News Kannada
Wednesday, September 28 2022

ಕರಾವಳಿ

ಗಮನ ಸೆಳೆದ ತೆಂಗಿನ ಗರಿಗಳ ಅಲಂಕಾರಿಕ ವಸ್ತುಗಳು - 1 min read

Photo Credit :

ಗಮನ ಸೆಳೆದ ತೆಂಗಿನ ಗರಿಗಳ ಅಲಂಕಾರಿಕ ವಸ್ತುಗಳು

ಕಾಸರಗೋಡು: ತೆಂಗಿನ ಗರಿಯಿಂದ ಹಿಡಿದು ಮಡಲಿನ ತನಕದ ಬಹುಪಯೋಗದ ಕುರಿತು ಶತಮಾನೋತ್ಸವದ ಸಂಭ್ರಮದಲ್ಲಿರುವ ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ( ಸಿಪಿಸಿಆರ್ ಐ) ನಲ್ಲಿ ನಡೆದ ವಿಶೇಷ ಕಾರ್ಯಾಗಾರದಲ್ಲಿ ತೆಂಗಿನ ಗರಿಗಳಿಂದ ಬಗೆ ಬಗೆಯ ಆಲಂಕಾರಿಕ ವಸ್ತುಗಳ ತಯಾರಿ ಗಮನಸೆಳೆಯಿತು.

ಪ್ಲಾಸ್ಟಿಕ್ ಉತ್ಪನ್ನಗಳ ಆರ್ಭಟದಿಂದ ಇಂದು ತುಳುನಾಡಿನ ತೆಂಗಿನ ಉತ್ಪನ್ನಗಳಿ೦ದ ದೂರ ಸರಿಯುವಂತಾಗಿದೆ.  ಇದರಿಂದ ಬಹುಪಯೋಗಿ ತೆಂಗಿನ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತೆಂಗಿನ ಗರಿಗಳಿಂದ ಅಲಂಕಾರಿಕಾ ವಸ್ತುಗಳ ಮೂಲಕ ಹೊಸ ತಲೆಮಾರಿಗೆ ಪರಿಚಯ ಮಾಡಲಾಯಿತು. ಗ್ರಾಮೀಣ ಜೀವನದ ನಾಡಿ ಬಡಿತವಾದ ತೆಂಗಿನ ಕರಕುಶಲ ವಸ್ತುಗಳ ತಯಾರಿ ಬಗ್ಗೆ  ವಿದ್ಯಾರ್ಥಿಗಳಲ್ಲಿ, ಹೊಸ ತಲೆಮಾರಿನ ಯುವಕರಲ್ಲಿ ಆಸಕ್ತಿ ಬೆಳೆಸುವ ಕಲೆಗಾರನ ಕೈಯಲ್ಲಿ ಹಸಿರುಗಳಿಂದ ಮೂಡಿ ಬರುವ ವಿವಿಧ ಆಕೃತಿಗಳ ಪರಿಚಯ ಇಲ್ಲಿ ನಡೆಯಿತು.

ತೆಂಗಿನ ಗರಿಗಳಿಂದ ವಿವಾಹ ಮಂಟಪ, ಬೀಸಣಿಕೆ, ಟೊಪ್ಪಿ, ಆಟಿಕೆಗಳು ಸೇರಿದಂತೆ ಹಲವು ತರದ ಅಲಂಕಾರಿಕಾ ವಸ್ತುಗಳು ಈಗ ದೂರವಾಗಿ ಪರಿಸರಕ್ಕೆ ಹಾನಿಯಾಗುವಂತಹ ಪ್ಲಾಸ್ಟಿಕ್ ಭರಾಟೆಯಲ್ಲಿ ತುಂಬಿಕೊಂಡಿದೆ. ಇದು ಮಾತ್ರವಲ್ಲ ವಿವಿಧ ತರದ ಹೂ ಗಳು ಸೇರಿದಂತೆ ಅಲಂಕಾರಕ್ಕೆ ತೆಂಗಿನ ಗರಿಗಳನ್ನೇ ಬಳಸುತ್ತಿದ್ದರು. ಕಾಸರಗೋಡು, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯ ಜಿಲ್ಲೆಗಳಲ್ಲಿ  ಆಚಾರ ಅನುಷ್ಠಾನ, ದೈವಾರಾಧನೆಯಲ್ಲಿ  ಭೂತಾರಾಧನೆ, ಒತ್ತೆಕೋಲ, ತಂಬಿಲ ಇನ್ನಿತರ ಆಚರಣೆ ಸಂದರ್ಭದಲ್ಲಿ ತೆಂಗಿನ ಗರಿಗೆ ಪ್ರಾಶಸ್ತ್ಯ ನೀಡಲಾಗುತ್ತಿತ್ತು.

ಆದರೆ ಸಿಪಿಸಿಆರ್ ಐ ಗತಕಾಲದ ಮರು ಆವಿಷ್ಕಾರಕ್ಕೆ ಮುಂದಾಗುವ  ಮೂಲಕ ಯುವ ಪೀಳಿಗೆಗೆ ತೆಂಗಿನ ಬಹುಪಯೋಗದ ಕುರಿತು ಸಂದೇಶ ನೀಡಿತು. ಎರಡು ದಶಕದ ಹಿಂದಿನ ತನಕ ಮನೆ ಮಾಡು ಸೇರಿದಂತೆ  ತೆಂಗಿನ ಉತ್ಪನ್ನಗಳು ಜನರ ಬದುಕಿನ ಅಂಗವಾಗಿತ್ತು.  ಈಗ ಹಂಚು, ಟೆರೇಸ್ ಮನೆಗಳು ತುಂಬಿಕೊಂಡಿದೆ. ಮಡಲು ದೂರವಾಗುತ್ತಿದೆ. ಮುಟ್ಟಾಳೆ ಬದಲು ಪ್ಲಾಸ್ಟಿಕ್  ಟೊಪ್ಪಿ, ಪ್ಲಾಸ್ಟಿಕ್ ಗೊರಬು, ಹುಲ್ಲು ತರಲು ಪ್ಲಾಸ್ಟಿಕ್  ಗೋಣಿ ಚೀಲ  ಈಗೆ ಪ್ರತಿಯೊಂದು ಪ್ಲಾಸ್ಟಿಕ್ ಮಾಯವಾಗಿದೆ.

ಈ ನಿಟ್ಟಿನಲ್ಲಿ ಹೊಸ ತಲೆಮಾರಿಗೆ ಸಿಪಿಸಿಆರ್ ಐ ನ ಈ ಕಾರ್ಯಾಗಾರ ಸಾಕಷ್ಟು ತಿಳುವಳಿಕೆಯನ್ನು ನೀಡಿತು. ಹಲವು ರೀತಿಯಲ್ಲಿ ತೆಂಗಿನ ಗರಿಗಳ ಬಳಕೆ ಸಾಧ್ಯವಿದೆ. ಗತಕಾಲದ ಈ ಕರಕುಶಲ ಉತ್ಪನ್ನಗಳಿಗೆ ಮರು  ಜೀವ ಲಭಿಸಲಿದೆ.  ಪ್ಲಾಸ್ಟಿಕ್ ಮಯವಾಗಿರುವ ಈ ದಿನಗಳಲ್ಲಿ ತೆಂಗಿನ ಮತ್ತು ತಾಳೇಗರಿಗಳಿಗೆ ಮರುಜೀವ ಮತ್ತು ಬಹುಪಯೋಗದ ಬಗ್ಗೆ ಹೊಸ ಪೀಳಿಗೆಗೆ ಸಂದೇಶ ನೀಡಿದಂತಾಗಿದೆ.

ವಿಶೇಷ ಕಾರ್ಯಾಗಾರವನ್ನು ಲ್ಲಿ ಚಿತ್ರಕಾರ ಕೆ. ಕೆ ಮಾರಾರ್  ಕಾರ್ಯಾಗಾರವನ್ನು ಉದ್ಘಾಟಿಸಿದರು. ಪ್ಲಾಸ್ಟಿಕ್ ಉತ್ಪನ್ನಗಳ ಆರ್ಭಟದಿಂದ ಇಂದು ತುಳುನಾಡಿನ ತೆಂಗಿನ ಉತ್ಪನ್ನಗಳಿ೦ದ ದೂರ ಸರಿಯುವಂತಾಗಿದೆ.  ಡಾ. ಜಗನ್ನಾಥ , ಡಾ.ಮುರಳೀಧರ, ಜಯರಾಜ್, ತಂಬಾನ್  ಎ. ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು

See also  ಮಾಂಬಾಡಿ ಸುಬ್ರಹ್ಮಣ್ಯ ಭಟ್ ಗೆ ಯಕ್ಷಗಾನ ಅಕಾಡಮಿ ಗೌರವ ಪ್ರಶಸ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು