News Kannada
Saturday, September 24 2022

ಕರಾವಳಿ

ಬಿ.ಸಿ.ರೋಡಿನ ಸರಕಾರಿ ಪದವಿ ಕಾಲೇಜಿನಲ್ಲಿ ಏಕಾಏಕಿ ಬೆಂಕಿ! - 1 min read

Photo Credit :

ಬಿ.ಸಿ.ರೋಡಿನ ಸರಕಾರಿ ಪದವಿ ಕಾಲೇಜಿನಲ್ಲಿ ಏಕಾಏಕಿ ಬೆಂಕಿ!

ಬಂಟ್ವಾಳ: ಬಿ.ಸಿ.ರೋಡಿನ ಸರಕಾರಿ ಪದವಿ ಕಾಲೇಜಿನ ಮೇಲಂತಸ್ತಿನಲ್ಲಿ ಶನಿವಾರ ಬೆಳಿಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ  ಕಪ್ಪು ಹೊಗೆ ಪರಿಸರದಲ್ಲಿ ವ್ಯಾಪಿಸುತ್ತಿದ್ದಂತೆಯೇ ಪಾಠ ಕೇಳುತ್ತಿದ್ದ  ವಿದ್ಯಾರ್ಥಿಗಳು ಘಟನೆಯಿಂದ ಬೆಚ್ಚಿಬಿದ್ದು ಬ್ಯಾಗ್, ಪುಸ್ತಕ ಹಿಡಿದುಕೊಂಡು ತರಗತಿಯಿಂದ ಹೊರ ಓಡಲಾರಂಬಿಸಿದರು.  ಊರಿನ ಮಂದಿಯೂ ಕಾಲೇಜು ಆವರಣದಲ್ಲಿ  ಜಮಾಯಿಸಲಾರಂಭಿಸಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ  ಕಾಲೇಜಿಗೆ ಧಾವಿಸಿ ಬಂದ ಅಗ್ನಶಾಮಕ ದಳದ ಸಿಬ್ಬಂದಿಗಳು ಅರ್ಧ ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದರು!

ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕಾಲೇಜಿನ ಮೇಲ್ ಮಹಡಿಯಲ್ಲಿ ಬೆಂಕಿ ಉರಿಯಲಾರಂಭಿಸಿತ್ತು. ಧಿಢೀರ್ ಬೆಂಕಿ.. ಬೆಂಕಿ ಎನ್ನುವ ಬೊಬ್ಬೆ ಕೇಳುತ್ತಿದ್ದಂತೆಯೇ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಭಯಬೀತರಾಗಿದ್ದರು. ಬೆಂಕಿಯ ಬಗ್ಗೆ ಭೀತಿ ಇರುವ ವಿದ್ಯಾರ್ಥಿಗಳಂತೂ ಅಕ್ಷರಶಃ ಆತಂಕ ಪಟ್ಟಿದ್ದರು.  ಕೆಲ ಉಪನ್ಯಾಸಕರು ಏನು ನಡೆಯುತ್ತಿದೆ ಎಂದು ಅರಿಯದೆ ಮೂಕ ವಿಸ್ಮಿತರಾಗಿದ್ದರು.   ಈ ಬಗ್ಗೆ ಮಾದಲೇ ಸಿದ್ದತೆ ಮಾಡಿಕೊಂಡಿದ್ದ  ಅಗ್ನಿಶಾಮಕದಳದ ವಾಹನ ಧ್ವನಿ ಮೊಳಗಿಸಿಕೊಂಡು ಕಾಲೇಜಿನತ್ತ ಧಾವಿಸಿಸುತ್ತಿರುವುದನ್ನು ಕಂಡು ಊರಿನ ಮಂದಿಯೂ ಗಾಬರಿಗೊಳಗಾಗಿ ಕಾಲೇಜಿನತ್ತ ಬರಲಾರಂಭಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಕಾರ್ಯಚರಣೆ ಆರಂಭಿಸಿ, ಮಹಡಿಗೆ ಏಣಿ ಜೋಡಿಸಿ ನೀರು ಹಾಯಿಸಿ ಬೆಂಕಿ ನಂದಿಸಿದರು. ಇದೆಲ್ಲವೂ ಅಣುಕು ಕಾರ್ಯಚರಣೆ ಎಂದು ಗೊತ್ತಾದಾಗ  ಆತಂಕಗೊಂಡಿದ್ದ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟರು.

ಬಂಟ್ವಾಳದ ಜೇಸಿಐ ಸಂಸ್ಥೆ ಜೇಸಿ ಸಪ್ತಾಹದ ಅಂಗವಾಗಿ ಸರಕ್ಷಾ ದಿನದ ಪ್ರಯುಕ್ತ ಈ ಕಾರ್ಯಕ್ರಮ ಆಯೋಸಿತ್ತು. ಬಂಟ್ವಾಳ ಅಗ್ನಿಶಾಮಕದಳ, ಸರಕಾರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಹಳೇ ವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಸಲಾಯಿತು. ಅಣುಕು ಕಾರ್ಯಚರಣೆಯ ಮೂಲಕ ಅಗ್ನಿ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಲಾಯಿತು.

ಮಾಹಿತಿ ಮತ್ತು ಪ್ರಾತ್ಯಕ್ಷಿಕೆ:
ರಾಷ್ಟ್ರಪ್ರಶಸ್ತಿ ವಿಜೇತ ಅಗ್ನಿಶಾಮಕದ ದಳದ ನಿವೃತ್ತ ಅಧಿಕಾರಿ ಓಬಯ್ಯ ಮೂಲ್ಯ ಅಣುಕು ಕಾರ್ಯಚರಣೆಯ ಬಳಿಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಗ್ನಿ ಆಕಸ್ಮಿಕಗಳು ನಡೆದ ಸಂದರ್ಭದಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು, ಮನೆಯಲ್ಲಿ ಬೆಂಕಿ ಅವಘಡಗಳು ನಡೆಯದಂತೆ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳ ಸಂಶಯವನ್ನು ನಿವಾರಿಸಿದರು. ಬಳಿಕ ಬೆಂಕಿ ಅವಘಡ ನಡೆದಾಗ ಅಗ್ನಿಶಾಮಕದಳದ ಸಿಬ್ಬಂದಿಗಳು ಯಾವ ರೀತಿ ಕಾರ್ಯಚರಣೆ ಮಾಡುತ್ತಾರೆ ಎನ್ನುವ ಬಗ್ಗೆ ಕಾಲೇಜು ಆವರಣದಲ್ಲಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು. ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಬಿ.ಶೇಖರ್, ಬಂಟ್ವಾಳ ಅಗ್ನಿಶಾಮಕದಳದ ಠಾಣಾಧಿಕಾರಿ ವಿ.ಸುಂದರ್, ಪ್ರಮುಖ ಅಗ್ನಿಶಾಮಕ ಜಯ, ಚಾಲಕ ಕಿರಣ್ಕುಮಾರ್ ಅಗ್ನಿಶಾಮಕರಾದ ಲೋಹಿತ್, ಪ್ರಸಾದ್, ಗ್ರಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಅಣುಕು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಜೇಸಿಐ ಅಧ್ಯಕ್ಷ ಸಂತೋಷ್ ಜೈನ್, ಕಾರ್ಯದರ್ಶಿ ಡಾ. ಬಾಲಕೃಷ್ಣ, ನಿಕಟಪೂರ್ವಾಧ್ಯಕ್ಷ ಲೋಕೇಶ್ ಸುವರ್ಣ, ಕಾರ್ಯಕ್ರಮ ನಿರ್ದೇಶಕ ಕೀರ್ತಿರಾಜ್, ಕಿಶೋರ್ ಕುಲಾಲ್, ಸದಸ್ಯರಾದ ಸದಾನಂದ ಬಂಗೇರ, ಯತೀಶ್ ಕರ್ಕೇರಾ, ಕಾಲೇಜಿನ ಎನ್ಎಸ್ಎಸ್ ಘಟಕಾಧಿಕಾರಿ ಹೈದರ್ ಆಲಿ ಹಾಜರಿದ್ದರು. ಕಾಲೇಜಿನ ಪ್ರಾಂಶುಪಾಲ ಗಿರೀಶ್ ಭಟ್ ಸ್ವಾಗತಿಸಿದರು, ಜೇಸಿ ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ವಂದಿಸಿದರು.

See also  ಧರ್ಮಸ್ಥಳಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು