News Kannada
Tuesday, September 27 2022

ಕರಾವಳಿ

ಎಂಡೋಸಲ್ಫಾನ್ ಯುವತಿಗೆ ಹೈಟೆಕ್ ಕೃತಕ ಕಾಲು ಒದಗಿಸಲು ಮುಂದಾದ ಕೇರಳ ಸರ್ಕಾರ - 1 min read

Photo Credit :

 ಎಂಡೋಸಲ್ಫಾನ್ ಯುವತಿಗೆ ಹೈಟೆಕ್  ಕೃತಕ ಕಾಲು ಒದಗಿಸಲು ಮುಂದಾದ  ಕೇರಳ ಸರ್ಕಾರ

ಕಾಸರಗೋಡು: ಎಂಡೋಸಲ್ಫಾನ್ ಎಂಬ ಮಹಾಮಾರಿಗೆ ಸಿಲುಕಿ ವೈಕಲ್ಯತೆಗೆ ತುತ್ತಾಗಿರುವ ಕಾಸರಗೋಡು ಎಣ್ಮ ಕಜೆಯ ಶ್ರುತಿಗೆ ಹೈಟೆಕ್  ಕೃತಕ ಕಾಲು ಒದಗಿಸಲು ಕೇರಳ ಸರಕಾರ ಮುಂದಾಗಿದ್ದು, ಕೃತಕ ಕಾಲು ಅಳವಡಿಸಲು ಅಗತ್ಯ ಇರುವ ಎಲ್ಲಾ ಮೊತ್ತವನ್ನು ನೀಡಲು ತೀರ್ಮಾನಿಸಿದೆ.

Endosulfan victim receives timely help from State govt-1

ಶ್ರುತಿಯನ್ನು ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿರುವ ರಾಜ್ಯ ಆರೋಗ್ಯ ಸಚಿವೆ ಕೆ.ಕೆ ಶೈಲಜಾ, ಕೃತಕ ಕಾಲು ಅಳವಡಿಕೆಗೆ ಅಗತ್ಯ ಇರುವ ಎಲ್ಲಾ ನೆರವು ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈಗ ಇರುವ ಕೃತಕ ಕಾಲಿನ ಅವಧಿ ಮುಗಿದಿದ್ದು,  ಹೊಸ ಕೃತಕ ಕಾಲು ಅಳವಡಿಕೆಗೆಲಕ್ಷಾಂತರ ರೂ. ವೆಚ್ಚ ತಗಲುತ್ತಿದ್ದು, ಇದನ್ನು ಭರಿಸಲು ಸಾಧ್ಯವಾಗದೆ ಶ್ರುತಿ ಕುಟುಂಬದವರು ಅತಂತ್ರಕ್ಕೆ ಸಿಲುಕಿದ್ದರು. ಈ ನಡುವೆ ಕಣ್ತೆರೆದ ರಾಜ್ಯ ಸರಕಾರ ಶ್ರುತಿಯ ದಯನೀಯ ಸ್ಥಿತಿ ಮನಗಂಡು ನೆರವಾಗಲು ಮುಂದಾಗಿದೆ.

ಎಂಡೋಸಲ್ಫಾನ್ ಪೀಡಿತೆಯಾಗಿ ತನ್ನ ಛಲದಿಂದಲೇ ಮೇಲೆದ್ದು ಬಂದು ವೈದ್ಯೆಯಾಗುವ ಕನಸು ಹೊತ್ತಿರುವ ಶ್ರುತಿ  ಬೆಂಗಳೂರಿನಲ್ಲಿ ಹೋಮಿಯೋ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾಳೆ. ಶಿಕ್ಷಣ ಪಡೆಯಲು ಸೀಟು ದಕ್ಕಿದರೂ ಶುಲ್ಕ ಪಾವತಿಸಲು ಸಾಧ್ಯವಾಗದೆ ಅತಂತ್ರಕ್ಕೆ ಸಿಲುಕಿದ್ದರು. ಕೊನೆಗೆ ಕಳೆದ ಸರಕಾರ ಶುಲ್ಕ ಪಾವತಿಸಲು ಅನುದಾನ ಮಂಜೂರು ಮಾಡಿತ್ತು. ಬದುಕಿನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಈಕೆ ತನ್ನ ಕನಸುಗಳನ್ನು ನನಸು ಮಾಡಿದ್ದಾಳೆ.

ಎಂಡೋಸಲ್ಫಾನ್‌ನ ಹೊಡೆತಕ್ಕೆ ಸಿಕ್ಕಿ ಅಂಗವೈಕಲ್ಯತೆಯಿಂದಲೇ ಶ್ರುತಿ ಜನಿಸಿದ್ದಳು. ಬಲಗಾಲು ಊನವಾಗಿತ್ತು. ಕೈಯಲ್ಲಿ ನಾಲ್ಕು ಬೆರಳುಗಳು ಅಸಡಾಬಸಡಾವಾಗಿ ಇತ್ತು. ಆ ನಾಲ್ಕು ಬೆರಳುಗಳನ್ನು ತೋರಿಸಿ ನಿಂತಿರುವ ಪುಟ್ಟ ಬಾಲಕಿಯ ಫೋಟೋ ಅಂದು ಹೆಚ್ಚಿನ ಗಮನವನ್ನು ಸೆಳೆದಿತ್ತು. ಆದರೆ ಈಗ ಈಕೆಯ ಛಲ ಹಾಗೂ ಬುದ್ದಿವಂತಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಎಣ್ಮಕಜೆ ಗ್ರಾಮದ ಅಭಿಮಾನದ ಸಂಕೇತವಾಗಿ ಇಂದು ಶ್ರುತಿ ಬೆಳೆದು ನಿಂತಿದ್ದಾಳೆ.

See also  ಸ್ನೇಹಿತನ ಕೊಲೆ ಮಾಡಿದಾತನ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು