News Kannada
Saturday, September 24 2022

ಕರಾವಳಿ

ಶಾಲಾ-ಖಾಸಗಿ ವಾಹನಗಳ ತಪಾಸಣಾ ಕಾರ್ಯ - 1 min read

Photo Credit :

ಶಾಲಾ-ಖಾಸಗಿ ವಾಹನಗಳ ತಪಾಸಣಾ ಕಾರ್ಯ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ವತಿಯಿಂದ ಬಂಟ್ವಾಳ ತಾಲೂಕಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಶಾಲಾ ಹಾಗೂ ಖಾಸಗಿ ವಾಹನಗಳ ತಪಾಸಣಾ ಕಾರ್ಯ ಇಲ್ಲಿನ ಮೊಡಂಕಾಪು ಇನ್ಫೆಂಟ್  ಜೀಸಸ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆಯಿತು.

ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಾಗಿಸುವ ವಾಹನಗಳ ಚಾಲಕರು ಅತೀ ಜಾಗೂರುಕತೆಯಿಂದ ತಮ್ಮ ವಾಹನ ಚಲಾಯಿಸಬೇಕು. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುವ ಹಾಗೂ ಬರುವ ಸಂದರ್ಭದಲ್ಲಿ ಅವಘಡಗಳು ಸಂಭವಿಸುವ ಅಪಾಯ ಹೆಚ್ಚಿರುವುದರಿಂದ ವಾಹನ ಚಾಲಕರ ಮೇಲೆ ಜವಾಬ್ದಾರಿ ಹೆಚ್ಚಿದೆ. ಚಾಲನೆಯಲ್ಲಿ ಪೈಪೋಟಿ, ಅವಸರ ಮಾಡದೇ ವೇಗ ಮಿತಿಯಲ್ಲಿ ವಾಹನ ಓಡಿಸಬೇಕು ಎಂದು ಹೇಳಿದರು.
 
ಶಾಲಾ ಮಕ್ಕಳನ್ನು ಕರೆದೊಯ್ಯುವ ಓಮ್ನಿ, ಆಟೋ ರಿಕ್ಷಾ ಮತ್ತು ಮ್ಯಾಕ್ಸಿ ಕ್ಯಾಬ್ ಗಳ ಮುಂದಿನ ಹಾಗೂ ಹಿಂದಿನ ಗಾಜುಗಳಿಗೆ ಅಂಟಿಸಿರುವ ಸ್ಟಿಕರ್ ಗಳನ್ನು ಕಡ್ಡಾಯವಾಗಿ ತೆಗೆಯಬೇಕು. ಎಲ್ಲ ವಾಹನಗಳಲ್ಲಿ ಚಾಲಕರಿಗೆ ಹಾಗೂ ಮಕ್ಕಳಿಗೆ ಸೀಟ್ ಬೆಲ್ಟ್ ಧರಿಸುವ ವ್ಯವಸ್ಥೆ ಮಾಡಬೇಕು. ವಾಹನ ತಿರುವು ಪಡೆಯುವ ಸಂದರ್ಭದಲ್ಲಿ ಇಂಡಿಕೇಟರ್ ಹಾಕುವುದರೊಂದಿಗೆ ಹಾಂಡ್ ಸಿಗ್ನಲ್ ಗಳನ್ನು ನೀಡಬೇಕು. ಓಮ್ನಿ ಕಾರು ಮತ್ತು ರಿಕ್ಷಾದ ಒಳ ಭಾಗದಲ್ಲಿ ಗಾಜಿಗೆ ಅಳವಡಿಸಿರುವ ಪರದೆಗಳನ್ನು ತೆಗೆಯಬೇಕು. ಎಲ್ಲ ವಾಹನಗಳ ಚಾಲಕರು ಚಾಲನಾ ಪರವಾನಿಗೆಯೊಂದಿಗೆ ಕಡ್ಡಾಯವಾಗಿ ಬ್ಯಾಜ್ ಹೊಂದಿರಬೇಕು. 15 ವರ್ಷದ ಹಳೆ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಎಲ್ಲ ವಾಹನಗಳ ಚಾಲಕರು ಇನ್ಸೂರೆನ್ಸ್ ಮಾಡಿಸಬೇಕು. ಇನ್ಸೂರೆನ್ಸ್ ಸಹಿತಿ ವಾಹನಗಳ ಎಲ್ಲ ದಾಖಲೆ ಪತ್ರಗಳನ್ನು ಕ್ರಮ ಬದ್ಧವಾಗಿರಬೇಕು.

ಯಾವುದೇ ಕಾರಣಕ್ಕೂ 40 ಕಿಲೋ ಮೀಟರ್ ಗಿಂತ ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಓಡಿಸಬಾರದು. ವಾಹನಗಳ ಟಯರ್ ಗಳು ಸವೆದಾಗ ಹೊಸ ಟಯರ್ ಹಾಕಿ. ಯಾವುದೇ ಕಾರಣಕ್ಕೂ ತುಂಬಾ ಹಳೆ ಟಯರ್ ಗಳನ್ನು ಬಳಸಬೇಡಿ. ದಿನನಿತ್ಯ ಬೆಳಗ್ಗೆ ವಾಹನವನ್ನು ಓಡಿಸುವ ಮುನ್ನ ಇಡೀ ವಾಹನವನ್ನೊಮ್ಮೆ ಸಂಪೂರ್ಣವಾಗಿ ತಪಾಸಣೆ ಮಾಡಿ ಎಂದು ಅವರು ಶಾಲಾ ಹಾಗೂ ಖಾಸಗಿ ವಾಹನಗಳ ಚಾಲಕ, ಮಾಲಕರಿಗೆ ಸಲಹೆ ನೀಡಿದರು.

ವೇದಿಕೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ, ಗ್ರಾಮಾಂತರ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಗೌಡ, ಟ್ರಾಫಿಕ್ ಠಾಣೆ ಎಸ್ಸೈ ರತನ್ ಕುಮಾರ್, ಹಿರಿಯ ಮೋಟರ್ ವಾಹನ ನಿರೀಕ್ಷಕ ಜ್ವಾಯಿ, ಅಶ್ವಿನ್, ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ರವಿಕುಮಾರ್ ಉಪಸ್ಥಿತರಿದ್ದರು.

See also  ಲೋಕಸಭೆ ಚುನಾವಣೆ: ಗಡಿಪ್ರದೇಶದಲ್ಲಿ ಕಣ್ಗಾವಲು, ಚುರುಕಿನ ತಪಾಸಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು