News Kannada
Sunday, September 25 2022

ಕರಾವಳಿ

ಇ-ತ್ಯಾಜ್ಯವನ್ನು ಸಂಗ್ರಹಣಾ ಘಟಕಗಳಿಗೆ ಚಾಲನೆ - 1 min read

Photo Credit :

ಇ-ತ್ಯಾಜ್ಯವನ್ನು ಸಂಗ್ರಹಣಾ ಘಟಕಗಳಿಗೆ ಚಾಲನೆ

ಮಂಗಳೂರು: ಜಾಗತಿಕ ತಾಪಮಾನ ಏರಿಕೆಯಂತೆ ಇ-ತ್ಯಾಜ್ಯವೂ ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇ-ತ್ಯಾಜ್ಯವನ್ನು ಆದ್ಯತೆಯ ಮೇರೆಗೆ ಸಂಗ್ರಹ ಮಾಡಬೇಕು. ಇದು ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಇಲೆಕ್ಟಾನಿಕ್ ತ್ಯಾಜ್ಯದ ನಿರ್ವಹಣೆ ಭವಿಷ್ಯದ ಸವಾಲಾಗಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ರಮಾನಾಥ ರೈ ಹೇಳಿದರು.

MCC holds workshop on e-waste management, places kiosk bins in three spots in Mangaluru city-1 ಇಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸುರತ್ಕಲ್‌ನ ಎನ್ಐಟಿಕೆ ಹಾಗೂ ಬೆಸೆಂಟ್ ಸಂಜೆ ಕಾಲೇಜಿನ ಆಶ್ರಯದಲ್ಲಿ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಇ-ತ್ಯಾಜ್ಯ ಸಂಗ್ರಹ ಘಟಕಗಳ ಉದ್ಘಾಟನೆ ನೆರವೇರಿಸಿ ಬಳಿಕ ಪಾಲಿಕೆಯ ಸಭಾಂಗಣದಲ್ಲಿ ಇ-ತ್ಯಾಜ್ಯ ನಿರ್ವಹಣೆಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಪ್ರಸ್ತುತ ಮಳೆ ಬೀಳುವ ಪ್ರಮಾಣ ಕಡಿಮೆಯಾಗಲು ಪರಿಸರ ಮಾಲಿನ್ಯವೂ ಕಾರಣ. ಒಂದು ಜಿಲ್ಲೆಗೆ ಮೋಡ ಬಿತ್ತನೆಗೆ ಸರ್ಕಾರಕ್ಕೆ 90 ಕೋಟಿ ಬೇಕು. ಘನತ್ಯಾಜ್ಯ ನಿರ್ವಹಣೆಯಲ್ಲಿ ರಾಜ್ಯಕ್ಕೆ ಏಳನೇ ಸ್ಥಾನದಲ್ಲಿದೆ. ವಿಲೇವಾರಿ ಮಾಡುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮರುಬಳಕೆ ಮಾಡುವತ್ತ ಗಮನಹರಿಸುವುದು ಅಷ್ಟೇ ಮುಖ್ಯ ಎಂದು ಹೇಳಿದರು.

ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ, ಉತ್ತರ ಶಾಸಕ ಮೊಯ್ದಿನ್ ಬಾವಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್,  ಎನ್ಐಟಿಕೆ ನಿರ್ದೇಶಕ ಲೋಕೇಶ್, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ್ ಪುರಾಣಿಕ್, ಪಾಲಿಕೆ ಆಯುಕ್ತ ಅಬ್ದುಲ್ ನಝೀರ್ ಇದ್ದರು.

See also  ಸಿದ್ಧರಾಮಯ್ಯ ಸಮಾಜವಾದಿಯಲ್ಲ ಮಜಾವಾದಿ: ಪ್ರಹ್ಲಾದ್ ಜೋಷಿ ಹೇಳಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು