News Kannada
Saturday, September 24 2022

ಕರಾವಳಿ

ಲೇಡಿಸ್ ಹಾಸ್ಟೆಲ್ ತೆರೆದುಕೊಂಡರೂ ವಿದ್ಯಾರ್ಥಿನಿಯರು ವಾಸ್ತವ್ಯ ಹೂಡುವಂತಿಲ್ಲ - 1 min read

Photo Credit :

ಲೇಡಿಸ್ ಹಾಸ್ಟೆಲ್ ತೆರೆದುಕೊಂಡರೂ ವಿದ್ಯಾರ್ಥಿನಿಯರು ವಾಸ್ತವ್ಯ ಹೂಡುವಂತಿಲ್ಲ

ಕಾಸರಗೋಡು: ಕಾಸರಗೋಡು ಬಿಎಡ್ ಕಾಲೇಜಿನ ಹೆಣ್ಮಕ್ಕಳ ಹಾಸ್ಟೆಲ್ ಕೊನೆಗೂ ತೆರೆದುಕೊಂಡರೂ ವಿದ್ಯಾರ್ಥಿನಿಯರು ಇಲ್ಲಿ ವಾಸ್ತವ್ಯ ಹೂಡುವಂತಿಲ್ಲ. ಯಾವುದೇ ರೀತಿಯ ಭದ್ರತೆ ಇಲ್ಲ. ಇದರಿಂದ ವಿದ್ಯಾರ್ಥಿನಿಯರು ವಾಸ್ತವ್ಯಕ್ಕೆ ಹಿಂದೇಟು ಹಾಕಿದ್ದಾರೆ.

ಕಾಲೇಜಿನ ಪಕ್ಕದಲ್ಲೇ ಹಾಸ್ಟೆಲ್ ನಿರ್ಮಿಸಲಾಗಿದ್ದು, ಆದರೆ ಕಾಡು, ಪೊದೆಗಳ ನಡುವೆ ಈ ಹಾಸ್ಟೆಲ್ ತಲೆ ಎತ್ತಿದೆ. ಹಾಸ್ಟೆಲ್ ಕಟ್ಟಡಕ್ಕೆ ಆವರಣಗೋಡೆ ನಿರ್ಮಿಸಿಲ್ಲ.  ಹಾಸ್ಟೆಲ್ ಪರಿಸರದಲ್ಲಿ ಬೀದಿ ದೀಪ ಇಲ್ಲ. ಸುತ್ತಲೂ ಕಾಡು, ಬೃಹತ್ ಹೊಂಡಗಳಿದ್ದು, ಕೇವಲ ಕಾಟಾಚಾರಕ್ಕೆ ಎಂಬಂತೆ ಈ ಹಾಸ್ಟೆಲ್ ನಿರ್ಮಿಸಲಾಗಿದೆ. ಈ ಕಟ್ಟಡ ಎರಡು ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತು. ಆದರೆ ಸಮರ್ಪಕವಾದ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ. ಎಂಸಿಎ,  ಬಿಎಡ್, ಎಂಬಿಎ ಕೋರ್ಸ್ ಗಳಿಗಾಗಿ  200 ಕ್ಕೂ ಅಧಿಕ  ವಿದ್ಯಾರ್ಥಿಗಳು ಇಲ್ಲಿ  ಕಲಿಯುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ದೂರದೂರಿನವರಾಗಿದ್ದಾರೆ. ಕಣ್ಣೂರು ಸೇರಿದಂತೆ ಹಲವು ದೂರದ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

ಆದರೆ ಇವರಿಗೆ ದಿನಂಪ್ರತಿ ಬಂದು ತೆರಳಲು ಸಾಧ್ಯವಾಗುತ್ತಿಲ್ಲ. ಬಹುತೇಕ ವಿದ್ಯಾ ರ್ಥಿಗಳು ಕಷ್ಟ – ನಷ್ಟ ಸಹಿಸಿ ಇಲ್ಲಿಗೆ ತಲಪುತ್ತಿದ್ದಾರೆ. ಹಲವು ಪ್ರತಿಭಟನೆ ಬಳಿಕ ಕೊನೆಗೂ ಹಾಸ್ಟೆಲ್ ಉದ್ಘಾಟನೆಗೊಂಡಿದೆ. ಆದರೆ  ವಿದ್ಯಾರ್ಥಿನಿಯರಿಗೆ ವಾಸ್ತವ್ಯ ಹೂಡಲು  ಅಸಾಧ್ಯ ಎನ್ನಬಹುದು. ಭದ್ರತೆ ಇಲ್ಲದ ಈ ಹಾಸ್ಟೆಲ್ ನಲ್ಲಿ  ವಾಸ್ತವ್ಯ ನಡೆಸಲು ಸಾಧ್ಯ ಇಲ್ಲ ಎಂಬ ತೀರ್ಮಾನಕ್ಕೆ ವಿದ್ಯಾರ್ಥಿನಿಯರು ಬಂದಿದ್ದಾರೆ. ಈ ಕಾಲೇಜು ಆವರಣದೊಳಗೆ ಸಮಾಜದ್ರೋಹಿಗಳು ಕಿರುಕುಳ ನಡೆಯುತ್ತಲೇ ಇದೆ. ಇದರಿಂದ ಯಾವುದೇ ಭದ್ರತೆ ಇಲ್ಲದ ಈ ಹಾಸ್ಟೆಲ್ ನಲ್ಲಿ ವಾಸ್ತವ್ಯ ನಡೆಸುವುದೇ ಸವಾಲಿನ ಪ್ರಶ್ನೆಯಾಗಿ ಪರಿಣಮಿಸಿದೆ.

ಜಿಲ್ಲೆಯ ಏಕೈಕ ಸರಕಾರಿ  ಬಿಎಡ್ ಕಾಲೇಜು ಒಂದಲ್ಲ ಹತ್ತಕ್ಕೂ ಅಧಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಮುಚ್ಚುವ ಹಂತಕ್ಕೂ ಈ ಕಾಲೇಜು ಬಂದು ತಲುಪಿದೆ. ಈ ಕಾಲೇಜನ್ನು ಮುಚ್ಚಲು ಹುನ್ನಾರ ನಡೆಯುತ್ತಿದೆ. ಖಾಸಗಿ ಕಾಲೇಜುಗಳ ಲಾಬಿ ಇದರ ಹಿಂದೆ ಅಡಗಿದೆಯೇ ಎಂಬ ಸಂಶಯ ಕೂಡಾ ಉಂಟಾಗುತ್ತಿದೆ. ಕೆಲ ವರ್ಷಗಳಿಂದ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳಿಗೆ ಅಧ್ಯಾಪಕ ತರಬೇತಿ ಪಡೆಯುತ್ತಿರುವ  ಈ ಕೇಂದ್ರ ಕಣ್ಣೂರು ವಿಶ್ವ ವಿದ್ಯಾನಿಲಯದಡಿ ಕಾರ್ಯಾಚರಿಸುತ್ತಿದೆ. ಕಾಸರಗೋಡು ನಗರದಿಂದ ಐದು ಕಿ.ಮೀ ದೂರದ ವಿದ್ಯಾನಗರ ಚಾಲದಲ್ಲಿ ಈ ಕ್ಯಾ೦ಪಸ್ ಕಾರ್ಯಾಚರಿಸುತ್ತಿದ್ದು, ಈ ಅವ್ಯವಸ್ಥೆ ಜಿಲ್ಲೆ ಕನ್ನಡ ಬಿಎಡ್ ವಿದ್ಯಾರ್ಥಿಗಳ  ಭವಿಷ್ಯದ ಮೇಲೆ ಪರಿಣಾಮ ಬೀರತೊಡಗಿದೆ.

ಇದರ ಜೊತೆಗೆ ವಿದ್ಯಾರ್ಥಿ ವೇತನಕ್ಕೂ ಕತ್ತರಿ ಬಿದ್ದಿದೆ. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೂಡಾ ಲಭಿಸುತ್ತಿಲ್ಲ. ಇದರಿಂದ ಕೆಲ ವಿದ್ಯಾರ್ಥಿಗಳು ಶಿಕ್ಷಣ ಪಡೆಯದ ಸ್ಥಿತಿ ತಲೆದೋರುತ್ತಿದೆ. ಕ್ಯಾ೦ಪಸ್ ಸುತ್ತ ಆವರಣ ಗೋಡೆ, ಮೈದಾನ ವ್ಯವಸ್ಥೆ , ಕಾಲೇಜಿನಲ್ಲಿ ಅಗತ್ಯವಾಗಿರುವ ಪ್ರಯೋಗಾಲಯ ವ್ಯವಸ್ಥೆಗಳು ಇಷ್ಟು ವರ್ಷ ಕಳೆದರೂ ಕಲ್ಪಿಸಿಲ್ಲ. ಇದರ ಜೊತೆಗೆ ಪ್ರಧಾನ ರಸ್ತೆಯಿಂದ ಮೂರು  ಕಿ.ಮೀ ನಷ್ಟು ನಡೆದು ವಿದ್ಯಾರ್ಥಿಗಳು ಇಲ್ಲಿಗೆ ತಲುಪಬೇಕು . ಸೂಕ್ತ ಬಸ್ಸು ವ್ಯವಸ್ಥೆ ಕೂಡಾ ಇಲ್ಲ.

See also  ಸುಳ್ಯ ಕ್ಷೇತ್ರದಲ್ಲಿ 18,755 ಮತದಾರರ ಹೆಚ್ಚಳ

ವ್ಯವಸ್ಥೆ ಕಲ್ಪಿಸದೆ ವಿದ್ಯಾರ್ಥಿಗಳ  ಸಂಖ್ಯೆ  ಕುಗ್ಗಿಸಿ, ವಿದ್ಯಾರ್ಥಿಗಳ ಕೊರತೆ ಎಂಬ ನೆಪದಿಂದ ಕ್ಯಾ೦ಪಸ್ ಮುಚ್ಚುವ ಹುನ್ನಾರ ನಡೆಯುತ್ತಿದೆ ಎನ್ನಲಾಗಿದೆ. ಕಣ್ಣೂರು ವಿಶ್ವವಿದ್ಯಾನಿಲಯದ ಇತರ ಕ್ಯಾ೦ಪಸ್ ಗಳಿಗೆ ಲಭಿಸುವ ಸವಲತ್ತು. ಕಾಸರಗೋಡಿನ ಏಕೈಕ ಕ್ಯಾ೦ಪಸ್ ಗೆ ಲಭಿಸದಿರುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಒಟ್ಟಿನಲ್ಲಿ ಕಾಸರಗೋಡು ಬಿಎಡ್  ಕೇಂದ್ರದ  ಸಮಸ್ಯೆ ಕೊನೆಯಾಗುತ್ತಿಲ್ಲ. ಕಾಲೇಜಿನ ನಿರ್ಲಕ್ಷದ ಜೊತೆಗೆ ಇದೀಗ ಕಾಟಾಚಾರಕ್ಕೆ ಎಂಬಂತೆ  ಹಾಸ್ಟೆಲ್ ಕಟ್ಟಡ  ನಿರ್ಮಿಸಲಾಗಿದ್ದು,  ಹಲವು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಹಾಸ್ಟೆಲ್ ಕಟ್ಟಡ ಮೂಲೆಗುಂಪಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು