News Kannada
Sunday, September 25 2022

ಕರಾವಳಿ

ಸುನಾಮಿ ಸಂಭವ: ಉಳ್ಳಾಲದಲ್ಲಿ ಮುಂಜಾಗ್ರತಾ ಕ್ರಮ - 1 min read

Photo Credit :

ಸುನಾಮಿ ಸಂಭವ: ಉಳ್ಳಾಲದಲ್ಲಿ ಮುಂಜಾಗ್ರತಾ ಕ್ರಮ

ಉಳ್ಳಾಲ: ಸುನಾಮಿ ಸಾಧ್ಯತೆ ಅನ್ನುವ ಮಾಹಿತಿ, ಆತಂಕದಿಂದ  ಓಡಿದ ಸಮುದ್ರ ತೀರದ ಮನೆಮಂದಿ, ನಡುವೆ ಗಂಭೀರ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಪತ್ತು ನಿರ್ವಹಣಾ ಇಲಾಖೆ ಸಿಬ್ಬಂದಿ. ಅಕ್ಷರಶ: ಸೋಮೇಶ್ವರದ ಉಚ್ಚಿಲ ಬಟ್ಟಂಪಾಡಿಯ ಜನತೆ ಎರಡು ಗಂಟೆಯ ಪ್ರಹಸನದಲ್ಲಿ ಬೆಚ್ಚಿಬಿದ್ದಿದ್ದರು.

ಹೈದರಾಬಾದಿನ ಇನ್ಕಾಸ್ ವಿಪತ್ತು ಮಾಹಿತಿ ಸಂಸ್ಥೆ ದೇಶಾದ್ಯಂತ ಏಕಕಾಲಕ್ಕೆ ಸುನಾಮಿ ಬರುವ ಎಚ್ಚರಿಕೆಯನ್ನು ನೀಡಿತ್ತು.  ಕಾರ್ಯಪ್ರವೃತ್ತರಾದ ಜಿಲ್ಲಾಡಳಿತ  18 ಇಲಾಖೆಗಳು  ಸಮುದ್ರ ತೀರಗಳಲ್ಲಿ  ಕಾರ್ಯಾಚರಿಸಲು ಆದೇಶ ಹೊರಡಿಸುತ್ತದೆ. ಇದು ಗುರುವಾರದಂದು ಉಚ್ಚಿಲ ಬೋವಿ ಶಾಲೆಯಲ್ಲಿ  ಕೇಂದ್ರ ಸರಕಾರದ ಆದೇಶಾನುಸಾರ ದೇಶದ ಐದು ಭಾಗಗಳಲ್ಲಿ, ರಾಜ್ಯದ  ಮೂರು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಹಮ್ಮಿಕೊಂಡಿದ್ದ ಸುನಾಮಿ ಸಂಭವಿಸುವ ಮುಂಜಾಗ್ರತಾ ಕ್ರಮವಾಗಿ ನಡೆದ ಅಣುಕು ಪ್ರದರ್ಶನದ ಚಿತ್ರಣವಾಗಿತ್ತು.

ವಿಪತ್ತು ಕೇಂದ್ರ ಸ್ಥಾನದಲ್ಲಿ 8.8 ರಿಕ್ಟರ್ ಮಾಪಕದಲ್ಲಿ ಸಮುದ್ರ ತೀರಗಳಲ್ಲಿ ಕಂಪನ ಉಂಟಾಗಿದೆ ಅನ್ನುವ  ಎಚ್ಚರಿಕೆಯೂ ಗ್ರಾಮದಲ್ಲಿ ಹರಡಿತ್ತು. ಇದು ಕೆಲಕಾಲ ನೈಜವಾಗಿಯೂ ಗ್ರಾಮದ ಜನರನ್ನು ಭೀತಿಯನ್ನು ಉಂಟು ಮಾಡಿತ್ತು.

ಕರಾವಳಿಯ ಮೂರು ಜಿಲ್ಲೆಗಳು: 18 ಇಲಾಖೆಗಳ ಜಂಟಿ ಸಹಯೋಗದೊಂದಿಗೆ ಮೂರು ಕಡೆಗಳಲ್ಲಿ ಅಣುಕು ಪ್ರದರ್ಶನವನ್ನು ನಡೆಸಲಾಗುತ್ತಿದೆ. ರಾಜ್ಯದ ಮೂರು ಜಿಲ್ಲೆಗಳಾದ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಅಣುಕು ಪ್ರದರ್ಶನವನ್ನು ನಡೆಸಲಾಯಿತು. ಜಿಲ್ಲೆಯಲ್ಲಿ ಸುನಾಮಿ ಬಂದರೆ ಜಿಲ್ಲಾಡಳಿತ ಯಾವ ರೀತಿಯಲ್ಲಿ ಸನ್ನದ್ಧರಾಗಿ ಕಾರ್ಯಪ್ರವೃತ್ತಿ ನಡೆಸಬೇಕೆಂಬ ಪ್ರಾಯೋಗಿಕ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಏನೆಲ್ಲಾ ನಡೆಯಿತು:  ಸೋಮೇಶ್ವರದ ಬಟ್ಟಂಪ್ಪಾಡಿಯಲ್ಲಿ ಸುನಾಮಿ ಭೀತಿಯ ಮಾಹಿತಿಯನ್ನು ಆಧರಿಸಿ ಗ್ರಾಮದ ಜನರನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಲು ಸ್ಥಳೀಯ ಪೊಲೀಸ್, ಕೋಸ್ಟಲ್ ಸೆಕ್ಯೂರಿಟಿ, ಅಗ್ನಿಶಾಮಕದಳ, ಹೋಮ್ ಗಾರ್ಡ್, ಗ್ರಾಮ ಪಂಚಾಯತ್, ಕಂದಾಯ ಇಲಾಖೆ  ಸಿಬ್ಬಂದಿ ಜತೆಯಾಗಿ ತೆರಳಿದರು.  ಅವರ ಮನೆಗಳಿಂದ ಜನರನ್ನು ಬಸ್ಸುಗಳ  ಮೂಲಕ  ಬೋವಿ ಶಾಲೆಯಲ್ಲಿ ಮಾಡಲಾಗಿದ್ದ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.  ಅಲ್ಲಿ ಗಾಯಾಳುಗಳಂತೆ ವರ್ತಿಸಿದ ಗ್ರಾಮಸ್ಥರಿಗೆ ತುರ್ತು ಚಿಕಿತ್ಸೆಯನ್ನು ನೀಡುವ ವಿಧಾನವನ್ನು ಪ್ರದರ್ಶಿಸಲಾಯಿತು. ಆಂಬ್ಯುಲೆನ್ಸ್ ಗಳ ಮೂಲಕ ಆಸ್ಪತ್ರೆ ಸೇರಿಸುವ ಅಣುಕನ್ನು ಸಾರ್ವಜನಿಕರಿಗೆ ತೋರಿಸಲಾಯಿತು.

ಸುನಾಮಿ ಭೀಕರತೆ ಯಾವ ಕ್ಷಣದಲ್ಲೂ ಅಪ್ಪಳಿಸಬಹುದೆಂದು ತಿಳಿದು ಇಲಾಖೆಯವರೂ ಸುರಕ್ಷಿತ ಸ್ಥಳವನ್ನು ಗುರುತಿಸಿ  ಕಮಾಂಡ್ ಪೋಸ್ಟ್ ಎಂದು ಒಂದು  ಕೇಂದ್ರ ಸ್ಥಾನವನ್ನು ನಿಗದಿಪಡಿಸಲಾಗುತ್ತದೆ. ಇಲ್ಲಿ ಅಪಾರ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು  ಜವಾಬ್ದಾರಿ ಹೊಂದಿರುತ್ತಾರೆ. ಎಲ್ಲಿ ಏನೇ ಅಪಘಾತ, ಅನಾಹುತ ನಡೆದರೂ ಇಲಾಖೆಯವರ ಯಾವುದೇ ರೀತಿಯಾದ ತೀರ್ಮಾನವನ್ನು ತೆಗೆದುಕೊಳ್ಳುವ ಜವಾಬ್ದಾರಿ ಇವರ ಮೇಲಿರುತ್ತದೆ. ಕಳೆದ ಫೆಬ್ರವರಿ ತಿಂಗಳ ಸಮಯದಲ್ಲಿ  ಕೆಮಿಕಲ್  ಹರಿದಾಡುವ  ಬಗ್ಗೆ ಇಂತಹ ಅಣುಕು ಪ್ರದರ್ಶನ ನಡೆದಿತ್ತು.  ಆ ವೇಳೆಗಾಗಲೇ  ಬಹುತೇಕ ಇಲಾಖೆ ಸಿಬ್ಬಂದಿ  ಶೇ.20 ರಷ್ಟು ಮಾತ್ರ ತುರ್ತು ನಿರ್ವಹಣೆಯನ್ನು ನಡೆಸಲು ಬದ್ಧರಾಗಿದ್ದರು. ಇಂದು ಸುನಾಮಿ  ಜಾಗೃತಿಗಾಗಿ ನಡೆದ ಕಾರ್ಯಾಚರಣೆಯಲ್ಲಿ  ಶೇ.70 ರಷ್ಟು ತರಬೇತಿಯನ್ನು ಪೂರ್ಣಗೊಳಿಸಿರುವ ತೃಪ್ತಿಯಿದೆ.   
ಪ್ರದೀಪ್ ಕುಮಾರ್
ಅಧಿಕಾರಿಗಳು
 
ದೇಶದಲ್ಲಿ ಎರಡು ದಿನಗಳ ಕಾಲ ಐವೋ ವೇವ್ 2016 ಎಂಬ ಅಣುಕು ಪ್ರದರ್ಶನವನ್ನು ನಡೆಸಲಾಗುತ್ತಿದ್ದು, ಎಲ್ಲಾ ಜಿಲ್ಲಾಡಳಿತ ಮುಖ್ಯವಾಗಿ ಕಂದಾಯ ಇಲಾಖೆಯ ಮಾಹಿತಿಯ ಆಧಾರದಲ್ಲಿ ಈ ಅಣುಕು ಪ್ರದರ್ಶನವನ್ನು ನಡೆಸಲಾಗುತ್ತಿದೆ. ಮೊದಲಿಗೆ ಸ್ಥಳೀಯ ಮೀನುಗಾರರಿಗೆ ಈ ಮಾಹಿತಿ ನೀಡಿ ನಂತರ ಪ್ರತಿಯೊಂದು ಸಂಬಂಧಪಟ್ಟ ಇಲಾಖೆಗೆ ಮಾಹಿತಿಯನ್ನು ನೀಡಲಾಗುತ್ತದೆ.  ಇಂದು ನಡೆದ ಅಣುಕು ಕಾರ್ಯಾಚರಣೆಯಲ್ಲಿ ಇಲಾಖೆಯ ಜೊತೆ ಸ್ಥಳೀಯ ಮೀನುಗಾರರು ಕೈಜೋಡಿಸುವ ಕೆಲಸ ಮಾಡಿದ್ದಾರೆ. ಈ ಅಣುಕು ಪ್ರದರ್ಶನದ ಬಗ್ಗೆ ಹಿಂದಿನ ದಿನವೇ ಸ್ಥಳೀಯ ಮೀನುಗಾರರು ಹಾಗೂ ಗ್ರಾಮದ ಜನರನ್ನು ಸೇರಿಸಿ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಸುನಾಮಿ ಬಂದ ಕ್ಷಣದಲ್ಲಿ ಯಾವ ರೀತಿಯಾದ ಎಚ್ಚರಿಕೆಯನ್ನು ವಹಿಸಬೇಕೆಂದು ತಿಳಿಸಲಾಗಿತ್ತು. ಆದ್ದರಿಂದ ಜಿಲ್ಲಾಡಳಿತದ ಜೊತೆ ಸ್ಥಳೀಯರು ಅಣುಕು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.
ಡಾ.ಡಿ.ಆರ್.ಅಶೋಕ್
ಸಹಾಯಕ ಆಯುಕ್ತರು

See also  ವ್ಯಾಪಾರಿಯನ್ನು ಅಪಹರಿಸಿ ದರೋಡೆ: ಓರ್ವನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು