News Kannada
Wednesday, October 05 2022

ಕರಾವಳಿ

ಆಟಿ ಅಮಾವಾಸ್ಯೆ: ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ತೀರ್ಥ ಸ್ನಾನ - 1 min read

Photo Credit :

ಆಟಿ ಅಮಾವಾಸ್ಯೆ: ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ತೀರ್ಥ ಸ್ನಾನ

ಬಂಟ್ವಾಳ: ತಾಲೂಕಿನ ಎರಡು ಪುರಾಣ ಪ್ರಸಿದ್ದ ಕ್ಷೇತ್ರಗಳಾದ  ನರಹರಿ ಶ್ರೀ ಸದಾಶಿವ ದೇವಸ್ಥಾನ ಹಾಗೂ ಕಾರಿಂಜದ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ಅಂಗವಾಗಿ ವಿಶೇಷ ತೀರ್ಥ ಸ್ನಾನ ಮಂಗಳವಾರ ದಿನವಿಡೀ ನಡೆಯಿತು.

ಎರಡೂ ಕ್ಷೇತ್ರಗಳಲ್ಲಿಯೂ ಮುಂಜಾನೆ 4 ಗಂಟೆಯಿಂದಲೇ ಭಕ್ತರು ದೇವರ ದರ್ಶನ ಪಡೆದು ಆಟಿ ಅಮವಾಸ್ಯೆಯ ತೀರ್ಥ ಸ್ಥಾನ ಮಿಂದು ಪುನೀತರಾದರು. ಶ್ರೀ ಕ್ಷೇತ್ರ ಕಾರಿಂಜದ ಗದಾತೀರ್ಥ, ಉಂಗುಷ್ಠ ತೀರ್ಥ ಹಾಗೂ ಜಾನುತೀರ್ಥಗಳಲ್ಲಿ ಮಿಂದ ಸಹಸ್ರಾರು ಭಕ್ತರು ದರ್ಶನ ಪಡೆದರು. ಎಲೆಯಲ್ಲಿ ಅಕ್ಕಿ ಕಾಳು, ಮಧ್ಯಾಹ್ನದವರೆಗೂ ದೇವಸ್ಥಾನದಲ್ಲಿ ಭಾರೀ ಜನದಟ್ಟಣೆ ಕಂಡು ಬಂದಿದ್ದು ಕ್ಷೇತ್ರದ ಆರಾಧ್ಯ ಮೂರ್ತಿಯಾದ ಶಿವ-ಪಾರ್ವತಿಯರ ದರ್ಶನ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ನೂತನ ವಧುವರರು ಆಟಿ ಅಮಾವಾಸ್ಯೆಯ ದಿನದಂದು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವಿಶೇಷತೆಯಾಗಿದ್ದು, ಮಂಗಳವಾರವೂ ಹೆಚ್ಚಿನ ಸಂಖ್ಯೆಯಲ್ಲಿ ವಧುವರರು ಕ್ಷೇತ್ರವನ್ನು ಸಂದರ್ಶಿಸಿದರು. ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿತ್ತು. ಆಟಿ ಅಮಾವಾಸೆಯ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿ. ವತಿಯಿಂದ ವಿಶೇಷ ಬಸ್ಸಿನ ಸೌಕರ್ಯ ಒದಗಿಸಲಾಗಿತ್ತು.
 
ನರಹರಿ ಪರ್ವತ:
ಕಲ್ಲಡ್ಕ ಸಮೀಪದ ನರಹರಿ ಸದಾಶಿವ ಕ್ಷೇತ್ರದಲ್ಲೂ ಅಪಾರ ಸಂಖ್ಯೆಯ ಭಕ್ತರು ತೆರಳಿ ಅಲ್ಲಿನ ಶಂಖ, ಚಕ್ರ, ಗದಾ, ಪದ್ಮ ಗಳೆಂಬ ತೀರ್ಥಕೂಪಕ್ಕೆ ಅಡಿಕೆ ಹಾಗೂ ವೀಳ್ಯದೆಲೆ ಬಿಟ್ಟು ವಿಶೇಷ ಸ್ನಾನ ಮಾಡಿದರು. ಚಿಕ್ಕಮಕ್ಕಳಿಂದ ತೊಡಗಿ ವಯೋವೃದ್ದವರೆಗಿನ ಭಕ್ತಾದಿಗಳು ಕಾಲ್ನಡಿಗೆಯಲ್ಲೇ ಮೆಟ್ಟಿಲುಗಳನ್ನು ಹತ್ತಿ ಅಲ್ಲಿನ ಕೆರೆಗಳಲ್ಲಿ ತಲೆ ಸ್ನಾನ ಗೈದು ಪುನೀತರಾದರು. ಉಬ್ಬಸ ನಿವಾರಣೆಗಾಗಿ ಹುರಿ ಹಗ್ಗವನ್ನು ದೇವರಿಗೆ ಅರ್ಪಿಸುವ ಸೇವೆ ಇಲ್ಲಿ ವಿಶೇಷವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹುರಿಹಗ್ಗವನ್ನು ಕ್ಷೇತ್ರಕ್ಕೆ ಸಮರ್ಪಿಸಿದರು.
ಚಿತ್ರ: ಕಿಶೋರ್ ಪೆರಾಜೆ

 

See also  ಕಡಲತೀರ ರಕ್ಷಣೆಗಾಗಿ ಬೀದಿಗಿಳಿದು ಪ್ರತಿಭಟಿಸಿದ ಜನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು