News Kannada
Monday, October 03 2022

ಕರಾವಳಿ

ನಾಪತ್ತೆಯಾದ ಯೋಧ ಏಕನಾಥ ಶೆಟ್ಟಿ ಮನೆಯಲ್ಲಿ ಆತಂಕದ ವಾತಾವರಣ - 1 min read

Photo Credit :

ನಾಪತ್ತೆಯಾದ ಯೋಧ ಏಕನಾಥ ಶೆಟ್ಟಿ ಮನೆಯಲ್ಲಿ ಆತಂಕದ ವಾತಾವರಣ

ಬೆಳ್ತಂಗಡಿ: ಜು.22 ರಂದು ಬಂಗಾಲಕೊಲ್ಲಿ ಪರಿಸರದಲ್ಲಿ ನಾಪತ್ತೆಯಾಗಿರುವ ವಾಯಸೇನಾ ವಿಮಾನದ ಬಗ್ಗೆ ಇನ್ನೂ ಮಾಹಿತಿ ಸಿಗದಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕರೆ ಹವ್ಯಕ ಭವನದ ಎದುರಿನಲ್ಲಿರುವ ಮನೆ ನಿವಾಸಿ ಯೋಧ ಏಕನಾಥ ಶೆಟ್ಟಿ (51) ಅವರ ಮನೆಯಲ್ಲಿ ಶೋಕದ ವಾತಾವರಣ ಮುಂದುವರಿದಿದೆ. ಮನೆಯವರಿಗೆ ದಿನದಲ್ಲಿ 2 ಬಾರಿ ಸೇನೆಯಿಂದ ಕರೆಗಳು ಬರುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಮಾಹಿತಿಯನ್ನು ನೀಡುತ್ತಿದ್ದಾರೆ.  ನಿತ್ಯ ಸಂಪರ್ಕದಲ್ಲಿರುವಂತೆ ವ್ಯವಸ್ಥೆ ಮಾಡಲಾಗಿದೆ.

SP visits kin of missing IAF personnel, assures help-1ಮೈಸೂರಿನಿಂದ ಏರ್ ಪೊರ್ಸ್ ವಿಂಗ್ ಕಮಾಂಡರ್ ಆರ್. ಜಿ. ಹೆಗ್ಡೆ  ಅವರು ಸೇನೆಯ ಪರವಾಗಿ ಭೇಟಿ ನೀಡಿ ಜಯಂತಿ ಅವರೊಂದಿಗೆ ಮಾತನಾಡಿ ಶೋಧ ಕಾರ್ಯದ ವಿವರಗಳನ್ನು ನೀಡಿದ್ದು ಕುಟುಂಬಿಕರಿಗೆ ಧೈರ್ಯ ತುಂಬಿದ್ದಾರೆ. ಇತ್ತ ಚೆನ್ನೈನಲ್ಲಿ ತಾಂಬರನ್ ವಾಯು ನೆಲೆಯ ವಿಂಗ್ಕಮಾಂಡರ್ ಟಿ. ಜೆ. ಸಿಂಗ್ ಅವರು ಎಎನ್-32 ವಿಮಾನ ಮತ್ತು ಅದರಲ್ಲಿದ್ದ 29 ಮಂದಿ ಪ್ರಯಾಣಿಕರು ನಾಪತ್ತೆಯಾಗಿರುವ ಬಗ್ಗೆ ಸನಿಹದ ಸೆಲೈಯೂರ್ ಪೋಲಿಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಏಕನಾಥ ಶೆಟ್ಟಿ ಅವರು 1985ರಲ್ಲಿ ಸೇನೆಗೆ ಸೇರಿದ್ದು 1986ರಲ್ಲಿ ಭಾರತ ಸರಕಾರ ಶ್ರೀಲಂಕಾಕ್ಕೆ ಕಳುಹಿಸಿದ್ದ ಭಾರತೀಯ ಶಾಂತಿ ಸೇನಾ ಪಡೆಯಲ್ಲಿ ಇದ್ದು ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಕಾರ್ಗಿಲ್ ಯುದ್ದದಲ್ಲೂ ಭಾಗವಹಿಸಿ ಪ್ರಶಂಸಾ ಪದಕ ಪಡೆದಿದ್ದರು. ಮದ್ರಾಸ್ ರೆಜಿಮೆಂಟಿನಲ್ಲಿ ಸೇವೆ ಸಲ್ಲಿಸಿ 2009 ಫೆ. 28 ರಂದು ಭೂಸೇನೆಯಿಂದ ನಿವೃತ್ತಿಯಾಗಿದ್ದರು. 6 ತಿಂಗಳ ಬಳಿಕ ಸೇನೆಯ ಡಿಫೆನ್ಸ್ ಸರ್ವೀಸ್ ಕಾಪ್ಸರ್ಸ್ ಯಲ್ಲಿ ಸೇವೆಗೆ ಸೇರಿ ಜೂನಿಯರ್ ಕಮಿಷನರ್ ಆಫಿಸರ್ ಆದರು. ಜು. 22 ರಂದು ಪೋರ್ಟ್ ಬ್ಲೇರ್ಗೆ ಹೊರಟಿದ್ದ 29 ಮಂದಿ ಸೈನಿಕರ ಪೈಕಿ ಇವರೂ ಇದ್ದರು.

ದ.ಕ. ಎಸ್ಪಿ ಭೇಟಿ: ಭಾನುವಾರ ಏಕನಾಥ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಜಯಂತಿ ಅವರೊಂದಿಗೆ ಮಾತನಾಡಿದರು. ದ.ಕ ಎಸ್ಪಿ ಭೂಷಣ್ ಬೊರಸೆ ಅವರು ಮಾತನಾಡಿ ಈಗಾಗಲೇ ಕೋಸ್ಟಲ್ ಗಾರ್ಡ್ ನ ಡಿಐಜಿ ಸುರೇಶ್ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಚೆನ್ನೈನ ಕಂಟ್ರೋಲ್ ರೂಂ ನೊಂದಿಗೂ ಸಂಪರ್ಕ ಸಾಧಿಸಿದ್ದೇವೆ. ಯಾವುದೇ ಕ್ಷಣದಲ್ಲೂ ಮಾಹಿತಿಗಾಗಿ ಪೋಲಿಸ್ ಇಲಾಖೆಯನ್ನು ಸಂಪರ್ಕಿಸಬಹುದು. ನಮ್ಮ ಇಲಾಖೆಯಿಂದ ಸಹಕಾರ ನೀಡುತ್ತೇವೆ. ನಿಮ್ಮ ಸಂಪರ್ಕದಲ್ಲಿ ನಾವು ಇರುತ್ತೇವೆ ಎಂದ ಅವರು ಸೇನೆಯ ವಿಮಾನ ನಾವು ಪ್ರಯಾಣಿಸುವ ವಿಮಾನಕ್ಕಿಂತ ಭಿನ್ನವಾಗಿದೆ. ತರಬೇತಿ ಹೊಂದಿದ ಯೋಧರೂ ಆಗಿದ್ದಾರೆ ಎಂದು ಧೈರ್ಯದ ಮಾತನ್ನು ಹೇಳಿದರು. ಈ ಸಂದರ್ಭ ಪುತ್ತೂರಿನ ಶಾಸಕಿ ಶಕುಂತಲ ಶೆಟ್ಟಿ, ಡಿವೈಎಸ್ಪಿ ರವೀಶ್, ಸರ್ಕಲ್ ನೇಮಿರಾಜ್, ಎಸ್ಐ ಸಂದೇಶ್ ಇದ್ದರು.

ಕಾರ್ಣಿಕ್ ಅವರ ಮಾತುಗಳಿಂದ ಧೈರ್ಯ ತಂದು ಕೊಂಡ ಏಕನಾಥ ಶೆಟ್ಟರ ಪತ್ನಿ
ಶನಿವಾರ ಯೋಧ ಕಣ್ಮರೆಯಾದ ವಿಚಾರ ತಿಳಿದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಕೂಡಲೇ ಗುರುವಾಯನಕರೆಗೆ ಆಗಮಿಸಿ ಯೋಧನ ಪತ್ನಿ ಜಯಂತಿ ಅವರನ್ನು ಕಂಡು ಮಾತನಾಡಿಸಿದ್ದರು. ಸ್ವತಃ ಯೋಧರಾಗಿದ್ದ ಕಾರ್ಣಿಕ್ ಅವರು ಭಾರತೀಯ ಸೇನೆಯ ಇತಿಹಾಸ ಅದರಲ್ಲಿನ ಶಿಸ್ತು, ದೇಶಭಕ್ತಿಯ ವಿಚಾರಗಳನ್ನು ಮನಮುಟ್ಟುವಂತೆ ವಿವರಿಸಿದ್ದಲ್ಲದೆ ಸೇನೆಯಲ್ಲಿ ಸೇವೆ ಮಾಡುವುದು ಪುಣ್ಯದ ಕೆಲಸ ಎಂದು ಧೈರ್ಯತುಂಬಿದ್ದರು. ಕಾರ್ಣಿಕ್ ಅವರ ಮಾತುಗಳಿಂದ ಪ್ರಭಾವಿತರಾದ ತೀವ್ರ ಶೋಕದಲ್ಲಿದ್ದು ಅಧೀರರಾಗಿದ್ದ ಜಯಂತಿ ಅವರು ಮನಸ್ಸನ್ನು ಗಟ್ಟಿ ಮಾಡಿಕೊಂಡು ತಾನೋರ್ವ ವೀರ ಯೋಧನ ಪತ್ನಿ ಎಂಬುದನ್ನು ಸ್ಮರಿಸಿಕೊಂಡರು. ಕೇಂದ್ರ ಹಾಗೂ ಸೇನೆಯ ಸಂಪರ್ಕದ ಕೊಂಡಿಯಾಗಿ ಕಾರ್ಣಿಕ್ ಕೆಲಸ ಮಾಡುತ್ತಿದ್ದಾರೆ.
 

See also  ನಂತೂರಲ್ಲಿ ಭೀಕರ ಅಪಘಾತ: ಮಹಿಳೆ ಸಾವು, 15 ಜನರಿಗೆ ಗಾಯ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು