News Kannada
Friday, September 30 2022

ಕರಾವಳಿ

ಕೈ ಕತ್ತರಿಸಿದ ಪ್ರಕರಣ: ಇನ್ನೂ ನ್ಯಾಯ ದೊರಕದೆ ಪರದಾಡುತ್ತಿರುವ ಸುಂದರ ಮಲೆಕುಡಿಯ ಕುಟುಂಬ - 1 min read

Photo Credit :

ಕೈ ಕತ್ತರಿಸಿದ ಪ್ರಕರಣ: ಇನ್ನೂ ನ್ಯಾಯ ದೊರಕದೆ ಪರದಾಡುತ್ತಿರುವ ಸುಂದರ ಮಲೆಕುಡಿಯ ಕುಟುಂಬ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಸಮರ್ಥ ಶಾಸಕರಿದ್ದರೂ ಒಂದು ವರ್ಷದಿಂದ ಕೈಬೆರಳು ಕತ್ತರಿಸಿಕೊಂಡಿರುವ ಸುಂದರ ಮಲೆಕುಡಿಯ ನ್ಯಾಯ ದೊರಕದಿರುವುದು ದುರಂತವೇ ಆಗಿದೆ.

After losing fingers at hands of landlord, Sundara Malekudiya's wait for justice continues-1ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ ಅವರ ಕೈ ಕತ್ತರಿಸಿದ ಪ್ರಕರಣ ನಡೆದು ಇದೀಗ ಒಂದು ವರ್ಷ ಕಳೆದಿದ್ದರೂ ಇನ್ನೂ ಈ ಕುಟುಂಬಕ್ಕೆ ನ್ಯಾಯ ಮಾತ್ರ ದೊರಕಿಲ್ಲ. ಸುಂದರ ಮಲೆಕುಡಿಯ ಅವರ  ಎಡ ಕೈ ಕತ್ತರಿಸಿ ಹೋಗಿದ್ದು ಬೆರಳುಗಳೇ ಇಲ್ಲ ಇನ್ನು ಬಲ ಕೈಯಲ್ಲಿ ಮೂರು ಬೆರಳುಗಳು ತುಂಡಾಗಿ ಹೋಗಿದ್ದು ಯಾವುದೇ ಕೆಲಸ ಮಾಡುವುದಿರಲಿ ಊಟ ಬಾಚಿ ತಿನ್ನಲೂ ಸಾಧ್ಯವಿಲ್ಲದಂತಹ ಸ್ಥಿತಿಯಲ್ಲಿದ್ದಾರೆ. ಜಮೀನಿಗೆ ಹಕ್ಕು ಪತ್ರ ಕೊಡುತ್ತೇವೆ, ಅಂಗವಿಕಲ ವೇತನ ನೀಡುತ್ತೇವೆ ಎಂಬಂತಹ ಭರವಸೆಗಳು ದೊರೆತಿದ್ದರೂ ವರ್ಷ ಕಳೆದರೂ ಇದು ಯಾವುದೂ ಈಡೇರಿಲ್ಲ. ಇವರ ಮಗ ಪೂರ್ಣೇಶ ದುಡಿದೆ ಇಡೀ ಕುಟುಂಬವನ್ನು ಸಾಕಬೇಕಾದ ಸ್ಥಿತಿಯಿದೆ.

ವರ್ಷದ ಹಿಂದೆ ಜುಲೈ 25 ರಂದು ಸಂಜೆಯ ವೇಳೆ ಸುಂದರ ಮಲೆಕುಡಿಯ ಹಾಗೂ ಕುಟುಂಬದವರ ಮೇಲೆ ಸ್ಥಳೀಯ ಭೂಮಾಲಕ ಗೋಪಾಲಗೌಡ ಹಾಗೂ ಆತನ ತಂಗಿ ಮತ್ತು ತಂಡ ಧಾಳಿ ನಡೆಸಿತ್ತು. ಕಳೆ ಕತ್ತರಿಸುವ ಯಂತ್ರದೊಂದಿಗೆ ನಡೆದ ಧಾಳಿಯಲ್ಲಿ ಸುಂದರ ಮಲೆಕುಡಿಯ ಎರಡು ಕೈಗಳನ್ನೂ ಕಳೆದುಕೊಂಡಿದ್ದಾನೆ. ತಿಂಗಳುಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಸುಂದರ ಮಲೆಕುಡಿಯ ಕೊನೆಗೂ ಎರಡೂ ಕೈಗಳಿಗೆ ಸ್ವಾಧೀನತೆಯಿಲ್ಲದೆ ಜೀವ ಉಳಿಸಿಕೊಂಡಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಆಡಳಿತ ಆಸ್ಪತ್ರೆಯ ಖರ್ಚನ್ನು ಮಾತ್ರ ವಹಿಸಿಕೊಂಡಿದೆ. ದಶಕಗಳ ಹಿಂದೆಯೇ ಇದೇ ಗೋಪಾಲಗೌಡನ ದಾಳಿಯಲ್ಲಿ ಸುಂದರ ಮಲೆಕುಡಿಯ ಅವರ ಪತ್ನಿ ರೇವತಿ ಅವರು ಒಂದು ಕೈಯ ಮೂರು ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಇಡೀ ಕುಟುಂಬಕ್ಕೆ ಆಧಾರ ಪೂರ್ಣೇಶನೇ ಆಗಿದ್ದಾನೆ. ಚಿಕಿತ್ಸೆಯನ್ನು ಮುಂದುವರಿಸುವಂತೆ ವೈಧ್ಯರುಗಳು ಹೇಳಿದ್ದಾರೆ ಆದರೆ ಮಂಗಳೂರಿಗೆ ಹೋಗಲು ಬಸ್ ಚಾರ್ಜ್ ಗೂ ಹಣವಿಲ್ಲದ ಈ ಕುಟುಂಬ ಚಿಕಿತ್ಸೆ ಮುಂದುವರಿಸುವುದಾದರೂ ಹೇಗೆ.  

ಸುಂದರ ಮಲೆ ಕುಡಿಯ ಅವರಿಗೆ ನ್ಯಾಯ ಕೊಡಿಸಲು ಬೆಳ್ತಂಗಡಿಯಲ್ಲಿ ಭಾರೀ ಹೋರಾಟಗಳೇ ನಡೆದಿತ್ತು. ಕೊನೆಗೂ ಆರೋಪಿಗಳನ್ನು ಬಂಧಿಸಲಾಗಿತ್ತು ಆದರೆ ಇದೀಗ ನ್ಯಾಯಾಲಯದಿಂದ ಇದೊಂದು ಜಾತಿ ನಿಂದನೆ ಪ್ರಕರಣವಲ್ಲ ಜಮೀನು ಗಲಾಟೆ ಮಾತ್ರ ಎಂದು ಕೇಸ್ ನಡೆಯುತ್ತಿದೆ. ಪ್ರಭಾವಿಗಳಾಗಿರುವ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ಸುಂದರ ಮಲೆಕುಡಿಯ ಮಾತ್ರ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿ ಬದುಕನ್ನು ನಡೆಸುತ್ತಿದ್ದಾರೆ.

ಕಾಟಾಜೆ ಪರಿಸರದ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ ಕುಳಿತಿರುವ ಮಲೆಕುಡಿಯ ಕುಟುಂಬಗಳಿಗೆ ಜಮೀನಿಗೆ ಹಕ್ಕುಪತ್ರ ಇಲ್ಲದಿರುವ ಹಿನ್ನಲೆಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಎಲ್ಲ ಕುಟುಂಬಗಳಿಗೂ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಯವರ ಸೂಚನೆಯಂತೆ ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿಯಾಗಿ ಜಮೀನಿನ ಅಳತೆ ಕಾರ್ಯವನ್ನೂ ನಡೆಸಿ ಇದು ಅರಣ್ಯ ಜಮೀನಲ್ಲ ಎಂದು ವರದಿಯನ್ನೂ ನೀಡಿತ್ತು. ಒಂದೇ ತಿಂಗಳಿನಲ್ಲಿ ಹಕ್ಕುಪತ್ರ ನೀಡುವ ಭರವಸೆಯನ್ನೂ ಇವರಿಗೆ ನೀಡಲಾಗಿತ್ತು ಆದರೆ ಇನ್ನೂ ಇವರು ಯಾರಿಗೂ ಹಕ್ಕುಪತ್ರ ಮಾತ್ರ ದೊರೆತಿಲ್ಲ.  ಇದಕ್ಕಾಗಿ ಅವರು ಕಚೇರಿಗಳಿಗೆ ಅಲೆದು ಸಾಕಾಗಿದೆ.ಈ ಕುಟುಂಬಗಳು ಇನ್ನೂ ತಮಗೆ ಜಮೀನಿನ ಒಡೆತನ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

See also  ಬಿಗ್ ಬಾಸ್ ಕಾರ್ಯಕ್ರಮ ನಿಷೇಧಿಸಲು ಬೆಳ್ತಂಗಡಿಯಲ್ಲಿ ಪ್ರತಿಭಟನೆ

ಸುಂದರ ಮಲೆಕುಡಿಯ ಅವರ ಕುಟುಂಬಕ್ಕೆ ಇನ್ನೂ ನ್ಯಾಯ ದೊರಕಿಲ್ಲ ಅವರಿಗೆ ಕೂಡಲೇ ಅಂಗವಿಕಲ ವೇತನ ನೀಡಲು ಕ್ರಮ ಕೈಗೊಳ್ಳಬೇಕು. ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಆರೋಪಿಗಳ ಮೇಲೆ ಹಾಕಲಾಗಿದ್ದ ಜಾತಿನಿಂದನೆ ಪ್ರಕರಣವನ್ನು ನ್ಯಾಯಾಲಯ ತೆಗೆದು ಹಾಕಿದೆ ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಮತ್ತೆ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಹಾಗೂ ಆರೋಪಿಗಳಿಗೆ ಶಿಕ್ಷೆಯಾಗಬೇಕು ಆದರೆ ಭೂಮಾಲಕರ ದೌರ್ಜನ್ಯಗಳು ಕೊನೆಗೊಳ್ಳಲು ಸಾಧ್ಯ.
ಶೇಖರ ಲಾಯಿಲ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ,  

ಅಂದಿನ ಘಟನೆಯನ್ನು ಇಂದಿಗೂ ಭಯದಿಂದಲೇ ನೆನಪಿಸಿಕೊಳ್ಳುತ್ತಾರೆ ಸುಂದರ ಮಲೆಕುಡಿಯ ಹಾಗೂ ಅವರ ಕುಟುಂಬ. ಇನ್ನೂ ಆ ಆಘಾತದಿಂದ ಅವರು ಮುಕ್ತರಾಗಿಲ್ಲ. ನಮಗೆ ಸರಕಾರಗಳು ನೀಡಿದ್ದ ಭರವಸೆಗಳು ಯಾವುದೂ ಈಡೇರಿಲ್ಲ ಜಮೀನಿಗೆ ಹಕ್ಕುಪತ್ರವನ್ನಾದರೂ ನೀಡಲಿ ಮುಂದಿನ ಚಿಕಿತ್ಸೆಗೆ ನಮ್ಮ ಬಳಿ ಹಣವಿಲ್ಲ ಸರಕಾರ ನೆರವಾದರೆ ಮಾತ್ರ ಏನಾದರೂ ಮಾಡಲು ಸಾಧ್ಯ.
ಸುಂದರ ಮಲೆಕುಡಿಯ 

 
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು