News Kannada
Thursday, September 29 2022

ಕರಾವಳಿ

ರಸ್ತೆಯೆಲ್ಲಾ ಹೊಂಡಮಯ: ವಾಹನ ಸಂಚಾರಕ್ಕೆ ತೊಡಕು - 1 min read

Photo Credit :

ರಸ್ತೆಯೆಲ್ಲಾ ಹೊಂಡಮಯ: ವಾಹನ ಸಂಚಾರಕ್ಕೆ ತೊಡಕು

ಬೆಳ್ತಂಗಡಿ: ಮಳೆಗಾಲ ಆರಂಭವಾಗಿ ತಿಂಗಳು ಕಳೆಯುವ ಮೊದಲೇ ಬೆಳ್ತಂಗಡಿ ತಾಲೂಕಿನ ಕೆಲ ರಸ್ತೆಗಳು ಕೊಚ್ಚೆಗುಂಡಿಗಳಾಗಿ ಪರಿವರ್ತಿತವಾಗಿದ್ದು, ಸಂಚಾರಕ್ಕೆ ತೊಡಕಾಗುತ್ತಿದೆ. ಬೆಳ್ತಂಗಡಿ- ಕೊಯ್ಯೂರು – ಬೈಪಾಡಿ  ಜಿಲ್ಲಾ ಪಂಚಾಯತ್ ರಸ್ತೆಯ ಸ್ಥಿತಿಯಂತೂ ಹೇಳತೀರದು. ವಾಹನ ಸವಾರರಿಗೆ ಕೆಸರಿನ ಅಭಿಷೇಕ ಇಲ್ಲಿ ನಿತ್ಯವಾಗುತ್ತಿದೆ.

ಬಂದಾರು, ಮೊಗೆರಡ್ಕ, ಪೆರ್ಲ ಬೈಪಾಡಿ, ಅದೂರ್ ಪೆರಾಲ್, ಕೊಯ್ಯೂರು, ಮಲೆಬೆಟ್ಟು ಮುಂತಾದ ಪ್ರದೇಶಗಳಿಂದ ಬೆಳ್ತಂಗಡಿ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಬೆಳ್ತಂಗಡಿ ಕೊಯ್ಯೂರು ರಸ್ತೆಯಲ್ಲಿ ಸಂಚಾರವೇ ಸಾಧ್ಯವಿಲ್ಲದ ಸ್ಥಿತಿ ಆಗಿದೆ. ಕೆಲ ವರ್ಷಗಳ ಹಿಂದೆ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ನಿರ್ಮಾಣವಾದ ಈ ರಸ್ತೆಯ ಇಂದಿನ ಸ್ಥಿತಿ ದೇವರೇ ಬಲ್ಲ. ರಸ್ತೆಯ ಕೆಲವು ಕಡೆಗಳಲ್ಲಿ ವಾಹನ ಚಾಲಕರಿಗೆ ಗುಂಡಿ ತಪ್ಪಿಸುವ ಕೆಲಸವಾದರೆ, ದ್ವಿಚಕ್ರ ವಾಹನ ಸವಾರರು ಎಲ್ಲಿ ಸಾಗುವುದು ಎಂಬ ದ್ವಂದ್ವದಲ್ಲಿ ಸಂಚರಿಸಬೇಕಾಗುತ್ತಿದೆ. ಪಾದಚಾರಿಗಳಿಗೆ ವಾಹನಗಳು ಬಂದರೆ ಪುಕ್ಕಟೆಯಾಗಿ ಕೆಸರಿನ ಅಭಿಷೇಕವಾಗುತ್ತಿದೆ. ಕೊಯ್ಯೂರು ದೇವಸ್ಥಾನದ ಬಳಿಯಂತೂ ರಸ್ತೆ ಕೆಸರುಗದ್ದೆಯಾಗಿ ಪರಿವರ್ತಿತವಾಗಿದೆ.

ಬೆಳ್ತಂಗಡಿ-ಕೊಯ್ಯೂರು ರಸ್ತೆ ಳೆಗಾಲದ ಆರಂಭದಲ್ಲೇ ಸಂಪೂರ್ಣ ಕೆಸರುಮಯವಾಗಿದೆ. ನಬಾರ್ಡ್ ಯೋಜನೆಯಲ್ಲಿ ನಿರ್ಮಾಣವಾಗಿದ್ದ ಈ ರಸ್ತೆಯ ನಿರ್ವಹಣೆಯ ಸಮಯ ಮುಗಿದ್ದಿದ್ದು, ಈ ಭಾಗದ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ಮತ್ತೆ ಸುಸ್ಥಿತೆಗೆ ತರುವ ವ್ಯವಸ್ಥೆಯನ್ನು ತಕ್ಷಣ ಮಾಡಬೇಕು- ಜಿ.ಕೆ.ಶರ್ಮ ಕೊಯ್ಯೂರು, ನಿತ್ಯ ಪ್ರಯಾಣಿಕರು.

ಬೆಳ್ತಂಗಡಿ-ಕೊಯ್ಯೂರು ರಸ್ತೆಯಲ್ಲಿ ಮುಖ್ಯವಾಗಿ ಕೊಯ್ಯೂರು ದೇವಸ್ಥಾನದ ಬಳಿ ರಸ್ತೆ ಸಂಪೂರ್ಣ ಹಾಳಾಗಿ ಕೆಸರುಮಯವಾಗಿದ್ದು, ಸಂಚಾರಕ್ಕೆ ತೊಡಕಾಗಿರುವ ಬಗ್ಗೆ ಗಮನಕ್ಕೆ ಬಂದಿದು, ತಕ್ಷಣ ರಸ್ತೆಗೆ ತೇಪೆ ಕಾರ್ಯ ನಿರ್ವಹಿಸಲು ಸೂಚಿಸಿದ್ದೇನೆ. ರಸ್ತೆಯ ಇನ್ನೀತರ ಭಾಗಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಕೂಡಾ ಸೂಚಿಸಿದ್ದೇನೆ- ಮಮತಾ ಎಂ.ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರು, ಕುವೆಟ್ಟು ಕ್ಷೇತ್ರ.

See also  ಅರೆಭಾಷೆಯಲ್ಲೊಂದು ವಿನೂತನ ರಂಗಪ್ರಯೋಗ: ಮನ ಸೆಳೆದ 'ಎಮ್ಮ ಮನೆಯಂಗಳದಿ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು