News Kannada
Monday, October 03 2022

ಕರಾವಳಿ

ಬಸ್ ಮುಷ್ಕರ: ಪುತ್ತೂರಿನಲ್ಲಿ ಬೀದಿಗಿಳಿಯದ ಸರಕಾರಿ ಬಸ್ - 1 min read

Photo Credit :

ಬಸ್ ಮುಷ್ಕರ: ಪುತ್ತೂರಿನಲ್ಲಿ ಬೀದಿಗಿಳಿಯದ ಸರಕಾರಿ ಬಸ್

ಪುತ್ತೂರು: ವಿವಿಧ ಬೇಡಿಕೆ ಈಡೇರಿಕೆ ಸಂಬಂಧಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಆರಂಭಿಸಿರುವ ಅನಿರ್ದಿಷ್ಟವಧಿ ಮುಷ್ಕರದ ಪರಿಣಾಮ ಪುತ್ತೂರು ವಿಭಾಗೀಯ ಕೆಎಸ್ಆರ್ ಟಿಸಿ ಬಸ್ ಓಡಾಟ ಸಂಪೂರ್ಣ ಸ್ಥಗಿತಗೊಂಡಿತ್ತು.

ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಮತ್ತು ಮುಕ್ರಂಪಾಡಿಯ ಡಿಪೋದಲ್ಲಿ ಬಸ್ ನಿಲುಗಡೆಯಾಗಿತ್ತು. ಸುಳ್ಯ ಮತ್ತು ಪುತ್ತೂರು ತಾಲೂಕು ಒಳಗೊಂಡ ಪುತ್ತೂರು ಡಿಪೋದಲ್ಲಿ 165 ಶೆಡ್ಯೂಲ್ ಗಳಿವೆ. 168 ಬಸ್ ಗಳು ಇವೆ. ವಿಭಾಗ ವ್ಯಾಪ್ತಿಯಲ್ಲಿ 538 ಬಸ್ ಇದ್ದು, ಬಿ.ಸಿ. ರೋಡ್-108., ಧರ್ಮಸ್ಥಳ-159 ಮತ್ತು ಮಡಿಕೇರಿ ಡಿಪೋದಲ್ಲಿ 103 ಬಸ್ ಗಳು ಇವೆ. ಯಾವುದೇ ಬಸ್ ಗಳು ಓಡಾಟ ನಡೆಸಲಿಲ್ಲ.

ಬಸ್ ಮುಷ್ಕರದ ಬಿಸಿ ನೇರವಾಗಿ ವಿದ್ಯಾರ್ಥಿಗಳ ಓಡಾಟಕ್ಕೆ ತಟ್ಟಿತ್ತು. ಪುತ್ತೂರು, ಸುಳ್ಯ ತಾಲೂಕಿನಲ್ಲಿ ಶೇ.90 ರಷ್ಟು ವಿದ್ಯಾರ್ಥಿಗಳು ಸರಕಾರಿ ಬಸ್ ಅನ್ನು ಅವಲಂಬಿಸಿರುವುದು ಇದಕ್ಕೆ ಕಾರಣ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿತ್ತು. ಕೆಲ ಶಾಲೆಗಳಲ್ಲಿ ಶೇ.50 ಕ್ಕಿಂತಲೂ ಹಾಜರಾತಿ ಕಡಿಮೆ ಇತ್ತು. ಖಾಸಗಿ ಶಾಲೆಗಳಲ್ಲೂ ಸರಕಾರಿ ಬಸ್ ನಂಬಿ ಬರುವ ವಿದ್ಯಾರ್ಥಿಗಳಿರುವ ಕಾರಣ, ಅಲ್ಲೂ ಮಕ್ಕಳ ಹಾಜರಾತಿ ಕಡಿಮೆ ಇತ್ತು. ಸರಕಾರಿ ಬಸ್ ಓಡಾಟದ ಹಿನ್ನಲೆಯಲ್ಲಿ ಖಾಸಗಿ ಬಸ್ ಗಳು ಓಡಾಟ ನಡೆಸಿತ್ತು. ಸುಳ್ಯದಿಂದ ಕೆಲ ಖಾಸಗಿ ಬಸ್ ಗಳು ಪುತ್ತೂರಿಂದ ಓಡಾಟ ನಡೆಸಿದವು.

 

See also  ಮದುವೆ ದಿನ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ವರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು