News Kannada
Wednesday, October 05 2022

ಕರಾವಳಿ

ಯುವಕರನ್ನ ನಿಬ್ಬೆರರಾಗಿಸಿದ ಬುಲೆಟ್ ಸವಾರಿ - 1 min read

Photo Credit :

ಯುವಕರನ್ನ ನಿಬ್ಬೆರರಾಗಿಸಿದ ಬುಲೆಟ್ ಸವಾರಿ

ಕಾಸರಗೋಡು: ಪ್ರತಿಯೊಬ್ಬ ಯುವಕ-ಯುವತಿಯರಲ್ಲಿ ದ್ವಿಚಕ್ರ ವಾಹನ ಚಲಾಯಿಸಬೇಕು ಎಂಬ ಮೋಹ ಇದ್ದೇ ಇದೆ. ಆದರೆ ಈ ಕನಸು ನನಸಾಗುವುದು ಕೆಲವೇ ಕೆಲವೇ ಮಂದಿಯಲ್ಲಿ. ಅದರಲ್ಲೂ ಕೆಲ ಯುವಕರಿಗೆ ಬುಲೆಟ್ ಬೈಕ್ ಮೇಲೆ ಕಣ್ಣು, ಒಮ್ಮೆಯಾದರೂ ಚಲಾಯಿಸಬೇಕೆಂಬ ಕನಸು ಹೊತ್ತುಕೊಂಡಿರುತ್ತಾರೆ. ಆದರೆ ಯುವಕರನ್ನು ಮೆಟ್ಟಿ ನಿಂತು ತಾನೇನು ಕಡಿಮೆ ಇಲ್ಲ ಎಂಬುದುದನ್ನು ಕಾಸರಗೋಡಿನ ಯುವತಿಯೋರ್ವಳು ತೋರಿಸಿಕೊಟ್ಟಿದ್ದಾಳೆ. ಇದು ಯುವಕರನ್ನು ನಿಬ್ಬೆರರಾಗಿಸುವಂತಹದು. ಬೋವಿಕ್ಕಾನದ ಸೌಮ್ಯ ಎಂಬ ಯುವತಿ  ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾಳೆ.

ಯುವತಿಯರು ಹೆಚ್ಚಾಗಿ ಸ್ಕೂಟರನ್ನು ಇಷ್ಟಪಡುತ್ತಿದ್ದಾರೆ. ಸೌಮ್ಯಳ ಮನಸ್ಸಿನಲ್ಲಿ ಬುಲೆಟ್ ಚಲಾಯಿಸಬೇಕೆಂಬ ಮೋಹ ಅಡಗಿತ್ತು. ಅದು ಈಗ ಸಾಫಲ್ಯಗೊಂಡಿದೆ. ರಾಯಲ್ ಎನ್ ಫೀಲ್ಡ್  ಮೊದಲ ಬಾರಿಗೆ ಮಹಿಳೆಯರಿಗೆ ಆಯೋಜಿಸಿದ  ಹಿಮಾಲಯ ಒಡಿಸ್ಸಿ ಯಾತ್ರೆಯಲ್ಲಿ ಸೌಮ್ಯ ಕರ್ದು೦ಗಕ್ಕೆ ಬುಲೆಟ್ ಚಲಾಯಿಸುವ ಮೂಲಕ ಅಚ್ಚರಿ ಹುಟ್ಟಿಸಿದ್ದಾಳೆ. 14 ಮಂದಿಯಲ್ಲಿ  ಏಕೈಕ ಕೇರಳಿಯಳಾಗಿದ್ದಳು ಸೌಮ್ಯ. ವಿಶ್ವದ ಅತೀ ಎತ್ತರದ ರಸ್ತೆಯನ್ನು  ಹಿಮಾಲಯ ಪರ್ವತ ಶ್ರೇಣಿಯ ಕರ್ದು೦ಗಳದಲ್ಲಿದೆ. ಈ ಪರ್ವತ ಮೂಲಕ ಬುಲೆಟ್ ಬೈಕ್ ಚಲಾಯಿಸಿ ಗಮನ ಸೆಳೆದಿದ್ದಾಳೆ.

ಶಾಲಾ ದಿನಗಳಿಂದಲೇ ಸೌಮ್ಯಳಿಗೆ ದ್ವಿಚಕ್ರ ವಾಹನಗಳ ಮೇಲೆ ಅಪಾರ ಪ್ರೀತಿ. ಸೈಕಲ್ ನಲ್ಲಿ ಮೊದಲು ಸವಾರ ನಡೆಸುತ್ತಿದ್ದಳು. ಇದೀಗ ಬುಲೆಟ್  ಸೌಮ್ಯಳ ಕೈ ಸೇರಿದೆ. ಈ ಯಾತ್ರೆ  ಕೇವಲ ಥ್ರಿಲ್ ಮಾತ್ರವಲ್ಲ.  ಹಲವು ಅಪಘಾತಗಳನ್ನು ಕಣ್ಣಾರೆ ಕಂಡ ನಿದರ್ಶನಗಳು ಸೌಮ್ಯಳ ಮುಂದಿದೆ. ಆದರೂ ಸೌಮ್ಯಳ  ಆಸೆ ಇಲ್ಲಿಗೆ ಕೊನೆಗೊಳ್ಳುತ್ತಿಲ್ಲ. ದೇಶದಾದ್ಯಂತ  ಬುಲೆಟ್  ರೈಡ್ ಮಾಡಬೇಕೆಂಬ ಕನಸು ಹೊಂದಿದ್ದು, ಇದು ಮುಂದಿನ ಯೋಜನೆ ಕೂಡಾ. ಇದಕ್ಕೆ ಕುಟುಂಬದವರ ಸಂಪೂರ್ಣ ಸಹಕಾರ ಕುಟುಂಬದಿಂದ ಲಭಿಸುತ್ತಿದೆ. ಈ ಪ್ರೋತ್ಸಾಹದಿಂದ ಮತ್ತಷ್ಟು ಕನಸು ಕಾಣುತ್ತಿದ್ದಾಳೆ.

See also  ಅನಾರೋಗ್ಯ, ಆರ್ಥಿಕ ಸಂಕಷ್ಟಕ್ಕೆ ನೊಂದು ವೃದ್ಧ ದಂಪತಿ ಸಾವಿಗೆ ಶರಣು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು