News Kannada
Friday, September 30 2022

ಕರಾವಳಿ

ಕಾಡು ಪ್ರದೇಶದಲ್ಲಿ ನಿಧಿ ಶೋಧ-ವಾಮಾಚಾರ - 1 min read

Photo Credit :

 ಕಾಡು ಪ್ರದೇಶದಲ್ಲಿ ನಿಧಿ ಶೋಧ-ವಾಮಾಚಾರ

ಬೆಳ್ತಂಗಡಿ: ಕಾಡು ಪ್ರದೇಶದಲ್ಲಿ ನಿಧಿ ಶೋಧ ಹಾಗೂ ವಾಮಾಚರ ನಡೆಸಿರುವ ವಿದ್ಯಮಾನ ಗೇರುಕಟ್ಟೆ ಸಮೀಪ ಕಳಿಯ ಮೇರ್ಲ ಎಂಬಲ್ಲಿ ನಡೆದಿದೆ.

ನಿಧಿಗಾಗಿ ಶೋಧ ನಡೆಸಿ ಇದಕ್ಕೆ ಬಳಸಿದ ವಾಮಾಚಾರದ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿದ್ದು ಇದೊಂದು ವ್ಯವಸ್ಥಿತ ನಿಧಿಕಳ್ಳರ ತಂಡದಿಂದ ನಡೆದ ಕೃತ್ಯವಾಗಿರಬಹುದು ಎಂದು ಶಂಕಿಸಲಾಗಿದೆ. ಶಿವರಾಮ ಎಂಬವರ ಮನೆಯ ಪಕ್ಕದಲ್ಲಿರುವ ಕಾಡಿನಲ್ಲಿ ಈ ಕೃತ್ಯ ನಡೆದಿದೆ. ಭಾನುವಾರ ಮನೆಯವರು ಇದನ್ನು ನೋಡಿದ್ದು ನಿಧಿ ಅಗೆದ ಜಾಗದ ಸುತ್ತಲು ಹರಳು, ಕುಂಕುಮ, ಕುಂಬಳಕಾಯಿ ಮುಂತಾದ ವಸ್ತುಗಳಿದ್ದು ಒಂದು ಕೋಳಿಯನ್ನು ಬಲಿಕೊಟ್ಟಿದ್ದಾರೆ.

ಅಲ್ಲದೆ ಸ್ಥಳದಲ್ಲಿ ಈ ಸ್ಥಳದ ಸುತ್ತದ ಒಂದು ನಕ್ಷೆಯು ಸಿಕ್ಕಿದೆ. ಎರಡು ದಿನಗಳ ಹಿಂದೆ ಯಾರೋ ಬೈಕಿನಲ್ಲಿ ಹಾಗೂ ಕಾರಿನಲ್ಲಿ ಬಂದು ಹೋಗಿದ್ದನ್ನು ಈ ಮನೆಯವರು ಕಂಡಿದ್ದು ದಾರಿ ತಪ್ಪಿ ಬಂದಿರಬಹುದು ಎಂದು ತಿಳಿದು ಸುಮ್ಮನಿದ್ದರು. ಈ ಪ್ರದೇಶದಲ್ಲಿ ಹೆಜ್ಜೆ ಗುರುತು ಇದ್ದು ದೊಡ್ಡ ತಂಡವೇ ಬಂದಿರಬಹುದು ಎಂದು ತಿಳಿಯುತ್ತದೆ. ಈ ಬಗ್ಗೆ ಶಿವರಾಮ ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸುಮಾರು 5 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಮನೆ ನಿರ್ಮಿಸಿದ್ದು ಆ ಸಂದರ್ಭದಲ್ಲಿ ಪ್ರತಿನಿತ್ಯ ಹಾವುಗಳು ಸುತ್ತಾಡುತ್ತಿದ್ದು, ಇದರ ಭಯದಿಂದ ಜೋತಿಷ್ಯರಲ್ಲಿ ಮೊರೆಹೋದಾಗ ಇಲ್ಲಿ ದೈವಗಳು ವಾಸಿಸುತ್ತಿದ್ದು ಸ್ಥಳಿಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹಿಂದೆ ಇಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿರಬಹುದು ಎಂದು ತಿಳಿಸಿದರು. ಅಲ್ಲದೆ ಇಲ್ಲಿ ನಿಧಿ ಇರಬಹುದು, ಈ ಮನೆಯಲ್ಲಿ ವಾಸ ಮಾಡಬಾರದು ಎಂದಿದ್ದರಂತೆ. ಅದರಂತೆ ಮನೆಯನ್ನು ತೊರೆದಿದ್ದು ಬೇರೆ ವಾಸವಾಗಿದ್ದರು. ಇದೀಗ ನಿಧಿ ಅಗೆತದಿಂದ ಈ ಮನೆಯವರು ಮತ್ತೆ ಭಯಭೀತರಾಗಿದ್ದಾರೆ.

See also  ಕಠಿಣ ಪರಿಶ್ರಮವೇ ಸಾಧನೆಗೆ ಪ್ರೇರಣೆ: ಫಾದರ್ ಗ್ರೆಗರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು