News Kannada
Monday, October 03 2022

ಕರಾವಳಿ

ಉದ್ಯಮಿಯ ಪುತ್ರಿಯನ್ನು ಅಪಹರಿಸಿದ ಆರೋಪಿಯ ಲುಕ್ ಔಟ್ ಬಿಡುಗಡೆ - 1 min read

Photo Credit :

 ಉದ್ಯಮಿಯ ಪುತ್ರಿಯನ್ನು ಅಪಹರಿಸಿದ ಆರೋಪಿಯ ಲುಕ್ ಔಟ್ ಬಿಡುಗಡೆ

ಕಾಸರಗೋಡು: ಉದ್ಯಮಿಯ ಪುತ್ರಿಯನ್ನು ಅಪಹರಿಸಿ ಕಾಸರಗೋಡಿನತ್ತ ಪರಾರಿಯಾಗಿರುವ ಕಾಸರಗೋಡು ನಿವಾಸಿಯೋರ್ವನ ಪತ್ತೆಗೆ ಕ್ರೈಮ್ ಬ್ರಾಂಚ್ ಆರೋಪಿಯ ಲುಕ್‌ಔಟ್ ಬಿಡುಗಡೆಗೊಳಿಸಿದೆ. ನೀಲೇಶ್ವರ ನೆಲ್ಲಿಯಡ್ಕದ ಚೂರಿಕ್ಕಾಡನ್ ಸಜೀಶ್‌ಚಂದ್ರನ್ ಎಂಬಾತನ ಲುಕ್‌ಔಟ್ ನೋಟೀಸ್ ಬಿಡುಗಡೆ ಮಾಡಲಾಗಿದೆ.

ನೋಟೀಸ್ ರೈಲು ನಿಲ್ದಾಣ, ಬಸ್ ನಿಲ್ದಾಣಗಳ ಸಹಿತ ಜನಸಂದಣಿಯುಳ್ಳ ಸ್ಥಳಗಳಲ್ಲಿ ಪ್ರದರ್ಶಿಸಲಾಗಿದೆ. ಆಗಸ್ಟ್ 13ರಂದು ತೃಶೂರು ಪೇರಮಂಗಲ 16 ವರ್ಷದ ಬಾಲಕಿಯನ್ನು ಸಜೀಶ್ ಚಂದ್ರನ್ ಅಪಹರಿಸಿದ್ದನು. ಈ ಬಗ್ಗೆ ಬಾಲಕಿಯ ಮನೆಯವರು ಹುಡುಕಾಟ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆದ್ದರಿಂದ ಪೇರ ಮಂಗಲಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಸೈಬರ್‌ಸೆಲ್‌ನ ನೆರವಿನೊಂದಿಗೆ ನಡೆಸಿದ ತನಿಖೆಯಲ್ಲಿ ಸಜೀಶ್ ಚಂದ್ರನ್ ಬಾಲಕಿಯೊಂದಿಗೆ ಕಾಸರಗೋಡಿಗೆ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಬಾಲಕಿ ಹಾಗೂ ಸಜೀಶ್‌ಚಂದ್ರನ್ ಕರ್ನಾಟಕಕ್ಕೆ ಪಲಾಯನಗೈದ್ದಿರುವುದಾಗಿ  ಮಾಹಿತಿ ಲಭಿಸಿದೆ.

ಪೇರ ಮಂಗಲಂ ಪೊಲೀಸರು ಕರ್ನಾಟಕದ ವಿವಿಧ ಸ್ಥಳಗಳಿಗೆ ತಲುಪಿ ತನಿಖೆ ನಡೆಸಿದ್ದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಕರ್ನಾಟಕ ಪೊಲೀಸರ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಸಜೀಶ್ ಚಂದ್ರನ್ ಮತ್ತೆ ಕಾಸರಗೋಡಿನತ್ತ ತೆರಳಿರುವ ಬಗ್ಗೆ ಸೂಚನೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೇರ ಮಂಗಲಂ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿರುವ ತಂಡ  ಕಾಸರಗೋಡಿಗೆ ತಲುಪಿದೆ.

ಕರ್ನಾಟಕ ಹಾಗೂ ತಮಿಳ್ನಾಡಿನ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಮೆಡಿಕಲ್ ಸೀಟ್ ದೊರಕಿಸುವ ಭರವಸೆಯೊಡ್ಡಿ ಹಲವರಿಂದ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಲ್ಲಿ ಈತ ಆರೋಪಿ ಎನ್ನಲಾಗಿದೆ. . ಸಜೀಶ್‌ಚಂದ್ರನ್ ವಿರುದ್ಧ ಕಾಸರಗೋಡು, ಕಾಞಂಗಾಡ್, ತೃಶೂರು, ತಿರುವನಂತಪುರ, ಪತ್ತನಂತಿಟ್ಟ  ಮೊದಲಾದೆಡೆ  ಕೇಸು ದಾಖಲಿಸಲಾಗಿದೆ. ಮೆಡಿಕಲ್ ಸೀಟ್ ದೊರಕಿಸಿ ಕೊಡುವುದಾಗಿ ಭರವಸೆಯೊಡ್ಡಿ ಈತ ಹಲವರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾನೆಂಬುದಾಗಿ ಕೇಸು ದಾಖಲಿಸಲಾಗಿದೆ. ವಂಚನೆಗೆ ಸಂಬಂಧಿಸಿ ಸಜೀಶ್ ಚಂದ್ರನ್ ವಿರುದ್ಧ ತನಿಖೆ ನಡೆಸಿದ್ದರೂ ಗಣ್ಯ ವ್ಯಕ್ತಿಗಳ ಜೊತೆ  ನಂಟು ಹೊಂದಿದ್ದಾನೆ ಎನ್ನಲಾಗಿದ್ದು, ಇದರಿಂದಲೇ ಆತನನ್ನು ಬಂಧಿಸಲು ಸಾಧ್ಯವಾಗಲಿಲ್ಲ.

ಸತೀಶ್‌ಚಂದ್ರನ್ ತೃಶೂರಿನ ವ್ಯಾಪಾರ ಸಂಸ್ಥೆಯಲ್ಲಿರುವಾಗ ಬಾಲಕಿಯ ಮನೆಯವರ ಪರಿಚಯ ಮಾಡಿಕೊಂಡಿದ್ದಾನೆ. ಬಾಲಕಿಯ ತಂದೆ ಕಾರು ಖರೀದಿಸಲು ತಲುಪಿದಾಗ ಸಜೀಶ್ ಚಂದ್ರನ್ ಅವರ ಪರಿಚಯ ಸಂಪಾದಿಸಿದ್ದಾನೆ. ಸಜೀಶ್ ಚಂದ್ರನ್ ಬಳಿಕ ಬಾಲಕಿಯ ತಂದೆ ಹಾಗೂ ಕುಟುಂಬದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದನು.  ಶ್ರೀಮಂತ ಜೀವನ ಸಾಗಿಸತೊಡಗಿದ ಆತ ಭಾರೀ ಮೌಲ್ಯದ ಕಾರುಗಳು,   ಹೆಲಿಕಾಫ್ಟರ್‌ಗಳನ್ನು ಬಾಡಿಗೆಗೆ ಪಡೆದು ದೇಶದಾದ್ಯಂತ ಅಲೆದಾಡ ತೊಡಗಿದ್ದನೆಂದು ಪೊಲೀಸರು  ಈತನ  ಹಲವು ವಂಚನೆ ಪ್ರಕರಣದಲ್ಲಿ  ಶಾಮೀಲಾಗಿದ್ದು , ಇದೀಗ ಉದ್ಯಮಿಯೋರ್ವರ ಪುತ್ರಿಯನ್ನು ಅಪಹರಿಸಿ  ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

See also  ಉಚ್ಛಾಟಿಸಲ್ಪಟ್ಟಿರುವ ಕಲಾವಿದರ ಮರಳಿ ಸೇರ್ಪಡೆಗೆ ಬಿರ್ವೆರ್ ಕುಡ್ಲ ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು