News Kannada
Thursday, September 29 2022

ಕರಾವಳಿ

ನದಿ ನೀರು ಆವರಿಸಿ ಸಂಪೂರ್ಣ ಮುಳುಗಡೆಯಾದ ಅಂಗರಕರಿಯ ರಸ್ತೆ - 1 min read

Photo Credit :

ನದಿ ನೀರು ಆವರಿಸಿ ಸಂಪೂರ್ಣ ಮುಳುಗಡೆಯಾದ ಅಂಗರಕರಿಯ ರಸ್ತೆ

ಬೆಳ್ತಂಗಡಿ: ಹದಿನೈದು ತಿಂಗಳ ಹಿಂದೆ ಶಿಲಾನ್ಯಾಸ ನಡೆದರೂ ಇನ್ನೂ ರಸ್ತೆ ಕಾಮಗಾರಿ ನಡೆಯದೆ ಸಾರ್ವಜನಿಕರು, ವಿದ್ಯಾರ್ಥಿಗಳು ತೊಂದರೆ ಪಡುತ್ತಿರುವ ಕರುಣಾಜನಕ ಕಥೆ ಬೆಳ್ತಂಗಡಿ ತಾಲೂಕಿನ ವೇಣೂರು ಸನಿಹ ಬೆಳಕಿಗೆ ಬಂದಿದೆ.

ಜನರ ಬಹು ಬೇಡಿಕೆಯ ಹೊಸಂಗಡಿ ಸಿದ್ದಕಟ್ಟೆ ಸಂಪರ್ಕ ರಸ್ತೆ ಕಾಮಗಾರಿಯ ವಿಚಾರ ಇದು. ವೇಣೂರು ಸಮೀಪ ಹೊಸಂಗಡಿ ಮೂಲಕ ಕಾಶಿಪಟ್ಣ, ಅಂಗರಕರಿಯ, ಆರಂಬೋಡಿ, ಒಕ್ಕಡಿಗೋಲಿ, ಸಿದ್ದಕಟ್ಟೆ ಸಂಪರ್ಕ ರಸ್ತೆ ಕಾಮಗಾರಿಗೆ ಇನ್ನೂ ಕಾಮಗಾರಿ ನಡೆದಿಲ್ಲ.  ಅಂಗರಕರಿಯ ಮೂಲಕ ಬೈಪಾಸ್ ರಸ್ತೆ ಕಾಮಗಾರಿ ನಡೆಯಬೇಕಿದ್ದು, ಪ್ರಸ್ತುತ ಅಂಗರಕರಿಯ ಸಮೀಪ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಹೊಸಂಗಡಿ ಮೂಲಕ ಸಿದ್ದಕಟ್ಟೆ ಸಂಪರ್ಕಸಲು ಜನರು ಹರಸಾಹಸ ಪಡುತ್ತಿದ್ದಾರೆ.

ಕಳೆದ 15 ತಿಂಗಳ ಹಿಂದೆ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಹೊಸಂಗಡಿ ಸಿದ್ದಕಟ್ಟೆ ಸಂಪರ್ಕ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನಡೆಸಿದ್ದರು. ಆದರೆ ಈವರೆಗೆ ಕಾಮಗಾರಿ ಆರಂಭಗೊಂಡಿಲ್ಲ. ಪ್ರಸ್ತುತ ಈ ರಸ್ತೆ ಸಂಪೂರ್ಣ ಹದಗಡೆಟ್ಟಿದ್ದು, ಅಂಗರಕರಿಯ ಸಮೀಪ ಹಾದುಹೋಗುವ ಪಾಲ್ಗುಣಿ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಳವಾಗಿರುವುದರಿಂದ ಅಂಗರಕರಿಯದಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ.

ಪಡ್ಯಾರಬೆಟ್ಟು ಮೂಲಕ ಸಿದ್ದಕಟ್ಟೆಗೆ ಸಂಪರ್ಕಿಸಲು ಸಡಕ್ ರಸ್ತೆ ಇದೆ. ಈ ರಸ್ತೆಗೆ ಅಂಗರಕರಿಯ ಸಮೀಪ ಬೈಪಾಸ್ ರಸ್ತೆ ನಿರ್ಮಿಸಿದರೆ ಹೊಸಂಗಡಿ ಸಿದ್ದಕಟ್ಟೆ ಸಂಪರ್ಕಿಸಲು ಸುಲಭವಾಗಲಿದೆ. ಆದರೆ ಈವರೆಗೆ ಬೈಪಾಸ್ ರಸ್ತೆ ಕಾಮಗಾರಿಯೇ ನಡೆದಿಲ್ಲ. ರಸ್ತೆಗೆ ಶಿಲಾನ್ಯಾಸ ನೆರವೇರಿಸುವ ಸಂದರ್ಭ ಈ ಬೈಪಾಸ್ ಗೆ ರಸ್ತೆ ನಿರ್ಮಿಸುವ ಪ್ರಸ್ತಾವನೆಯೂ ಇತ್ತು. ಆದರೆ ಪ್ರಸ್ತುತ ಈ ಭಾಗದಲ್ಲಿ ನದಿ ನೀರು ಆವರಿಸಿ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಅಂಗರಕರಿಯದಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗಿ ಹೊಸಂಗಡಿ ಮೂಲಕ ಪ್ರಯಾಣಿಸುವ ಸಾರ್ವಜನಿಕರು ಪಡ್ಯಾರಬೆಟ್ಟು ಮೂಲಕ ಸಿದ್ದಕಟ್ಟೆಗೆ ಸುತ್ತುಬಳಸಿ ಪ್ರಯಾಣಿಸುವಂತಾಗಿದೆ. ಈ ಭಾಗದಲ್ಲಿ ಸುಮಾರು 500ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದು, ಮಳೆಗಾಲ ಇವರಿಗೆ ಸಂಕಷ್ಟದ ದಿನಗಳಾಗಿದೆ.

ಹೊಸಂಗಡಿ ಸಿದ್ದಕಟ್ಟೆ ಸಂಪರ್ಕ ರಸ್ತೆಗೆ ಸಾರ್ವಜನಿಕರು ಕಳೆದ 15 ವರ್ಷಗಳಿಂದ ಬೇಡಿಕೆಯಿಡುತ್ತಿದ್ದಾರೆ. ಈ ಸಂಪರ್ಕ ರಸ್ತೆ ನಿರ್ಮಾಣವಾಗಲು ಹೊಸಂಗಡಿ ಮತ್ತು ಆರಂಬೋಡಿ ಗ್ರಾಮಪಂಚಾಯಿತಿ ಸಹಯೋಗದಲ್ಲಿ ಯೋಜನೆ ರೂಪಿಸಬೇಕು. ನಬಾರ್ಡ್ ಯೋಜನೆ ಮೂಲಕ 50 ಲಕ್ಷ ರೂ. ಯೋಜನಾ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಈ ಗ್ರಾಮ ಪಂಚಾಯಿತಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಯೋಜನೆಗೆ ಅನುಮೋದನೆಯೂ ದೊರಕಿ ಗುದ್ದಲಿ ಪೂಜೆ ನಡೆಸಲಾಗಿದೆ. ಪ್ರಸ್ತುತ ಈ ಭಾಗದ ವಿದ್ಯಾರ್ಥಿಗಳು ವೇಣೂರು ಅಥವಾ ಪಡ್ಯಾರಬೆಟ್ಟು ಮೂಲಕ ಸುತ್ತುಬಳಸಿ ಪ್ರಯಾಣಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳ ಶಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತಿದೆ.

ನಬಾರ್ಡ್ ಯೋಜನೆ ಮೂಲಕ 50 ಲಕ್ಷ ರೂ. ಯೋಜನಾ ವೆಚ್ಚದಲ್ಲಿ ಹೊಸಂಗಡಿ ಸಿದ್ದಕಟ್ಟೆ ಸಂಪರ್ಕ ಕಾಮಗಾರಿಗೆ ಗುದ್ದಲಿ ಪೂಜೆ ನಡೆದ ನಂತರ ಈ ಅನುದಾನವನ್ನು ಬೇರೆಡೆ ವರ್ಗಾಯಿಸಲಾಗಿದೆ. ಇದರಿಂದ ಈ ಕಾಮಗಾರಿ ನಡೆದಿಲ್ಲ. ಈ ಭಾಗದ ಜನರ ಆಶೋತ್ತರಗಳಿಗೆ ಗ್ರಾಮ ಪಂಚಾಯಿತಿ, ಜನಪ್ರತಿನಿಧಿಗಳು ಹಾಗೂ ಸರ್ಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಸಾರ್ವಜನಿಕರ ಆರೋಪ ಒಂದೆಡೆಯಿದೆ.

See also  ಕಕ್ಕಿಂಜೆ ಅರಣ್ಯ ಪ್ರದೇಶಕ್ಕೆ ಬೆಂಕಿ

ಕಳೆದ 15 ವರ್ಷಗಳಿಂದ ಹೊಸಂಗಡಿ ಸಿದ್ದಕಟ್ಟೆ ಸಂಪರ್ಕ ರಸ್ತೆಗೆ ಬೇಡಿಕೆಯಿಡುತ್ತಿದ್ದೇವೆ. 15 ತಿಂಗಳ ಹಿಂದೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿದಾಗ ಸಂತೋಷವಾಗಿತ್ತು. ಆದರೆ ಈವರೆಗೆ ಕಾಮಗಾರಿ ಆರಂಭಗೊಂಡಿಲ್ಲ.
-ಶಿವಪ್ಪ ಅಂಗರಕರಿಯ, ಸ್ಥಳೀಯರು

ನಬಾರ್ಡ್ ಯೋಜನೆ ಮೂಲಕ 50 ಲಕ್ಷ ರೂ. ಯೋಜನಾ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಶಾಸಕರು ಗುದ್ದಲಿಪೂಜೆ ನೆರವೇರಿಸಿದ್ದಾರೆ. ಮುಂದಿನ ದಿನದಲ್ಲಿ ಕಾಮಗಾರಿ ನಡೆಸುವ ಬಗ್ಗೆ ಸರ್ಕಾರ ಭರವಸೆ ನೀಡಿದೆ.
ಗಣೇಶ್ ಶೆಟ್ಟಿ, ಪಿಡಿಓ
ಹೊಸಂಗಡಿ ಗ್ರಾ.ಪಂ

ಕಳೆದ ಗ್ರಾಮಪಂಚಾಯಿತಿ ಚುನಾವಣೆ ಮೊದಲು ಹೊಸಂಗಡಿ ಸಿದ್ದಕಟ್ಟೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆಯನ್ನು ಶಾಸಕರು ನೆರವೇರಿಸಿದ್ದಾರೆ. ಅನುದಾನ ಹೆಚ್ಚು ಬೇಕಾಗಿದೆ. ತಾತ್ಕಾಲಿಕವಾಗಿ 25 ಸಾವಿರ ವೆಚ್ದಲ್ಲಿ ಮೋರಿ ನಿರ್ಮಾಣ ಮಾಡಲಾಗಿದೆ.
ಹೇಮಾ ವಸಂತ್, ಹೊಸಂಗಡಿ
ಗ್ರಾಮ ಪಂಚಾಯಿತಿ ಅಧ್ಯಕ್ಷರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು