News Kannada
Thursday, October 06 2022

ಕರಾವಳಿ

ಐಸಿಸ್ ಜತೆ ನಂಟು ಆರೋಪ: ಯಾಸ್ಮಿನ್ ಅಹಮ್ಮದ್ ಸಾಹೀದ್ ಪೊಲೀಸ್ ಕಸ್ಟಡಿಗೆ - 1 min read

Photo Credit :

ಐಸಿಸ್ ಜತೆ ನಂಟು ಆರೋಪ: ಯಾಸ್ಮಿನ್ ಅಹಮ್ಮದ್ ಸಾಹೀದ್ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಐಸಿಸ್ ಜೊತೆ ನಂಟು ಹೊಂದಿದ್ದಾಳೆಂಬ ಆರೋಪದಡಿ ಹೊಸದಿಲ್ಲಿಯಲ್ಲಿ ಬಂಧಿತಳಾದ ಬಿಹಾರ ಪಾಟ್ನಾದ ಯಾಸ್ಮಿನ್ ಅಹಮ್ಮದ್ ಸಾಹೀದ್ (29)ಳನ್ನು ಪೊಲೀಸರು ಶುಕ್ರವಾರ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಕಣ್ಣೂರು ಸೆಂಟ್ರಲ್ ಜೈಲ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಯಾಸ್ಮಿನ್ ಅಹಮ್ಮದ್ ಸಾಹಿದ್‌ಳನ್ನು ಬಿಗು ಪೊಲೀಸ್ ಬಂದೋಬಸ್ತ್‌ನೊಂದಿಗೆ ಗುರುವಾರ ಮಧ್ಯಾಹ್ನದ ವೇಳೆಗೆ ಕಾಸರಗೋಡಿಗೆ ಕರೆತರಲಾಯಿತು. ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಮೂರು ದಿನಗಳ ಕಾಲಕ್ಕೆ ಆಕೆಯನ್ನು ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಬಿಟ್ಟುಕೊಟ್ಟಿತು. ತನ್ನ ನಾಲ್ಕು ವರ್ಷದ ಪುತ್ರನ ಜೊತೆ ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಯಾಸ್ಮಿನ್‌ಳನ್ನು ಹೆಚ್ಚಿನ ತನಿಖೆಗಾಗಿ ಮೂರು ದಿನಗಳ ತನಕ ತಮ್ಮ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ಹೊಸ ದುರ್ಗ ಡಿವೈಎಸ್ಪಿ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯ ಹೊರಡಿಸಿದ ಪ್ರೊಡಕ್ಷನ್ ವಾರಂಟ್‌ನಂತೆ ಪೊಲೀಸರು ಆಕೆಯನ್ನು ಬಿಗಿ ಬಂದೋಬಸ್ತ್‌ನೊಂದಿಗೆ ಕಣ್ಣೂರು ಸೆಂಟ್ರಲ್ ಜೈಲ್‌ನಿಂದ ಕಾಸರಗೋಡಿಗೆ ಕರೆತಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆಗಸ್ಟ್ 8ರಂದು ಮತ್ತೆ ನ್ಯಾಯಾಲಯಕ್ಕೆ ಯಾಸ್ಮಿನ್ ನನ್ನ ಹಾಜರುಪಡಿಸಲು ನ್ಯಾಯಾಲಯ ಆದೇಶ ನೀಡಿತು.

ತ್ರಿಕ್ಕರಿಪುರ, ಪಡನ್ನ ಪ್ರದೇಶಗಳಿಂದ ಸುಮಾರು 17 ಮಂದಿಯ ನಿಗೂಢ ನಾಪತ್ತೆ ಹಾಗೂ ಇವರಿಗೆ ವಿದೇಶಕ್ಕೆ ತೆರಳಲು ಅನುವು ಮಾಡಿಕೊಟ್ಟ ಆರೋಪದಡಿ ಯಾಸ್ಮಿನ್ ನನ್ನ ಬಂಧಿಸಲಾಗಿದೆ. ಈಕೆ ಪ್ರಕರಣದಲ್ಲಿ ಎರಡನೇ ಆರೋಪಿ ಎಂದು ತನಿಖಾ ತಂಡ ಸ್ಪಷ್ಟಪಡಿಸಿದೆ. ಐಸಿಎಸ್ ಜೊತೆ ನಂಟು ಹೊಂದಿರುವ ಕಾಸರಗೋಡು ತ್ರಿಕ್ಕರಿಪುರದ ಅಬ್ದುಲ್ ರಶೀದ್  (32) ಜೊತೆ ಈಕೆ ಸಂಬಂಧ ಹೊಂದಿದ್ದು, ಈ ಹಿಂದೆ ವಿವಾಹವಾಗಿದ್ದ  ಯಾಸ್ಮಿನ್ ಪತಿಯನ್ನು ತೊರೆದಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

ಬಳಿಕ ಅಬ್ದುಲ್ ರಶೀದ್ ಜೊತೆ ಸಂಬಂಧ ಬೆಳೆಸಿದ್ದಾಳೆನ್ನಲಾಗಿದೆ. ಮೇ ತಿಂಗಳಿನಿಂದ ನಾಪತ್ತೆಯಾದ ಅಬ್ದುಲ್ ರಶೀದ್ ಹೊಸದಿಲ್ಲಿಯಲ್ಲಿದ್ದ ಯಾಸ್ಮಿನ್ ಜೊತೆ ನಿರಂತರ ಸಂಪರ್ಕ ಬೆಳೆಸಿದ್ದನು. ಇದರಿಂದ ತನಿಖಾ ತಂಡಕ್ಕೆ ಯಾಸ್ಮಿನ್ ನನ್ನು ಬಂಧಿಸಲು ಸಾಧ್ಯವಾಗಿದೆ.  ಕೆಲ ಸಮಯದ ಹಿಂದೆ ಮಲಪ್ಪುರಂ ನ ಶಾಲೆಯೋಂದರಲ್ಲಿ ಯಾಸ್ಮಿನ್ ಗೆ ಉದ್ಯೋಗ ದೊರಕಿಸಿಕೊಟ್ಟಿದ್ದು, ಅಬ್ದುಲ್ ರಶೀದ್ ಎಂದು ತನಿಖೆಯಿಂದ ತಿಳಿದುಬಂದಿದೆ.

ಯಾಸ್ಮಿನ್ ವಿರುದ್ಧ ಉಗ್ರಗಾಮಿ ಚಟುವಟಿಕೆ ನಿಷೇಧ ಕಾಯ್ದೆ (ಯುಎಪಿಎ) ಹೇರಲಾಗಿದ್ದು, ಈಕೆಯಿಂದ  ಮಾಹಿತಿ ಕಲೆ ಹಾಕಲು ತ್ರಿಕ್ಕರಿಪುರ, ಮಲಪ್ಪುರಂ ಮೊದಲಾದೆಡೆಗೆ ತನಿಖಾ ತಂಡ ಕರೆದೊಯ್ಯಲಿದೆ. ನಾಪತ್ತೆಯಾದ ಬಳಿಕವೂ ಅಬ್ದುಲ್ ರಶೀದ್ ಜೊತೆ ಯಾಸ್ಮಿನ್ ಹಣಕಾಸು ವಹಿವಾಟು ನಡೆಸಿರುವುದಾಗಿ ತನಿಖಾ ತಂಡ ಸ್ಪಷ್ಟಪಡಿಸಿದೆ. ಅಬ್ದುಲ್ ರಶೀದ್ ನ ಪತ್ನಿ ಆಯಿಷಾಳ ಎಟಿಎಂ ಕಾರ್ಡ್ ನ್ನು ಯಾಸ್ಮಿನ್ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ.

ಯಾಸ್ಮಿನ್ ಗೆ ಕಾಬೂಲ್ ಗೆ ತೆರಳುವ ಪ್ರಯಾಣ ವೆಚ್ಚವನ್ನು  ಅಬ್ದುಲ್ ರಶೀದ್  ನೀಡಿದ್ದರು. ಇದಕ್ಕಾಗಿ ಆಯಿಷಾಳ ಎಟಿಎಂ ಕಾರ್ಡು ನೀಡಿದ್ದು, ಆನ್ ಲೈನ್ ಬ್ಯಾಕಿಂಗ್ ಮೂಲಕ ಖಾತೆಗೆ ಹಣ ಜಮಾ ಮಾಡಲಾಗುತ್ತಿತ್ತು.  ಈ ಹಣವನ್ನು ಎಟಿಎಂ ಬಳಸಿ ತೆಗೆದಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕಸ್ಟಡಿಗೆ ಪಡೆಯುವ ಸಂದರ್ಭದಲ್ಲಿ ಯಾಸ್ಮಿನ್ ಬಳಿ 70 ಸಾವಿರ ರೂ. ಇದ್ದುದಾಗಿ  ಪೊಲೀಸರು ತಿಳಿಸಿದ್ದಾರೆ.

See also  ನೇತ್ರಾವತಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯ ರಕ್ಷಣೆ

ಈಕೆ ಬಳಿಯಿಂದ ಎರಡು ಪಾಸ್ ಪೋರ್ಟ್ , 620 ಅಮೇರಿಕನ್ ಡಾಲರ್ ಮೊದಲಾದವುಗಳನ್ನೂ ತನಿಖಾ ತಂಡ ವಶಪಡಿಸಿಕೊಂಡಿತ್ತು. ಯಾಸ್ಮಿನ್ ಳನ್ನು ಶುಕ್ರವಾರ ಸಂಜೆಯಿಂದಲೇ ಕಾಸರಗೋಡು ಜಿಲ್ಲೆಯ ಹಲವಡೆಗೆ ಕೊ೦ಡೊಯ್ದು ತನಿಖಾ ತಂಡ ಮಾಹಿತಿ ಕಲೆ ಹಾಕುತ್ತಿದ್ದು, ಬಿಗು ಪೊಲೀಸ್ ಬಂದೋಬಸ್ತ್ ನಲ್ಲಿ ಕರೆತರಲಾಗುತ್ತಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು