News Kannada
Saturday, October 01 2022

ಕರಾವಳಿ

ರಾಜ್ಯ ಸಾರಿಗೆ ಸಂಸ್ಥೆ ನೌಕರರ ಮುಷ್ಕರ: ಜನ ಜೀವನ ಅಸ್ತವ್ಯಸ್ತ - 1 min read

Photo Credit :

 ರಾಜ್ಯ ಸಾರಿಗೆ ಸಂಸ್ಥೆ ನೌಕರರ ಮುಷ್ಕರ: ಜನ ಜೀವನ ಅಸ್ತವ್ಯಸ್ತ

ಬಂಟ್ವಾಳ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘ ಕರೆ ನೀಡಿರುವ ಮುಷ್ಕರಕ್ಕೆ ಬಂಟ್ವಾಳ ತಾಲೂಕಿನಲ್ಲೂ ಉತ್ತಮ ಪ್ರತಿಕಿಯೆ ವ್ಯಕ್ತವಾಗಿದ್ದು ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿತು.

ತಾಲೂಕಿನ ಕೇಂದ್ರಭಾಗವಾದ ಬಿಸಿರೋಡಿನಲ್ಲಿ ಬಸ್ ಹತ್ತಲು ಪ್ರಯಾಣಿಕರೊಳಗೆ ಪೈಪೋಟಿ ನಡೆಯುತ್ತಿತ್ತು. ಮಹಿಳೆಯರಂತೂ ತೀವ್ರ ತೊಂದರೆ ಅನುಭವಿಸಿದ್ದು, ಕೆಲವರು  ತಾವು ಹೋಗಬೇಕಾದ ಸ್ಥಳಗಳಿಗೆ ತೆರಳಲು ಸಾಧ್ಯವಾಗದೆ ವಾಪಾಸು ತೆರಳುತ್ತಿದ್ದ ದೃಶ್ಯಗಳು ಕಂಡು ಬಂತು. ಕೇವಲ ಗ್ರಾಮೀಣ ಭಾಗವಾದ ವಾಮದಪದವು, ಸರಪಾಡಿ, ಕಕ್ಯಪದವು,ಬಿಯಪಾದೆ,ಕೂರಿಯಾಳ ಸಹಿತ ಕೇವಲ ಸರ್ಕಾರಿ ಬಸ್ ಅನ್ನೇ ಆಶ್ರಯಿಸಿರುವ ಮಂಗಳೂರು-ಧರ್ಮಸ್ಥಳ ಮಧ್ಯೆ ಸಂಚರಿಸುವ ನಿತ್ಯ ಪ್ರಯಾಣಿಕರು ಮುಷ್ಕರದಿಂದ ತೊಂದರೆಗೊಳಗಾದರು. ಗ್ರಾಮೀಣ ಪ್ರದೇಶದ ಏಕೈಕ ಸಂಪರ್ಕ ವ್ಯವಸ್ಥೆಯಾಗಿರುವ ಸಾರಿಗೆ ಸಂಸ್ಥೆಯ ಬಸ್ಗಳ ನೌಕರರು ಮುಷ್ಕರಕ್ಕೆ ಇಳಿದಿರುವುದರಿಂದ ಬಸ್ ಗಳು ತನ್ನ ಓಡಾಟವನ್ನು ಸ್ಥಗಿತಗೊಳಿಸಿದ್ದು  ಜನ ಸಾಮಾನ್ಯರು ಪರದಾಡಿದರು.

ಶಾಲಾ ಕಾಲೇಜುಗಳಿಗೆ ರಜೆ ನೀಡದಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ಬರಲು ಪರದಾಡುವ ದೃಶ್ಯಗಳು ಕಂಡು ಬಂತು.ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ಅನ್ನೇ ಅವಲಂಬಿಸಿರುವ ಸಾರ್ವಜನಿಕರು,ಶಾಲಾ ವಿದ್ಯಾರ್ಥಿಗಳು ಬಸ್ ಬಾರದೆ ರಸ್ತೆಯಲ್ಲಿ ಕಾಯುತ್ತಿದ್ದ ದೃಶ್ಯವು ಸಾಮಾನ್ಯವಾಗಿತ್ತು ಕೆಲವರು ಖಾಸಗಿ ವಾಹನಗಳನ್ನು ಅವಲಂಬಿತರಾದರು. ಈ ನಡುವೆ ಬಸ್ ಪಾಸನ್ನು ಹೊಂದಿರುವ ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಯಿತು.

ಕೆಲವು ಖಾಸಾಗಿ ವಾಹನಗಳು ಪ್ರಯಾಣಿಕರಿಂದ ದುಬಾರಿ ಬಾಡಿಗೆ ಮೊತ್ತವನ್ನು ವಸೂಲಿ ಮಾಡಿರುವ ಪ್ರಕರಣಗಳೂ ಕೂಡಾ ಬೆಳಕಿಗೆ ಬಂದಿದೆ.ಮುಷ್ಕರದ ಹಿನ್ನಲೆಯಲ್ಲಿ ಕೆಲವು ಖಾಸಗಿ ಜೀಪು,ಟೆಂಪೋ,ಮ್ಯಾಕ್ಸಿ ಕ್ಯಾಬ್ ಗಳು ಜನರನ್ನು ತುಂಬಿಸಿ ಪ್ರಯಾಣಿಸುತ್ತಿದ್ದವು. ಸಿಕ್ಕಿದ್ದೇ ಅವಕಾಶ ಎಂಬಂತೆ ಮನ ಬಂದಂತೆ ಪ್ರಯಾಣಿಕರಿಂದ ದರ ವಸೂಲಿ ಮಾಡುತ್ತಿದ್ದರು.ಬಿ.ಸಿ.ರೋಡ್ ನಿಂದ ಮಂಗಳೂರಿಗೆ ಸಿ.ಸಿ ಬಸ್ ಗಳನ್ನೇ ಅವಲಂಬಿಸಿದರು. ಶಾಲೆಗೆ ರಜೆ ಇಲ್ಲದಿದ್ದರೂ ವಾಹನ ಸೌಲಭ್ಯವಿಲ್ಲದಿದ್ದರಿಂದ ಮಕ್ಕಳ ಸಂಖ್ಯೆ ಕಡಿಮೆಯಿತ್ತು.

ಕೆಲವು ಖಾಸಾಗಿ ಶಾಲೆಗಳಲ್ಲಿ ವಾಹನದ ವ್ಯವಸ್ಥೆ ಇದ್ದುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ.ಕೆಲವು ಶಾಲೆಗಳಲ್ಲಿ ಸೋಮವಾರ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆಯೂ ತಿಳಿದು ಬಂದಿದೆ.

ಸಿಬಂದಿ ಮುಷ್ಕರವಿದ್ದರೂ ದ.ಕ.ಜೆಲ್ಲೆಯಲ್ಲಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಾರೆಂದು ಕೆ.ಎಸ್.ಆರ್.ಟಿ.ಸಿ. ಅಕಾರಿಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಿರಲಿಲ್ಲ. ಮುಂಜಾನೆವರೆಗೂ ಇದ್ದ ಸಾರಿಗೆ ಚಾಲಕ, ನಿರ್ವಾಹಕರು ಬೆಳಗಿನ ಜಾವ ಡಿಪ್ಪೊದಿಂದ ತೆರಳಿದ್ದರು.ಹಾಗಾಗಿ ಶಾಲಾ ಕಾಲೇಜಿನ ರಜೆಯ ಕುರಿತಂತೆ ದಿಢೀರ್ ನಿರ್ದಾರಕ್ಕೆ ಬರಲು ಸಾಧ್ಯವಾಗಲ್ಲಿ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್.ಸುದ್ದಿಗಾರರಿಗೆ ತಿಳಿಸಿದ್ದಾರೆ.ಮುಷ್ಕರದ ನಡುವೆಯೂಬಿ.ಸಿ.ರೋಡಿನ ಬಸ್ ತಂಗುದಾಣದಲ್ಲಿರುವ ನಿಯಂತ್ರಣ ಕೊಠಡಿ ತೆರೆದುಕೊಂಡು ಕಾರ್ಯಚರಿಸುತಿತ್ತು.

 

See also  ಮಂಗಳೂರು-ಬೆಂಗಳೂರು ರಾ.ಹೆ. ಅಗಲೀಕರಣ: ಭೂಮಿ ಕಳೆಕೊಂಡವರಿಗೆ ಮನೆ ಖರೀದಿಗೂ ಹಣವಿಲ್ಲ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು