News Kannada
Saturday, September 24 2022

ಕರಾವಳಿ

ಅತ್ತೂರು ಚರ್ಚ್ ರಸ್ತೆ ಅಭಿವೃದ್ಧಿ ಪಡಿಸುವಂತೆ ಶಾಸಕ ಸುನಿಲ್ ಕುಮಾರ್ ಗೆ ಮನವಿ - 1 min read

Photo Credit :

ಅತ್ತೂರು ಚರ್ಚ್ ರಸ್ತೆ ಅಭಿವೃದ್ಧಿ ಪಡಿಸುವಂತೆ ಶಾಸಕ ಸುನಿಲ್ ಕುಮಾರ್ ಗೆ ಮನವಿ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಕಿರಿಯ ದೇವಾಲಯಕ್ಕೆ ಪ್ರತಿದಿನ ಅಸಂಖ್ಯಾತ ಭಕ್ತಾದಿಗಳು ದೇಶದ ನಾನಾ ಭಾಗಗಳಿಂದ ಅಗಮಿಸಿದ ದೇವರ ಕೃಪೆಗೆ ಪಾತ್ರರಾಗುತ್ತಿದ್ದು, ಪುಣ್ಯಕ್ಷೇತ್ರಕ್ಕೆ ಅಗಮಿಸುವ ಭಕ್ತಾದಿಗಳ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆಯೂ ತೀರಾ ದುಸ್ಥಿತಿಗೆ ತಲುಪಿದ್ದು ಅದನ್ನು ತ್ವರಿತಗತಿಯಲ್ಲಿ ದುರಸ್ಥಿ ಪಡಿಸುವಂತೆ ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ಧರ್ಮಗುರು ಫಾ.ಜಾರ್ಜ್ ಡಿಸೋಜಾ ನೇತೃತ್ವದಲ್ಲಿ ಕಾರ್ಕಳ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಸ್ತುತ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಅದನ್ನು ವಿಸ್ತರಿಸಿ ಸರ್ವ ಋತು ಹಾಗೂ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವಂತೆ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮನವಿಗೆ ಸ್ವಂದಿಸಿದ ಶಾಸಕ ವಿ.ಸುನೀಲ್ ಕುಮಾರ್ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶೀಘ್ರ ಅನುದಾನ ಬಿಡುಗಡೆಗೆ ಪ್ರಯತ್ನಿಸುವ ಭರವಸೆ ನೀಡಿದರು.

ಜಾನ್ ಡಿಸಿಲ್ವ, ಜಾನ್ ನೊರೊನ್ಹಾ, ರಿಚಾರ್ಡ್ ಪಿಂಟೋ, ಲಾರೆನ್ಸ್ ನೊರೋನ್ನಾ, ರೋನಾಲ್ಡ್ ನೊರೋನ್ನಾ,ಜೋಸೆಫ್ ಡಿಸೋಜಾ, ಡಾಲ್ಫಿ, ಎಪಿಎಂಸಿ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ ಅತ್ತೂರು, ನಿಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರ ಹೆಗ್ಡೆ, ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ನವೀನ್ ನಾಯಕ್, ಗ್ರಾಮ ಪಂಚಾಯತ್ ಸದಸ್ಯ ನಿತಿನ್ ಸಾಲ್ಯಾನ್ ಮತ್ತಿತರು ಉಪಸ್ಥಿತರಿದ್ದರು.

See also  ಅಪಾಯದ ಸ್ಥಿತಿಯಲ್ಲಿರುವ ಚಿಬಿದ್ರೆ ಗ್ರಾಮದ ಸಾರ್ವಜನಿಕ ಕೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು