಂದ್ರಕಲಾ, ವಿಜಯ ಕನರ್ೂರು, ಮಹಾದೇವಿ ಮೇನಾಲ, ಲಲಿತಾ ಮೇನಾಲ, ಶಾಲಿನಿ ಮತ್ತಿತರ ಅನೇಕು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

See also  ಹೈಕೋರ್ಟ್ ಆದೇಶ ಉಲ್ಲಂಘಿಸಿದ ಕರ್ನಾಟಕದ ವಿರುದ್ಧ ತಲಪಾಡಿ ಗಡಿಯಲ್ಲಿ ಸಿಪಿಐಎಂ ಪ್ರತಿಭಟನೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು