News Kannada
Monday, September 26 2022

ಕರಾವಳಿ

ಸುಳ್ಯ ತಾಲೂಕಿನ ಆರೋಗ್ಯ ಇಲಾಖೆ ಖಾಲಿ ಖಾಲಿ - 1 min read

Photo Credit :

ಸುಳ್ಯ ತಾಲೂಕಿನ ಆರೋಗ್ಯ ಇಲಾಖೆ ಖಾಲಿ ಖಾಲಿ

ಸುಳ್ಯ: ಡೆಂಘೆ, ಮಲೇರಿಯಾ, ಜಾಂಡೀಸ್, ಮಂಗನ ಕಾಯಿಲೆ, ಇಲಿಜ್ವರ, ಚಿಕೂನ್ ಗುನ್ಯ, ಹೀಗೆ ಹತ್ತು ಹಲವು ರೋಗಗಳ ತವರೂರು ಮಲೆನಾಡಾದ ಸುಳ್ಯ ತಾಲೂಕು. ಕಳೆದ ಹಲವು ದಶಕಗಳಿಂದ ಈ ತಾಲೂಕಿನ ಜನರನ್ನು ಹಲವು ರೋಗ ರುಜಿನಗಗಳು ಕಾಡಿದೆ. ಹೀಗೆ ಹಲವು ರೋಗಗಳು ಕಾಡಿದ ಸಂದರ್ಭದಲ್ಲಿ ಇಲ್ಲಿನ ಜನರಿಗೆ ಆಸರೆಯಾಗುವುದು ಇಲ್ಲಿನ ಸರ್ಕಾರಿ ಆಸ್ಪತ್ರೆಗಳು.

ಆದರೆ ಸುಳ್ಯ ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ವೈದ್ಯರ ಮತ್ತು ಇತರ ಸಿಬ್ಬಂದಿಗಳ ಹುದ್ದೆ ಖಾಲಿ ಬಿದ್ದಿರುವುದರಿಂದ ಸಕಾಲಕ್ಕೆ ಸರಿಯಾದ ಸೇವೆಯನ್ನು ನೀಡುವುದು ಸಮಸ್ಯೆ ಸೃಷ್ಠಿಸುತ್ತದೆ. ಆರೋಗ್ಯ ಇಲಾಖೆಯ ಹುದ್ದೆ ಭರ್ತಿ ಮಾಡಬೇಕೆಂದು ದಶಕಗಳಿಂದ ಬೇಡಿಕೆಯಿದ್ದರೂ ಸರ್ಕಾರ ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದೆ.

ಸುಳ್ಯದಲ್ಲಿ ತಾಲುಕು ಆಸ್ಪತ್ರೆ, ಆರು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಂಚಾರಿ ಗಿರಿಜನ ಆರೋಗ್ಯ ಘಟಕ ಮತ್ತು ತಾಲೂಕು ಆರೋಗ್ಯಾಧಿಕಾರಿಯ ಕಚೇರಿ ಕಾರ್ಯನಿರ್ವಹಿಸುತ್ತಿದೆ. ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಬಿದ್ದಿದೆ. ಅಂದರೆ ಒಟ್ಟು 235 ಹುದ್ದೆಗಳು ಮಂಜೂರಾಗಿದ್ದರೂ ಭರ್ತಿಯಾಗಿರುವುದು 124 ಮಾತ್ರ. 110 ಹುದ್ದೆಗಳು ಜನರಿಲ್ಲದೆ ಖಾಲಿಯಾಗಿದೆ.

ದಶಕಗಳ ಬೇಡಿಕೆಯ ಬಳಿಕ ಸುಳ್ಯ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. 100 ಬೆಡ್ ನ ಆಸ್ಪತ್ರೆಯಾಗಿ ಮೆಲ್ದರ್ಜೆಗೇರಿ ಕಟ್ಟಡ ಕಾಮಗಾರಿ ಮುಗಿದರೂ ಇಲ್ಲಿಗೆ ವೈದ್ಯರ ಮತ್ತು ಇತರ ಸಿಬ್ಬಂದಿಗಳ ನೇಮಕಾತಿ ಇನ್ನೂ ನಡೆದಿಲ್ಲ. ತಾಲೂಕು ಆಸ್ಪತ್ರೆಗೆ ಒಟ್ಟು 94 ಹುದ್ದೆಗಳು ಮಂಜೂರಾಗಿರುವುದರಲ್ಲಿ ಕೇವಲ 34 ಮಾತ್ರ ಭರ್ತಿಯಾಗಿದೆ. 60 ಹುದ್ದೆಗಳು ಖಾಲಿ ಬಿದ್ದಿದೆ. ಮುಖ್ಯ ವೈದ್ಯಾಧಿಕಾರಿಯ ಹುದ್ದೆ ಖಾಲಿ ಬಿದ್ದಿದೆ. ಒಂಭತ್ತು ಮಂದಿ ತಜ್ಞ ವೈದ್ಯರು ಬೇಕಾಗಿರುವಲ್ಲಿ ಕೇವಲ ಮೂರು ಮಂದಿ ಮಾತ್ರ ಇದ್ದಾರೆ. ಹಲವು ವರ್ಷಗಳಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ  ದೊಡ್ಡ ಸಮಸ್ಯೆಯನ್ನು ಸೃಷ್ಠಿಸುತ್ತದೆ. ಪ್ರತಿ ದಿನ ಮುನ್ನೂರರಿಂದ ನಾನೂರು ಮಂದಿ ಹೊರ ರೋಗಿಗಳು ಬರುತ್ತಾರೆ. ಹೊರ ರೋಗಿಗಳ, ಒಳ ರೋಗಿಗಳ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಮರಣೋತ್ತರ ಪರೀಕ್ಷೆ ಸೇರಿ ದೈನಂದಿನ ಕೆಲಸಗಳಿಗೆ ವೈದ್ಯರ ಕೊರತೆ ಸಮಸ್ಯೆ ಸೃಷ್ಠಿಸಿದೆ. ಇರುವ ಬೆರಳೆಣಿಕೆಯ ವೈದ್ಯರು ವಿಶ್ರಾಂತಿಯೇ ಇಲ್ಲದೆ ನಿರಂತರ ಕೆಲಸ ಮಾಡಬೇಕಾಗುತ್ತದೆ. . ಅಲ್ಲದೆ ಹಿರಿಯ ಆರೋಗ್ಯ ಸಹಾಯಕ, ಎಕ್ಸರೇ ಸಹಾಯಕ, ಹಿರಿಯ ಲ್ಯಾಬ್ ಟೆಕ್ನಿಷಿಯನ್, ಕಚೇರಿ ಸೂಪರಿಂಡೆಂಟ್, ಕಚೇರಿ ಕಾರ್ಯದರ್ಶಿ, ಎಫ್ಡಿಎ (ಎರಡು ಹುದ್ದೆ), ಎಸ್ಡಿಎ, ಸ್ಟಾಪ್ ನರ್ಸ್(ಆರು), ಕ್ಲರ್ಕ್ ಮತ್ತು ಟೈಪಿಸ್ಟ್(ಎರಡು), ವಾಹನ ಚಾಲಕ(ಎರಡು),  ಕಿರಿಯ ಆರೋಗ್ಯ ಸಹಾಯಕಿ(ಎರಡು), ಕಿರಿಯ ಆರೋಗ್ಯ ಸಹಾಯಕ(ಎರಡು), ಕಣ್ಣು ಪರೀಕ್ಷಾ ಸಹಾಯಕ, ನರ್ಸಿಂಗ್ ಸೂಪರಿಂಡೆಂಟ್, ಅಡುಗೆಯವರು(ಐದು), ಅಟೆಂಡೆರ್, ಗ್ರೂಪ್ ಡಿ(20) ಹುದ್ದೆಗಳು ಖಾಲಿ ಬಿದ್ದಿದ್ದು ಆಸ್ಪತ್ರೆಯ ಕೆಲಸ ಕಾರ್ಯಗಳು ತಾಳ ತಪ್ಪುತ್ತಿದೆ.

ಇತರೆ ಕಡೆಗಳಲ್ಲಿಯೂ ಖಾಲಿ ಖಾಲಿ:
ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಒಂಭತ್ತು ಹುದ್ದೆ ಮಂಜೂರಾಗಿರುವುದರಲ್ಲಿ ಐದು ಖಾಲಿಯಾಗಿದೆ. ಹಿರಿಯ ಆರೋಗ್ಯ ಸಹಾಯಕ, ಪ್ರಥಮ ದರ್ಜೆ ಸಹಾಯಕ, ಕ್ಷೇತ್ರ ಆರೋಗ್ಯ ಶಿಕ್ಷಕ, ಕಿರಿಯ ವೈದ್ಯೇತರ ಮೇಲ್ವಿಚಾರಕ, ಡಿದರ್ಜೆ ಸಿಬ್ಬಂದಿ ಹುದ್ದೆ ಖಾಲಿ ಇದೆ. ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ರಲ್ಲಿ ಆರು ಹುದ್ದೆ ಖಾಲಿ. ಕಿರಿಯ ಪುರುಷ ಆರೋಗ್ಯ ಸಹಾಯಕ(ಎರಡು), ಕಿರಿಯ ಮಹಿಳಾ ಆರೋಗ್ಯ ಸಹಾಯಕಿ(ಎರಡು), ಪ್ರಯೋಗ ಶಾಲಾ ತಂತ್ರಜ್ಞ, ಡಿಗ್ರೂಪ್ ಸಿಬ್ಬಂದಿ ಹುದ್ದೆಗಳೀಗೆ ಜನ ಇಲ್ಲ. ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 27 ರಲ್ಲಿ ಏಳು ಹುದ್ದೆ ಖಾಲಿ ಇದೆ. ಕಿರಿಯ ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕರ ಹುದ್ದೆ(ತಲಾ ಎರಡು), ಫಾರ್ಮಾಸಿಸ್ಟ್ ಮತ್ತು ಡಿಗ್ರೂಪ್ ಸಿಬ್ಬಂದಿ ಹುದ್ದೆ ಖಾಲಿ.

See also  ಯುವಜನ ಜಾಗೃತಿಗೆ ಕಥೋಲಿಕ ಮಹಾ ಸಮಾವೇಶ: ಮ್ಯಾಕ್ಸಿಂ ನೊರೋನ್ಹಾ

ಪಂಜ ಪ್ರಾ.ಆ.ಕೇಂದ್ರದಲ್ಲಿ 18 ರಲ್ಲಿ ಐದು ಹುದ್ದೆ ಖಾಲಿ ಇದೆ. ಪ್ರಥಮ ದರ್ಜೆ ಸಹಾಯಕ, ಕಿರಿಯ ಪುರುಷ ಆರೋಗ್ಯ ಸಹಾಯಕ, ಪ್ರಯೋಗಶಾಲಾ ತಂತ್ರಜ್ಞ, ಫಾರ್ಮಾಸಿಸ್ಟ್, ಡಿದರ್ಜೆ ಸಿಬ್ಬಂದಿ ಹುದ್ದೆ ಖಾಲಿಯಾಗಿದೆ.
ಗುತ್ತಿಗಾರು ಪ್ರಾ.ಆ.ಕೇಂದ್ರದಲ್ಲಿ 19 ರಲ್ಲಿ ಆರು ಹುದ್ದೆ ಖಾಲಿ ಇದೆ. ಇಲ್ಲಿಗೆ ಖಾಯಂ ವೈದ್ಯಾಧಿಕಾರಿಯೇ ಇಲ್ಲ. ಶುಶ್ರೂಷಕಿ, ಕಿರಿಯ ಪುರುಷ ಆರೋಗ್ಯ ಸಹಾಯಕ, ಫಾರ್ಮಾಸಿಸ್ಟ್, ಡಿದರ್ಜೆ ಹುದ್ದೆಗಳೂ ಖಾಲಿ ಬಿದ್ದಿದೆ.
ಕೊಲ್ಲಮೊಗ್ರ ಪ್ರಾ.ಆ.ಕೇಂದ್ರದಲ್ಲಿ 16 ರಲ್ಲಿ 10 ಹುದ್ದೆ ಖಾಲಿ. ಶುಶ್ರೂಕಿ, ಕಿರಿಯ ಪುರುಷ ಆರೋಗ್ಯ ಸಹಾಯಕ(ಎರಡು), ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಪ್ರಥಮ ದರ್ಜೆ ಸಹಾಯಕ, ಪ್ರಯೋಗ ಶಾಲಾ ತಂತ್ರಜ್ಞ, ಫಾರ್ಮಾಸಿಸ್ಟ್, ಡಿ.ದರ್ಜೆ ಸಿಬ್ಬಂದಿ, ವಾಹನ ಚಾಲಕ ಹುದ್ದೆ ಖಾಲಿಯಾಗಿದೆ. ಸುಬ್ರಹ್ಮಣ್ಯ ಪ್ರಾ.ಆ.ಕೇಂದ್ರದಲ್ಲಿ 19 ರಲ್ಲಿ ನಾಲ್ಕು ಹುದ್ದೆ ಖಾಲಿ. ಕಿರಿಯ ಪುರುಷ ಆರೋಗ್ಯ ಸಹಾಯಕ, ಪ್ರಯೋಗಶಾಲಾ ತಂತ್ರಜ್ಞ, ಡಿ ದರ್ಜೆ ಸಿಬ್ಬಂದಿ, ವಾಹನ ಚಾಲಕ ಹುದ್ದೆ ಖಾಲಿಯಾಗಿದೆ. ಸುಳ್ಯದ ಸಂಚಾರಿ ಗಿರಿಜನ ಆರೋಗ್ಯ ಘಟಕದಲ್ಲಿ ಒಂಭತ್ತರಲ್ಲಿ ಐದು ಹುದ್ದೆ ಖಾಲಿ. ಕಿರಿಯ ಪುರುಷ ಆರೋಗ್ಯ ಸಹಾಯಕ(ಎರಡು), ಫಾರ್ಮಾಸಿಸ್ಟ್, ಡಿದರ್ಜೆ ಸಿಬ್ಬಂದಿ(ಎರಡು) ಹುದ್ದೆಗಳು ಖಾಲಿಯಾಗಿದೆ.

‘ಸುಳ್ಯ ತಾಲೂಕಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಮಂಜೂರಾಗಿರುವ ಎಲ್ಲಾ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಾಗಿರುವುದರಿಂದ ಸರ್ಕಾರಿ ಕೆಲಸಗಳು ಸುಸೂತ್ರವಾಗಿ ನಡೆಯದೆ ಜನರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಆದುದರಿಂದ ಸುಳ್ಯ ತಾಲೂಕಿನ ಇಲಾಖೆಗಳ ಖಾಲಿ ಹುದ್ದೆ ಭರ್ತಿ ಮಾಡಲು ಸರ್ಕಾರ ಶೀಘ್ರ ಗಮನ ಹರಿಸಬೇಕು’
-ಎಸ್.ಅಂಗಾರ.
ಶಾಸಕ. ಸುಳ್ಯ

‘ಸುಳ್ಯ ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೆ ಇಲಾಖೆಯಿಂದ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಸಾಧ್ಯ ಮತ್ತು ಇರುವ ವೈದ್ಯರ ಮತ್ತು ಸಿಬ್ಬಂದಿಗಳ ಕೆಲಸದ ಒತ್ತಡ ಕಡಿಮೆಯಾಗಬಹುದು. ಆರೋಗ್ಯ ಇಲಾಖೆಯ ಹುದ್ದೆಗಳು ಸದ್ಯದಲ್ಲಿಯೇ ಭರ್ತಿಯಾಗುವ ನಿರೀಕ್ಷೆ ಇದೆ’
-ಡಾ.ಸುಬ್ರಹ್ಮಣ್ಯ
ಸುಳ್ಯ ತಾಲೂಕು ಆರೋಗ್ಯಾಧಿಕಾರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು