News Kannada
Saturday, October 01 2022

ಕರಾವಳಿ

ಸರಣಿ ಕಳವು ಪ್ರಕರಣ: ಆರೋಪಿಗಳ ಬಂಧನ - 1 min read

Photo Credit :

ಸರಣಿ  ಕಳವು ಪ್ರಕರಣ: ಆರೋಪಿಗಳ ಬಂಧನ

ಕಾಸರಗೋಡು: ನಾಯಮ್ಮಾರಮೂಲೆ, ಮೈನಾಟಿ ಮತ್ತು ಚಟ್ಟಂಚಾಲ್ ಪರಿಸರದಲ್ಲಿ ನಡೆದ ಸರಣಿ  ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಿಬ್ಬರು ಆರೋಪಿಗಳನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.

ಬಂಧಿತನನ್ನು ನೆಕ್ರಾಜೆ ನೆಲ್ಲಿಕಟ್ಟೆ ಚೂರಿಪಳ್ಳದ ಖಾಸಿಂ ಶೆಫಿಕ್ (20) ಮತ್ತು ಪಾಲಕ್ಕಾಡ್ ಅ ಕೆ.ಎನ್. ಅಲಿಯಾಸ್ ಶೆರಿನ್(19) ಎಂದು ಗುರುತಿಸಲಾಗಿದೆ. ಜುಲೈ 17ರಂದು ಬೆಂಡಿಚ್ಚಾಲ್ ನಾದಿರ್ ಕ್ವಾರ್ಟರ್ಸ್‌ನ ಮುಹಮ್ಮದ್ ಕುಂಞಿ ಎಂಬವರ ಮನೆಗೆ ನುಗ್ಗಿ 8000  ರೂ. ಮತ್ತು 2000 ರೂ. ಮೌಲ್ಯದ ಎರಡು ವಾಚ್‌ಗಳು, 5000 ರೂ.ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರನ್ನು ಬಂಧಿಸಲಾಗಿದೆ. ಇದಲ್ಲದೆ  ನಾಯಮ್ಮಾರ ಮೂಲೆಯ ಅಬ್ದುಲ್ ರಜಾಕ್‌ರ ಮನೆಯಲ್ಲಿ ನಡೆದ ಕಳವು ಮತ್ತು ಪೊಯಿನಾಚಿಯ ಸೈಂಟ್ ಮೇರೀಸ್ ಚರ್ಚ್ ನಲ್ಲಿ ನಡೆದ ಕಳವಿನಲ್ಲೂ ಇವರು ಶಾಮೀಲಾಗಿದ್ದಾರೆ. ಅಬ್ದುಲ್ ರಜಾಕ್‌ರ ಮನೆಯಿಂದ ಕಳವು ಹೋದ ಚಿನ್ನದ ಒಂದು ಪಾಲನ್ನು ಕಲ್ಲಿಕೋಟೆಯ ಚಿನ್ನದಂಗಡಿಯೊಂದರಿಂದ ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ದ ಟ್ಯಾಬ್‌ನ್ನು ಪತ್ತೆಹಚ್ಚುವ ಕೆಲಸದಲ್ಲೂ ಪೊಲೀಸರು ನಿರತರಾಗಿದ್ದಾರೆ. ಆರೋಪಿಗಳು ಕಳವಿಗೆ ಬಳಸಿದ ಕಾರನ್ನೂ  ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆ ಕಾರಿನಲ್ಲಿ ಆರು ಮಂದಿ ಆರೋಪಿಗಳು ಬಂದು ಕಳವು ನಡೆಸಿರುವುದಾಗಿಯೂ ಅದನ್ನು ಬಂಧಿತ ಶೆಫಿಕ್ ಚಲಾಯಿಸಿದ್ದನೆಂದೂ ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ವಡಗರ ಊರತ್ತ್ ಕುಟ್ಯಾಡಿ ನಿವಾಸಿ ಅಲ್ತಾಫ್ (33), ಕೊಲಾಂಡಿ ಕೋಟೆಕ್ಕಲ್ ಇರಿಂಞಾಲ ಖದೀಜ ಮಂಜಿಲ್‌ನ ಫಿರೋಜ್ ಕೆ. ಎಂ. (32) ಎಂಬವರನ್ನು ಪೊಲೀಸರು ಈ ಹಿಂದೆಯೇ ಬಂಧಿ ಸಿದ್ದರು.

See also  ಸಹ್ಯಾದ್ರಿ: ಒಂದೇ ವೇದಿಕೆಯಲ್ಲಿ ಸೇರಿದ ಹಳೆ ವಿದ್ಯಾರ್ಥಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು